AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cristiano Ronaldo: 3 ಕೋಟಿ ಚಂದಾದಾರರು! ಯೂಟ್ಯೂಬ್ ಚಾನೆಲ್ ಆರಂಭಿಸಿದ 12 ಗಂಟೆಗಳೊಳಗೆ 3 ಪ್ಲೇ ಬಟನ್ ಪಡೆದ ರೊನಾಲ್ಡೊ

Cristiano Ronaldo: ರೊನಾಲ್ಡೊ ಆಗಸ್ಟ್ 21 ರಂದು ಅಂದರೆ ಕೇವಲ 2 ದಿನಗಳ ಹಿಂದೆ ‘ಯುಆರ್ ಕ್ರಿಸ್ಟಿಯಾನೋ' ಎಂಬ ಹೆಸರಿನ ಅಧಿಕೃತ ಯೂಟ್ಯೂಬ್ ಚಾನೆಲ್ ಆರಂಭಿಸಿದರು. ಈ ಸುದ್ದಿ ಎಷ್ಟು ವೇಗವಾಗಿ ಹಬ್ಬಿತೋ, ಅಷ್ಟೇ ವೇಗವಾಗಿ ಈ ಚಾನೆಲ್​ಗೆ ಚಂದಾದಾರರಾಗುವವರ ಸಂಖ್ಯೆಯೂ ಹೆಚ್ಚಾಯಿತು. ಕೇವಲ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ರೊನಾಲ್ಡೊ ಯೂಟ್ಯೂಬ್ ಚಾನೆಲ್ 20 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿತ್ತು.

Cristiano Ronaldo: 3 ಕೋಟಿ ಚಂದಾದಾರರು! ಯೂಟ್ಯೂಬ್ ಚಾನೆಲ್ ಆರಂಭಿಸಿದ 12 ಗಂಟೆಗಳೊಳಗೆ 3 ಪ್ಲೇ ಬಟನ್ ಪಡೆದ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ
ಪೃಥ್ವಿಶಂಕರ
|

Updated on:Aug 23, 2024 | 4:11 PM

Share

ಪೋರ್ಚುಗೀಸ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿದ್ದಾರೆ. ಲಕ್ಷ ಚಂದಾದಾರರನ್ನು ಪಡೆಯಲು ತಿಂಗಳು ಗಟ್ಟಲೇ ಕಾಯಬೇಕಾದ ಸನ್ನಿವೇಶದ ಹೊರತಾಗಿಯೂ ಈ ಫುಟ್ಬಾಲ್ ಲೆಜೆಂಡ್ ಕೆಲವೇ ಕೆಲವು ಗಂಟೆಗಳಲ್ಲಿ ಬರೋಬ್ಬರಿ 30 ಮಿಲಿಯನ್​ಗೂ ಅಂದರೆ 3 ಕೋಟಿಗೂ ಅಧಿಕ ಸಂಖ್ಯೆಯ ಚಂದಾದಾರರನ್ನು ಪಡೆದುಕೊಂಡಿದ್ದಾರೆ. ವಾಸ್ತವವಾಗಿ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ‘ಯುಆರ್ ಕ್ರಿಸ್ಟಿಯಾನೋ’ ಎಂಬ ಯೂಟ್ಯೂಬ್ ಚಾನೆಲ್​ವೊಂದನ್ನು ಆರಂಭಿಸಿದ್ದಾರೆ. ಈ ಯೂಟ್ಯೂಬ್ ಚಾನೆಲ್ ಆರಂಭಿಸಿ ಕೆಲವೇ ಗಂಟೆಗಳಾಗಿದ್ದರೂ, ಚಂದಾದಾರರ ವಿಷಯದಲ್ಲಿ ರೊನಾಲ್ಡೊ ಒಂದರ ಹಿಂದೆ ಒಂದರಂತೆ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಇದರ ಜೊತೆಗೆ ರೊನಾಲ್ಡೊ ಇದೀಗ ಯೂಟ್ಯೂಬ್​ನಲ್ಲಿ ಮಿಸ್ಟರ್ ಬೀಸ್ಟ್ ಅವರ ದೊಡ್ಡ ದಾಖಲೆಯನ್ನು ಸಹ ಮುರಿದಿದ್ದಾರೆ.

ಕಡಿಮೆ ಅವಧಿಯಲ್ಲಿ ಅಧಿಕ ಚಂದಾದಾರರು

ರೊನಾಲ್ಡೊ ಆಗಸ್ಟ್ 21 ರಂದು ಅಂದರೆ ಕೇವಲ 2 ದಿನಗಳ ಹಿಂದೆ ‘ಯುಆರ್ ಕ್ರಿಸ್ಟಿಯಾನೋ’ ಎಂಬ ಹೆಸರಿನ ಅಧಿಕೃತ ಯೂಟ್ಯೂಬ್ ಚಾನೆಲ್ ಆರಂಭಿಸಿದರು. ಈ ಸುದ್ದಿ ಎಷ್ಟು ವೇಗವಾಗಿ ಹಬ್ಬಿತೋ, ಅಷ್ಟೇ ವೇಗವಾಗಿ ಈ ಚಾನೆಲ್​ಗೆ ಚಂದಾದಾರರಾಗುವವರ ಸಂಖ್ಯೆಯೂ ಹೆಚ್ಚಾಯಿತು. ಕೇವಲ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ರೊನಾಲ್ಡೊ ಯೂಟ್ಯೂಬ್ ಚಾನೆಲ್ 20 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದ್ದು, ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಇಷ್ಟು ಸಂಖ್ಯೆಯ ಚಂದಾದಾರರನ್ನು ಪಡೆದ ಮೊದಲ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಪಾತ್ರರಾಗಿದ್ದಾರೆ.

ಮಿಸ್ಟರ್ ಬೀಸ್ಟ್ ದಾಖಲೆ ಉಡೀಸ್

ಯೂಟ್ಯೂಬ್‌ನಲ್ಲಿ ವೇಗವಾಗಿ 20 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದ ದಾಖಲೆಯು ಈ ಹಿಂದೆ ಮಿಸ್ಟರ್ ಬೀಸ್ಟ್ ಹೆಸರಿನಲ್ಲಿತ್ತು. ಮಿಸ್ಟರ್ ಬೀಸ್ಟ್ ಎಂದೇ ಖ್ಯಾತರಾಗಿರುವ ಜಿಮ್ಮಿ ಡೊನಾಲ್ಡ್ ಸನ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಆರಂಭಿಸಿದ ಎರಡೇ ವರ್ಷಗಳಲ್ಲಿ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಇದೀಗ ಈ ವಿಚಾರದಲ್ಲಿ ರೊನಾಲ್ಡೊ, ಜಿಮ್ಮಿ ಡೊನಾಲ್ಡ್ ಸನ್ ಅವರನ್ನು ಹಿಂದಿಕ್ಕಿದ್ದಾರೆ.

12 ಗಂಟೆಗಳ ಒಳಗೆ ಡೈಮಂಡ್ ಪ್ಲೇ ಬಟನ್

ಇಷ್ಟೇ ಅಲ್ಲದೆ ರೊನಾಲ್ಡೊ, ಯೂಟ್ಯೂಬ್ ಚಾನೆಲ್ ಆರಂಭಿಸಿದ ಕೇವಲ 22 ನಿಮಿಷಗಳಲ್ಲಿ ಬೆಳ್ಳಿ, 90 ನಿಮಿಷಗಳಲ್ಲಿ ಗೋಲ್ಡನ್ ಮತ್ತು 12 ಗಂಟೆಗಳಲ್ಲಿ ಡೈಮಂಡ್ ಪ್ಲೇ ಬಟನ್ ಪಡೆದಿದ್ದಾರೆ. ವಾಸ್ತವವಾಗಿ ಒಬ್ಬ ಯೂಟ್ಯೂಬರ್‌ 1 ಲಕ್ಷ ಚಂದಾದಾರರನ್ನು ಪಡೆದರೆ ಸಿಲ್ವರ್ ಪ್ಲೇ ಬಟನ್, 1 ಮಿಲಿಯನ್ ಅಂದರೆ 10 ಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಪಡೆದರೆ ಗೋಲ್ಡ್ ಪ್ಲೇ ಬಟನ್ ಮತ್ತು 10 ಮಿಲಿಯನ್ ಅಂದರೆ 1 ಕೋಟಿ ಸಬ್‌ಸ್ಕ್ರೈಬರ್‌ಗಳನ್ನು ಪಡೆದರೆ ಡೈಮಂಡ್ ಪ್ಲೇ ಬಟನ್ ಅನ್ನು ಯೂಟ್ಯೂಬ್​ನಿಂದ ಪ್ರಶಸ್ತಿ ರೂಪದಲ್ಲಿ ನೀಡಲಾಗುತ್ತದೆ.

ಇದೀಗ ರೊನಾಲ್ಡೊ, ಕೇವಲ 12 ಗಂಟೆಗಳಲ್ಲಿ ಯೂಟ್ಯೂಬ್‌ ನೀಡುವ ಈ ಮೂರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಯೂಟ್ಯೂಬ್​ನಿಂದ ಈ ಪ್ರಶಸ್ತಿ ಸಿಕ್ಕಿದನ್ನು ರೊನಾಲ್ಡೊ ತಮ್ಮ ಪುತ್ರಿಯರೊಂದಿಗೆ ಹಂಚಿಕೊಂಡಿದ್ದು, ಇದರ ವಿಡಿಯೋವನ್ನು ರೊನಾಲ್ಡೊ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರೊನಾಲ್ಡೊ ಅವರ ಚಾನೆಲ್‌ನಲ್ಲಿ ಇದುವರೆಗೆ 19 ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ.

ರೊನಾಲ್ಡೊ ಒಂದು ದಿನದ ಆದಾಯ ಎಷ್ಟು?

ವರದಿಗಳ ಪ್ರಕಾರ, ಯೂಟ್ಯೂಬರ್‌ಗಳಿಗೆ 1 ಮಿಲಿಯನ್ (10 ಲಕ್ಷ) ವೀಕ್ಷಣೆಗಾಗಿ ಸುಮಾರು 6 ಸಾವಿರ ಡಾಲರ್ (ಸುಮಾರು 5 ಲಕ್ಷ ರೂ.) ನೀಡಲಾಗುತ್ತದೆ. ಇದರರ್ಥ ಒಂದು ದಿನದಲ್ಲಿ ರೊನಾಲ್ಡೊ ಸುಮಾರು $300,000 ಅಂದರೆ ರೂ.2.51 ಕೋಟಿ ರೂಗಳನ್ನು ಸಂಪಾಧಿಸಿದ್ದಾರೆ ಎಂದು ವರದಿಗಳು ಹೇಳುತ್ತವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Fri, 23 August 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ