AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಳಿಕೆಯಲ್ಲಿ ಮೊದಲ ದಿನವೇ ಮಕಾಡೆ ಮಲಗಿದ ‘ಸಿಕಂದರ್’; ಸಲ್ಮಾನ್-ರಶ್ಮಿಕಾ ಸಿನಿಮಾಗೆ ಸೋಲು

Sikandar Box office Collection: ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯಂತೆ ಗಳಿಕೆ ಮಾಡಲು ವಿಫಲವಾಗಿದೆ. ಮೊದಲ ದಿನ ಕೇಲವೇ ಕೋಟಿ ರೂಪಾಯಿ ಗಳಿಕೆಯಾಗಿದ್ದು, 200 ಕೋಟಿ ರೂಪಾಯಿ ಬಜೆಟ್‌ಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ಕಳಪೆ ವಿಮರ್ಶೆಗಳು ಮತ್ತು ನಿರಾಶಾದಾಯಕ ಕಲೆಕ್ಷನ್‌ಗಳು ಚಿತ್ರದ ಯಶಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ.

ಗಳಿಕೆಯಲ್ಲಿ ಮೊದಲ ದಿನವೇ ಮಕಾಡೆ ಮಲಗಿದ ‘ಸಿಕಂದರ್’; ಸಲ್ಮಾನ್-ರಶ್ಮಿಕಾ ಸಿನಿಮಾಗೆ ಸೋಲು
ರಶ್ಮಿಕಾ-ಸಲ್ಮಾನ್
ರಾಜೇಶ್ ದುಗ್ಗುಮನೆ
|

Updated on:Mar 31, 2025 | 7:24 AM

Share

ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಸಿಕಂದರ್’ ಅತಿ ಕೆಟ್ಟ ವಿಮರ್ಶೆ ಪಡೆದಿದೆ. ಕೊಟ್ಟ ದುಡ್ಡಿಗೆ ನಷ್ಟವೇ ಆಗಿದೆ ಎಂದು ಸ್ವತಃ ಅಭಿಮಾನಿಗಳೇ ಹೇಳಿಕೊಳ್ಳುತ್ತಾ ಇದ್ದಾರೆ. ಸಿನಿಮಾನ ಜನರು ಇಷ್ಟಪಟ್ಟಿಲ್ಲ ಎಂಬುದಕ್ಕೆ ಕಲೆಕ್ಷನ್ ಲೆಕ್ಕವೇ ಸಾಕ್ಷಿ. ಹೌದು, ‘ಸಿಕಂದರ್’ (Sikendar) ಮೊದಲ ದಿನದ ಕಲೆಕ್ಷನ್ ಲೆಕ್ಕ ಹೊರ ಬಂದಿದೆ. ಸಲ್ಮಾನ್ ಖಾನ್ ಅವರ ಸಿನಿಮಾ ಹೀನಾಯ ಕಲೆಕ್ಷನ್ ಮಾಡಿರೋದು ಇಲ್ಲಿ ಸ್ಪಷ್ಟವಾಗಿದೆ. ಹಾಕಿದ ಬಜೆಟ್ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.

ಸಲ್ಮಾನ್ ಖಾನ್ ಅವರ ಸಿನಿಮಾಗಳು ಇತ್ತೀಚೆಗೆ ಸೋಲು ಕಂಡಿದ್ದೇ ಹೆಚ್ಚು. ಟ್ರೇಲರ್ ನೋಡಿದ್ದ ಅನೇಕರು ‘ಸಿಕಂದರ್’ ಗೆಲ್ಲಬಹುದು ಎಂಬ ನಿರೀಕ್ಷೆ ಹೊರಹಾಕಿದ್ದರು. ಆದರೆ, ನಿರ್ದೇಶಕ ಎಆರ್​ ಮುರುಗದಾಸ್ ಅವರ ಚಮತ್ಕಾರ ಇಲ್ಲಿ ಕೆಲಸ ಮಾಡಿಲ್ಲ. ಈ ಸಿನಿಮಾ ಮೊದಲ ದಿನ ಕೇವಲ 26 ಕೋಟಿ ರೂಪಾಯಿ ಗಳಿಕೆ ಮಾಡಿ ತೃಪ್ತಿಪಟ್ಟುಕೊಂಡಿದೆ.

ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದ್ದ ಕಾಲ ಒಂದಿತ್ತು. ಆದರೆ, ಇತ್ತೀಚೆಗೆ ಅವರ ಚಿತ್ರಗಳು ಮಂಕಾಗಿವೆ. ಯಾವುದೇ ಬಿಗ್ ಬಜೆಟ್ ಬಾಲಿವುಡ್ ಚಿತ್ರಕ್ಕೆ ಒಳ್ಳೆಯ ವಿಮರ್ಶೆ ಸಿಕ್ಕರೆ ಅಂಥ ಸಿನಿಮಾಗಳು ಮೊದಲ ದಿನ 40-50 ಕೋಟಿ ರೂಪಾಯಿ ಬಾಚಿಕೊಳ್ಳುತ್ತವೆ. ಆದರೆ, ಸಲ್ಲು ಸಿನಿಮಾಗೆ ಆ ರೀತಿ ಆಗಿಲ್ಲ. 26 ಕೋಟಿ ರೂಪಾಯಿ ದೊಡ್ಡ ಮೊತ್ತವೇ ಆದರೂ ಸಲ್ಲು ಖದರ್​ಗೆ ಈ ಸಂಖ್ಯೆ ಕಡಿಮೆಯೇ ಸರಿ.

ಇದನ್ನೂ ಓದಿ
Image
ತಂದೆ ತಾಯಿಯ ಲೈಂಗಿಕತೆ ಬಗ್ಗೆ ಮಾತಾಡಿದ್ದ ರಣ್ವೀರ್ ಅಲಹಾಬಾದಿಯಾ ಕಮ್​ಬ್ಯಾಕ್
Image
ಮೊದಲ ದಿನವೇ ಸಿಕಂದರ್ ಸಿನಿಮಾ ಲೀಕ್; ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಶಾಕ್
Image
‘ಸಿಖಂಧರ್’ ಸಿನಿಮಾ ನೋಡಿದ ಪ್ರೇಕ್ಷಕರು ನೀಡಿದ ತೀರ್ಪೇನು?
Image
ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?

ಇದನ್ನೂ ಓದಿ: ಮೊದಲ ದಿನವೇ ಸಿಕಂದರ್ ಸಿನಿಮಾ ಲೀಕ್; ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಶಾಕ್

ಇನ್ನು ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಆಗಿದ್ದು ಭಾನುವಾರ. ರಜಾ ದಿನ. ಈ ದಿನ ಸಿನಿಮಾ ರಿಲೀಸ್ ಆದ ಹೊರತಾಗಿಯೂ ಚಿತ್ರಕ್ಕೆ ಅಂಥ ದೊಡ್ಡ ಗಳಿಕೆ ಏನೂ ಆಗಿಲ್ಲ. ಇನ್ನು, ಚಿತ್ರದ ಬಜೆಟ್ ಬರೋಬ್ಬರಿ 200 ಕೋಟಿ ರೂಪಾಯಿ. ಹೀಗಾಗಿ, ಸಿನಿಮಾ ಲಾಭ ಮಾಡಬೇಕು ಎಂದರೆ ಚಿತ್ರ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುವ ಅವಶ್ಯಕತೆ ಇದೆ. ಇಂದು ಈದ್ ಪ್ರಯುಕ್ತ ಸಿನಿಮಾ ಒಂದು ಹಂತದಲ್ಲಿ ಹೆಚ್ಚಿನ ಗಳಿಕೆ ಮಾಡಬಹುದು. ಆ ಬಳಿಕ ಸಿನಿಮಾ ಗಳಿಕೆ ಡಲ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:03 am, Mon, 31 March 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ