ಕೊವಿಡ್​ ಸೋಂಕಿತ ಸ್ನೇಹಿತನ ಪ್ರಾಣ ಉಳಿಸಲು 1400 ಕಿಮೀ ದೂರ ಡ್ರೈವ್​ ಮಾಡಿ ಆಕ್ಸಿಜನ್ ಸಿಲಿಂಡರ್ ತಂದ ಶಿಕ್ಷಕ..

ಭಾನುವಾರ ಮಧ್ಯಾಹ್ನ 1.30ಕ್ಕೆ ಜಾರ್ಖಂಡ್​ನ ಬೊಕಾರೊದಿಂದ ಹೊರಟ ದೇವೇಂದ್ರ ಆಕ್ಸಿಜನ್ ಸಿಲಿಂಡರ್​ಗಾಗಿ ಹಲವು ಘಟಕಗಳು, ಪೂರೈಕೆದಾರರನ್ನು ಭೇಟಿಯಾದರು. ಆದರೆ ಪ್ರಯತ್ನ ವ್ಯರ್ಥವಾಯಿತು.

ಕೊವಿಡ್​ ಸೋಂಕಿತ ಸ್ನೇಹಿತನ ಪ್ರಾಣ ಉಳಿಸಲು 1400 ಕಿಮೀ ದೂರ ಡ್ರೈವ್​ ಮಾಡಿ ಆಕ್ಸಿಜನ್ ಸಿಲಿಂಡರ್ ತಂದ ಶಿಕ್ಷಕ..
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:Apr 29, 2021 | 11:19 AM

ನೊಯ್ಡಾ: ಕೊರೊನಾ ಎರಡನೇ ಅಲೆ ಜನರ ಮನಸಲ್ಲಿ ಆತಂಕ ಸೃಷ್ಟಿಸಿದೆ. ಸದ್ಯ ಸೋಂಕಿಗಿಂತಲೂ ಅಧಿಕವಾಗಿ ಹೆದರಿಸುತ್ತಿರುವುದು ದೇಶದ ಆಸ್ಪತ್ರೆಗಳಲ್ಲಿನ ಆಕ್ಸಿಜನ್​ ಕೊರತೆ, ಬೆಡ್​ಗಳಿಲ್ಲ, ವೆಂಟಿಲೇಟರ್​ಗಳಿಲ್ಲ ಎಂಬ ಸುದ್ದಿಗಳು. ಈಗಾಗಲೇ ಅದೆಷ್ಟೋ ರೋಗಿಗಳು ಆಕ್ಸಿಜನ್​ ಇಲ್ಲದೆ ಮೃತಪಟ್ಟ ಘಟನೆಗಳು ನಡೆದಿವೆ. ಇದೆಲ್ಲದರ ಮಧ್ಯೆ ಇಲ್ಲೊಬ್ಬ 38 ವರ್ಷದ ವ್ಯಕ್ತಿ ತನ್ನ ಸ್ನೇಹಿತನ ಪ್ರಾಣ ಉಳಿಸಲು ಬರೋಬ್ಬರಿ 1400 ಕಿಮೀ ದೂರ ಡ್ರೈವಿಂಗ್ ಮಾಡಿದ ಘಟನೆ ನಡೆದಿದೆ. ಈ ಸುದ್ದಿ ಕೇಳಿದ ನೆಟ್ಟಿಗರು, ಅಬ್ಬಾ.. ನಿಜವಾದ ಸ್ನೇಹ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಘಟನೆ ವರದಿಯಾಗಿದ್ದು ಜಾರ್ಖಂಡ್​ನ ಬೊಕಾರೋದಲ್ಲಿ. ಹೀಗೆ ಸ್ನೇಹಿತನ ಜೀವ ಉಳಿಸಲು 24 ಗಂಟೆಯಲ್ಲಿ 1400 ಕಿಮೀ ದೂರ ಪ್ರಯಾಣ ಬೆಳೆಸಿದ ವ್ಯಕ್ತಿಯ ಹೆಸರು ದೇವೇಂದ್ರ. ಇವರು ಶಾಲೆಯೊಂದರ ಶಿಕ್ಷಕರಾಗಿದ್ದಾರೆ. ದೇವೇಂದ್ರ ಅವರ ಸ್ನೇಹಿತ ರಂಜನ್​ ಅಗರ್​ವಾಲ್​ ದೆಹಲಿಯ ಐಟಿ ಕಂಪನಿಯೊಂದರ ಉದ್ಯೋಗಿ. ಕೊರೊನಾ ಸೋಂಕಿತರಾಗಿ ನೊಯ್ಡಾದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಇವರಿಗೆ ಆಕ್ಸಿಜನ್​ ಸಪೋರ್ಟ್ ಬೇಕಿದ್ದರೂ ಅದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ವೆಂಟಿಲೇಟರ್ ಇರುವ ಬೆಡ್​ ವ್ಯವಸ್ಥೆ ಸಿಗುತ್ತಿಲ್ಲ ಎಂದು ರಂಜನ್​ ಪಾಲಕರು ಆತಂಕ ವ್ಯಕ್ತಪಡಿಸಿದರು. ಆ ಸುದ್ದಿ ಕೇಳುತ್ತಲೇ ದೇವೇಂದ್ರ ತಮ್ಮ ಕಾರಿನಲ್ಲಿ ನೊಯ್ಡಾಕ್ಕೆ ಹೊರಟರು. ಆಕ್ಸಿಜನ್ ಸಿಲಿಂಡರ್​ ತೆಗೆದುಕೊಂಡೇ ಹೋಗುವ ನಿರ್ಧಾರ ಕೈಗೊಂಡರು.

ಭಾನುವಾರ ಮಧ್ಯಾಹ್ನ 1.30ಕ್ಕೆ ಜಾರ್ಖಂಡ್​ನ ಬೊಕಾರೊದಿಂದ ಹೊರಟ ದೇವೇಂದ್ರ ಆಕ್ಸಿಜನ್ ಸಿಲಿಂಡರ್​ಗಾಗಿ ಹಲವು ಘಟಕಗಳು, ಪೂರೈಕೆದಾರರನ್ನು ಭೇಟಿಯಾದರು. ಆದರೆ ಪ್ರಯತ್ನ ವ್ಯರ್ಥವಾಯಿತು. ಖಾಲಿ ಸಿಲಿಂಡರ್​ ತಂದರೆ ತುಂಬಿಕೊಡುತ್ತೇವೆ ಎಂದೇ ಹೇಳಿದರು ಬಿಟ್ಟರೆ, ಹೊಸ ಸಿಲಿಂಡರ್ ಯಾರೂ ಕೊಡಲಿಲ್ಲ. ಆದರೆ ಅಷ್ಟಕ್ಕೇ ಪ್ರಯತ್ನ ಬಿಡದ ದೇವೇಂದ್ರ ಅವರು, ಕೊನೆಗೆ ಬಲಿದಿಹ್​ ಕೈಗಾರಿಕಾ ಪ್ರದೇಶದಲ್ಲಿರುವ ಜಾರ್ಖಂಡ ಸ್ಟೀಲ್​ ಆಕ್ಸಿಜನ್​ ಘಟಕಕ್ಕೆ ಹೋಗಿ ಕೇಳಿದರು. ಅದೃಷ್ಟವಶಾತ್ ಅಲ್ಲಿ ಅವರಿಗೆ ಒಂದು ತುಂಬಿದ ಆಕ್ಸಿಜನ್​ ಸಿಲಿಂಡರ್ ದೊರೆಯಿತು. ಒಂದು ಆಕ್ಸಿಜನ್​ ಸಿಲಿಂಡರ್​ಗಾಗಿ 10,400 ರೂಪಾಯಿ ನೀಡಿದ ದೇವೇಂದ್ರ ಅಲ್ಲಿಂದ ಉತ್ತರಪ್ರದೇಶಕ್ಕೆ ಪ್ರಯಾಣ ಬೆಳೆಸಿದರು. ಅದೇನೂ ಕಡಿಮೆ ದೂರವಲ್ಲ. ಒಬ್ಬರೇ ಡ್ರೈವ್ ಮಾಡಿಕೊಂಡು ಹೋಗೋದು ಅಷ್ಟು ಸುಲಭವೂ ಅಲ್ಲ. ಹೀಗಿದ್ದಾಗ್ಯೂ ಸ್ನೇಹಿತನಿಗಾಗಿ ಆಕ್ಸಿಜನ್​ ಸಿಲಿಂಡರ್​ ತೆಗೆದುಕೊಂಡು ಹೋಗುವ ದಾರಿ ಮಧ್ಯೆ ಪೊಲೀಸರು ಎರಡು ಬಾರಿ ತಡೆದರಂತೆ. ಒಂದು ಸಲ ಬಿಹಾರದಲ್ಲಿ, ಇನ್ನೊಂದು ಬಾರಿ ಉತ್ತರ ಪ್ರದೇಶ ಪ್ರವೇಶಿಸುವ ಮೊದಲು. ಎರಡೂ ಕಡೆಯಲ್ಲೂ ಪೊಲೀಸರಿಗೆ ತಮ್ಮ ಸ್ನೇಹಿತನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅದನ್ನು ಕೇಳಿ ಪೊಲೀಸರು ಕೂಡ ಹೆಚ್ಚೇನೂ ಹೇಳದೆ ಬಿಟ್ಟಿದ್ದಾರೆ. ಹೀಗೆ 24 ಗಂಟೆಯಲ್ಲಿ ಅಂದರೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ದೇವೇಂದ್ರ ತಮ್ಮ ಸ್ನೇಹಿತನಿಗೆ ಆಕ್ಸಿಜನ್ ಸಿಲಿಂಡರ್​ ತಲುಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ದೇವೇಂದ್ರ, ನಾನು ನನ್ನ ಸ್ನೇಹಿತ ಪೂರ್ತಿಯಾಗಿ ಚೇತರಿಸಿಕೊಳ್ಳುವವರೆಗೂ ನೊಯ್ಡಾದಲ್ಲಿಯೇ ಇರುವುದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Coronavirus India Update: ದೇಶದಲ್ಲಿ ಒಂದೇ ದಿನ 3.79 ಲಕ್ಷ ಹೊಸ ಕೊವಿಡ್ ಪ್ರಕರಣ, 3,645 ಸಾವು

ಜಿಲ್ಲೆಯ ಜನರಿಗೆ ತಪ್ಪು ಮಾಹಿತಿ ನೀಡಿದ ಆರೋಪ, ಎಐಸಿಸಿ ಸದಸ್ಯನಿಗೆ ಧಾರವಾಡ ಡಿಸಿ ನೋಟಿಸ್

Published On - 11:17 am, Thu, 29 April 21

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ