AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥೈಲ್ಯಾಂಡ್ ಪ್ರಧಾನಿಯಿಂದ ಪಿಎಂ ಮೋದಿಗೆ ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್ ಉಡುಗೊರೆ

ಥೈಲ್ಯಾಂಡ್ ಪ್ರಧಾನಿಯಿಂದ ಪಿಎಂ ಮೋದಿಗೆ ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್ ಉಡುಗೊರೆ

ಸುಷ್ಮಾ ಚಕ್ರೆ
|

Updated on: Apr 03, 2025 | 5:01 PM

ಥೈಲ್ಯಾಂಡ್​ನ ಬ್ಯಾಂಕಾಕ್‌ನಲ್ಲಿರುವ ಭಾರತೀಯ ಸಮುದಾಯವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಾರ್ಥನೆಯ ಪಠಣದೊಂದಿಗೆ ಸ್ವಾಗತಿಸಿತು. ಇದು ಎರಡೂ ದೇಶಗಳ ನಡುವೆ ಬೇರೂರಿರುವ ಸಾಂಸ್ಕೃತಿಕ ಬಾಂಧವ್ಯವನ್ನು ತೋರಿಸುತ್ತದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಥಾಯ್ಲೆಂಡ್ ಪ್ರಧಾನಿ 'ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್' ಅನ್ನು ಉಡುಗೊರೆಯಾಗಿ ನೀಡಿದರು. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜತಾಂತ್ರಿಕತೆಯ ಮಹತ್ವದ ಕ್ಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಥಾಯ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರು "ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್" ಪ್ರದಾನ ಮಾಡಿದರು.

ನವದೆಹಲಿ, ಏಪ್ರಿಲ್ 3: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಥೈಲ್ಯಾಂಡ್ ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರು “ದಿ ವರ್ಲ್ಡ್ ಟಿಪಿಟಕ: ಸಜ್ಜಯ ಫೋನೆಟಿಕ್ ಎಡಿಷನ್”ವನ್ನು ಉಡುಗೊರೆಯಾಗಿ ನೀಡಿದರು. ಟಿಪಿಟಕ (ಪಾಲಿ ಭಾಷೆ) ಅಥವಾ ತ್ರಿಪಿಟಕ (ಸಂಸ್ಕೃತ ಭಾಷೆ) ಭಗವಾನ್ ಬುದ್ಧನ ಬೋಧನೆಗಳ ಸಂಕಲನವಾಗಿದ್ದು, ಇದು 108 ಸಂಪುಟಗಳನ್ನು ಒಳಗೊಂಡಿದೆ. ಇದನ್ನು ಪ್ರಮುಖ ಬೌದ್ಧ ಧರ್ಮಗ್ರಂಥವೆಂದು ಪರಿಗಣಿಸಲಾಗಿದೆ. ಇಂದು ಪ್ರಧಾನಿ ಮೋದಿ ಅವರಿಗೆ ನೀಡಲಾದ ಈ ಗ್ರಂಥ ಪಾಲಿ ಮತ್ತು ಥಾಯ್ ಲಿಪಿಗಳಲ್ಲಿ ಬರೆಯಲಾದ ಸೂಕ್ಷ್ಮವಾಗಿ ರಚಿಸಲಾದ ಆವೃತ್ತಿಯಾಗಿದೆ. ಈ ವಿಶೇಷ ಆವೃತ್ತಿಯನ್ನು 2016ರಲ್ಲಿ ಥೈಲ್ಯಾಂಡ್ ಸರ್ಕಾರವು ರಾಜ ಭೂಮಿಬೋಲ್ ಅಡುಲ್ಯದೇಜ್ (ರಾಮ IX) ಮತ್ತು ರಾಣಿ ಸಿರಿಕಿತ್ ಅವರ 70 ವರ್ಷಗಳ ಆಳ್ವಿಕೆಯ ಸ್ಮರಣಾರ್ಥವಾಗಿ ವಿಶ್ವ ಟಿಪಿಟಕ ಯೋಜನೆಯ ಭಾಗವಾಗಿ ಪ್ರಕಟಿಸಿತು.

ಪ್ರಧಾನಿ ಮೋದಿ ಅವರಿಗೆ ಟಿಪಿಟಕವನ್ನು ನೀಡಿದ್ದು ಭಾರತದ ಆಧ್ಯಾತ್ಮಿಕ ನಾಯಕತ್ವ ಮತ್ತು ಬೌದ್ಧ ರಾಷ್ಟ್ರಗಳೊಂದಿಗಿನ ಅದರ ಶಾಶ್ವತ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಪ್ರಧಾನಿ ಮೋದಿ ಅವರಿಗೆ ಟಿಪಿಟಕವನ್ನು ನೀಡುವುದು ಭಾರತದ ಆಧ್ಯಾತ್ಮಿಕ ನಾಯಕತ್ವ ಮತ್ತು ಬೌದ್ಧ ರಾಷ್ಟ್ರಗಳೊಂದಿಗಿನ ಅದರ ಶಾಶ್ವತ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ