VaccineDrive: ಲಸಿಕಾ ಅಭಿಯಾನಕ್ಕೆ 104 ದಿನ; ಇಲ್ಲಿಯವರೆಗೆ 15ಕೋಟಿಗಿಂತಲೂ ಹೆಚ್ಚು ಕೊವಿಡ್ ಲಸಿಕೆ ವಿತರಣೆ
Largest Vaccine Drive: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ 24ಗಂಟೆಗಳಲ್ಲಿ 21 ಲಕ್ಷಕ್ಕಿಂತ ಹೆಚ್ಚು ಡೋಸ್ ವಿತರಣೆ ಆಗಿದೆ. ಇಲ್ಲಿಯವರೆಗೆ ದೇಶದಲ್ಲಿ 15 ಕೋಟಿಗಿಂತಲೂ ಹೆಚ್ಚು ಡೋಸ್ ಕೊವಿಡ್ ಲಸಿಕೆ ವಿತರಣೆ ಆಗಿದೆ.
ದೆಹಲಿ: ದೇಶದಾದ್ಯಂತ ಕೊವಿಡ್ ಲಸಿಕೆ ವಿತರಣೆಯ ಮೂರನೇ ಹಂತ ಮೇ 1ರಂದು ಆರಂಭವಾಗಲಿದೆ. 18 ವರ್ಷದಿಂದ ಮೇಲ್ಪಟ್ಟ 45 ವರ್ಷದವರೆಗಿರುವವರಿಗೆ ಮೇ1ರಿಂದ ಲಸಿಕೆ ನೀಡಲಾಗುವುದು. ಲಸಿಕೆ ನೀಡುವ ಕಾರ್ಯಕ್ರಮ ದೇಶದಲ್ಲಿ ಆರಂಭವಾಗಿ 103 ದಿನಗಳು ಕಳೆದಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ 24ಗಂಟೆಗಳಲ್ಲಿ 21 ಲಕ್ಷಕ್ಕಿಂತ ಹೆಚ್ಚು ಡೋಸ್ ವಿತರಣೆ ಆಗಿದೆ. ಇಲ್ಲಿಯವರೆಗೆ ದೇಶದಲ್ಲಿ 15 ಕೋಟಿಗಿಂತಲೂ ಹೆಚ್ಚು ಡೋಸ್ ಕೊವಿಡ್ ಲಸಿಕೆ ವಿತರಣೆ ಆಗಿದೆ. 2021 ಏಪ್ರಿಲ್ 29 ಬೆಳಗ್ಗೆ 7ಗಂಟೆಯವರೆಗಿನ ಅಂಕಿ ಅಂಶಗಳ ಪ್ರಕಾರ 22,07,065 ಸೆಷನ್ ಗಳಲ್ಲಿ 15,00,20,648 ಡೋಸ್ ಲಸಿಕೆ ನೀಡಲಾಗಿದೆ. ಇದರಲ್ಲಿ 93,67,520 ಆರೋಗ್ಯ ಕಾರ್ಯಕರ್ತರು(ಎಚ್ ಸಿ ಡಬ್ಲ್ಯೂ) ಮೊದಲನೇ ಡೋಸ್ ಮತ್ತು 61,47,918 ಎಚ್ ಸಿ ಡಬ್ಲ್ಯೂಗಳು ಎರಡನೇ ಡೋಸ್ ಪಡೆದಿದ್ದಾರೆ. 1,23,19,903 ಮುಂಚೂಣಿ ಕಾರ್ಯಕರ್ತರು (ಎಫ್ ಎಲ್ ಡಬ್ಲ್ಯೂ) (ಒಂದನೇ ಡೋಸ್), 66,12,789 ಎಫ್ ಎಲ್ ಡಬ್ಲ್ಯೂಗಳು(2ನೇ ಡೋಸ್), 45 ವರ್ಷ ಮೇಲ್ಪಟ್ಟ ಮತ್ತು 60 ವರ್ಷದೊಳಗಿನ 5,14,99,834 (1ನೇ ಡೋಸ್) ಹಾಗೂ 45 ರಿಂದ 60 ವರ್ಷದೊಳಗಿನ(2ನೇ ಡೋಸ್) 31,55,418, 60 ವರ್ಷ ಮೇಲ್ಪಟ್ಟ 5,10,24,886 (1ನೇ ಡೋಸ್) ಮತ್ತು 60 ವರ್ಷ ಮೇಲ್ಪಟ್ಟ 98,92,380 ಮಂದಿ(2ನೇ ಡೋಸ್) ಲಸಿಕೆ ಪಡೆದವರು ಸೇರಿದ್ದಾರೆ.
#Unite2FightCorona#LargestVaccineDrive
India’s Cumulative Vaccination Coverage has crossed the landmark of 15 Crore (15,00,20,648). https://t.co/MeHTanupJr pic.twitter.com/sgoqt5Q6Od
— Ministry of Health (@MoHFW_INDIA) April 29, 2021
#Unite2FightCorona#LargestVaccineDrive
Ten states account for 67.18% of the cumulative doses given so far in the country. pic.twitter.com/r7Rjwy7K7H
— Ministry of Health (@MoHFW_INDIA) April 29, 2021
ಲಸಿಕೆ ಅಭಿಯಾನದ 103ನೇ ದಿನವಾದ 2021 ಏಪ್ರಿಲ್ 28 ರಂದು 21,93,281 ಡೋಸ್ ಲಸಿಕೆ ನೀಡಲಾಗಿದೆ. 20,944 ಸೆಷನ್ಸ್ ಗಳಲ್ಲಿ 12,82,135 ಮಂದಿ ಮೊದಲ ಡೋಸ್ ಮತ್ತು 9,11,146 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ 2021 ಏಪ್ರಿಲ್ 28 ರಾತ್ರಿ 8 ಗಂಟೆಯವರೆಗೆ 20 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. 103 ದಿನದ ಅಂಕಿ ಅಂಶ ಪ್ರಕಾರ 14,98,77,121 ಡೋಸ್ ಲಸಿಕೆ ವಿತರಣೆ ಆಗಿದೆ.
ಇದರಲ್ಲಿ 93,66,239 ಆರೋಗ್ಯ ಕಾರ್ಯಕರ್ತರು(ಎಚ್ ಸಿ ಡಬ್ಲ್ಯೂ) ಮೊದಲನೇ ಡೋಸ್ ಮತ್ತು 61,45,854 ಎಚ್ ಸಿ ಡಬ್ಲ್ಯೂಗಳು ಎರಡನೇ ಡೋಸ್ ಪಡೆದಿದ್ದಾರೆ. 1,23,09,507 ಮುಂಚೂಣಿ ಕಾರ್ಯಕರ್ತರು (ಎಫ್ ಎಲ್ ಡಬ್ಲ್ಯೂ) (ಒಂದನೇ ಡೋಸ್), 65,99,492 ಎಫ್ ಎಲ್ ಡಬ್ಲ್ಯೂಗಳು(2ನೇ ಡೋಸ್), 45 ವರ್ಷ ಮೇಲ್ಪಟ್ಟ ಮತ್ತು 60 ವರ್ಷದೊಳಗಿನ 5,09,75,753(1ನೇ ಡೋಸ್) ಹಾಗೂ 45 ರಿಂದ 60 ವರ್ಷದೊಳಗಿನ(2ನೇ ಡೋಸ್) 31,42,239, 60 ವರ್ಷ ಮೇಲ್ಪಟ್ಟ 5,14,70,903 (1ನೇ ಡೋಸ್) ಮತ್ತು 60 ವರ್ಷ ಮೇಲ್ಪಟ್ಟ 98,67,134 ಮಂದಿ(2ನೇ ಡೋಸ್) ಲಸಿಕೆ ಪಡೆದವರು ಸೇರಿದ್ದಾರೆ.
ಒಟ್ಟು ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನದ 103ನೇ ದಿನವಾದ ಬುಧವಾರ ರಾತ್ರಿ 8 ಗಂಟೆಯವರೆಗೆ 20,49,754 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಆ ಪೈಕಿ 11,92,934 ಫಲಾನುಭವಿಗಳಿಗೆ ಮೊದಲನೇ ಡೋಸ್ ಮತ್ತು 8,57,360 ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.
(India crosses a major landmark with more than 15 Crore Cumulative Vaccination)
ಇದನ್ನೂ ಓದಿ: Coronavirus India Update: ದೇಶದಲ್ಲಿ ಒಂದೇ ದಿನ 3.79 ಲಕ್ಷ ಹೊಸ ಕೊವಿಡ್ ಪ್ರಕರಣ, 3,645 ಸಾವು
Killer Coronavirus| ಭಾರತದಲ್ಲಿ ಯುದ್ಧಗಳಲ್ಲಿ ಸತ್ತವರಿಗಿಂತ ಹೆಚ್ಚಿನ ಮಂದಿ ಕೊರೊನಾದಿಂದ ಸಾವು
Published On - 1:05 pm, Thu, 29 April 21