Killer Coronavirus| ಭಾರತದಲ್ಲಿ ಯುದ್ಧಗಳಲ್ಲಿ ಸತ್ತವರಿಗಿಂತ ಹೆಚ್ಚಿನ ಮಂದಿ ಕೊರೊನಾದಿಂದ ಸಾವು

ಈಗಾಗಲೇ ಕಸ್ಟಮ್ ಸುಂಕ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ಭಾರತದಲ್ಲಿ ಲಸಿಕೆ ಮೇಲೆ ಶೇ. 5ರಷ್ಟು ಜಿಎಸ್‌ಟಿ ಇದೆ. GST ಮನ್ನಾ ಮಾಡಿದರೆ ಲಸಿಕೆ ಕಡಿಮೆ ಬೆಲೆಗೆ ಲಭ್ಯವಾಗಲಿದೆ.

Killer Coronavirus| ಭಾರತದಲ್ಲಿ ಯುದ್ಧಗಳಲ್ಲಿ ಸತ್ತವರಿಗಿಂತ ಹೆಚ್ಚಿನ ಮಂದಿ ಕೊರೊನಾದಿಂದ ಸಾವು
Killer Coronavirus| ಭಾರತದಲ್ಲಿ ಯುದ್ಧಗಳಲ್ಲಿ ಸತ್ತವರಿಗಿಂತ ಹೆಚ್ಚಿನ ಮಂದಿ ಕೊರೊನಾದಿಂದ ಸಾವು
Follow us
ಸಾಧು ಶ್ರೀನಾಥ್​
|

Updated on: Apr 29, 2021 | 9:48 AM

ಬೆಂಗಳೂರು: ದೇಶದಲ್ಲಿ ಕೊರೊನಾ ಕಾಟ ಹಿಂದೆಂದಿಗಿಂಗತಲೂ ಭಯಾನಕವಾಗಿದೆ. ಭಾರತದಲ್ಲಿ ಯುದ್ಧಗಳಲ್ಲಿ ಸತ್ತವರಿಗಿಂತ ಹೆಚ್ಚಿನ ಮಂದಿ ಕೊರೊನಾದಿಂದ ಸಾವಿಗೀಡಾಗುತ್ತಿದ್ದಾರೆ. 1962ರ ಭಾರತ-ಚೀನಾ ಯುದ್ದದಿಂದ ಕಾರ್ಗಿಲ್ ಯುದ್ದದವರೆಗೆ ಎಂಟು ಸಾವಿರ ಯೋಧರು ಹುತಾತ್ಮರಾಗಿದ್ದಾರೆ. ಇನ್ನು, ಕಾಶ್ಮೀರದ ಹಿಂಸಾಚಾರದಿಂದ ಅಂದಾಜು 41 ಸಾವಿರ ಮಂದಿ ಮೃತಪಟ್ಟಿದ್ದಾರೆ. ನಕ್ಸಲ್ ಉಪಟಳದಿಂದ 8,100 ಮಂದಿ ಪ್ರಾಣ ತೆತ್ತಿದ್ದಾರೆ. ಆದರೆ ಈಗ ಕಳೆದೊಂದು ವರ್ಷದಲ್ಲಿ ಕೊರೊನಾ ಸೋಂಕಿನಿಂದ ಎರಡು ಲಕ್ಷಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದಾರೆ.

ಕೊರೊನಾದಿಂದ ಉದ್ಭವಿಸುತ್ತಿರುವ ಸಾವಿನಿಂದ ಭಾರತ ತತ್ತರಿಸಿದೆ. ಈ ಅನಪೇಕ್ಷಿತ ಬೆಳವಣಿಗೆಗಳ ಸಮ್ಮುಖದಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಹೆಚ್ಚಿನ ಹೂಡಿಕೆಯ ಅನಿವಾರ್ಯತೆ ಎದುರಾಗಿದೆ.

ವಿಶ್ವ ಸಂಸ್ಥೆಯ ನೆರವು ನಿರಾಕರಿಸಿದ ಭಾರತ:

ಕೊರೊನಾ ಸಂಕಷ್ಟ ಕಾಲದಲ್ಲಿ ಭಾರತವು ವಿಶ್ವ ಸಂಸ್ಥೆಯ ನೆರವನ್ನು ನಿರಾಕರಿಸಿದೆ. ಭಾರತದ ಬಳಿಯೇ ಪರಿಸ್ಥಿತಿ ಎದುರಿಸಲು ಸಮಗ್ರ ವ್ಯವಸ್ಥೆ ಇದೆ ಎಂದಿರುವ ಭಾರತ, ಈ ಹಂತದಲ್ಲಿ ವಿಶ್ವ ಸಂಸ್ಥೆಯ ನೆರವಿನ‌ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿಶ್ವ ಸಂಸ್ಥೆಯಿಂದ ಭಾರತಕ್ಕೆ ಇದುವರೆಗೂ ಯಾವುದೇ ವೈದ್ಯಕೀಯ ನೆರವು ಕಳಿಸಿಲ್ಲ. ಭಾರತಕ್ಕೆ ನೆರವಿನ ಹಸ್ತ ಚಾಚುವುದಾಗಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೇರಾಸ್ ಹೇಳಿದ್ದರು. ಈಗಲೂ ನೆರವು ನೀಡಲು ಸಿದ್ದ ಎಂದು ವಿಶ್ವ ಸಂಸ್ಥೆ ಹೇಳುತ್ತಿದೆ.

ಕೊರೊನಾ ಲಸಿಕೆ ಮೇಲಿನ GST ಮನ್ನಾ ಸಾಧ್ಯತೆ:

ಈಗಾಗಲೇ ಕಸ್ಟಮ್ ಸುಂಕ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ಭಾರತದಲ್ಲಿ ಲಸಿಕೆ ಮೇಲೆ ಶೇ. 5ರಷ್ಟು ಜಿಎಸ್‌ಟಿ ಇದೆ. GST ಮನ್ನಾ ಮಾಡಿದರೆ ಲಸಿಕೆ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಜನರಿಗೆ ಕಡಿಮೆ ಬೆಲೆಗೆ ಲಸಿಕೆ ಸಿಗಲಿದೆ. ಪ್ರತಿ ಡೋಸ್ ಲಸಿಕೆ ಬೆಲೆ 30 ರೂ. ಇಳಿಕೆ ಸಾಧ್ಯವಾಗಲಿದೆ ಎಂದು ಲೆಕ್ಕ ಹಾಕಲಾಗಿದೆ. (coronavirus casualties in india is more than the soldiers died in all wars that india involved)

ಇದನ್ನೂ ಓದಿ: Ladakh standoff: ಭಾರತ-ಚೀನಾ ಶೀತಲ ಸಮರ; ಪ್ಯಾಂಗಾಂಗ್ ಸರೋವರದಿಂದ ಮರಳುತ್ತಿರುವ ಯುದ್ಧ ಟ್ಯಾಂಕ್​ಗಳು