ಕೊವಿಡ್​ 19 2ನೇ ಅಲೆ ಬರುವುದಕ್ಕೂ ಮೊದಲು ಜಿಲ್ಲೆಯ ಆರೋಗ್ಯ ವ್ಯವಸ್ಥೆ ಸದೃಢಗೊಳಿಸಿದ ಜಿಲ್ಲಾಧಿಕಾರಿ ಇವರು; ಜನರಿಂದ ಭರ್ಜರಿ ಶ್ಲಾಘನೆ

ಐಸೋಲೇಶನ್ ವಾರ್ಡ್​ಗಳನ್ನು ಹೆಚ್ಚಿಸಲು ಜಿಲ್ಲಾಧಿಕಾರಿ ರೈಲ್ವೆ ಇಲಾಖೆಯ ಸಹಾಯ ತೆಗೆದುಕೊಂಡಿದ್ದಾರೆ. ಇವರ ಮನವಿಯನ್ನು ಪುರಸ್ಕರಿಸಿ ಪಶ್ಚಿಮ ವಲಯ ರೈಲ್ವೆ ಇಲಾಖೆ 21 ಕೋಚ್​ಗಳನ್ನು ಐಸೋಲೇಶನ್​ಗೆ ಬಿಟ್ಟುಕೊಟ್ಟಿದೆ.

ಕೊವಿಡ್​ 19 2ನೇ ಅಲೆ ಬರುವುದಕ್ಕೂ ಮೊದಲು ಜಿಲ್ಲೆಯ ಆರೋಗ್ಯ ವ್ಯವಸ್ಥೆ ಸದೃಢಗೊಳಿಸಿದ ಜಿಲ್ಲಾಧಿಕಾರಿ ಇವರು; ಜನರಿಂದ ಭರ್ಜರಿ ಶ್ಲಾಘನೆ
ಡಾ.ರಾಜೇಂದ್ರ ಭರೌದ್​
Follow us
|

Updated on:Apr 29, 2021 | 9:38 AM

ಕೊರೊನಾ 2ನೇ ಅಲೆ ಇಡೀ ದೇಶವನ್ನೇ ವ್ಯಾಪಿಸಿದೆ. ಅದರಲ್ಲೂ ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಉತ್ತರ ಪ್ರದೇಶ ಸೇರಿ ಕೆಲವು ರಾಜ್ಯಗಳಲ್ಲಿ ಇನ್ನಷ್ಟು ಭೀಕರತೆ ಇದೆ. ಕೊರೊನಾ ಹೆಚ್ಚಾದ ಬೆನ್ನಲ್ಲೇ ಆಸ್ಪತ್ರೆಗಳಲ್ಲಿ ಬೆಡ್​, ಆಕ್ಸಿಜನ್​ ಅಭಾವ ಕಾಣಿಸಿಕೊಳ್ಳುತ್ತಿದೆ. ಸರ್ಕಾರಗಳು, ಸ್ಥಳೀಯ ಆಡಳಿತಗಳು ಪರದಾಡುತ್ತಿವೆ. ಹೀಗಿರುವಾಗ ಮಹಾರಾಷ್ಟ್ರದ ಜಿಲ್ಲಾಧಿಕಾರಿಯೊಬ್ಬರು ತಮ್ಮ ಜಿಲ್ಲೆಯನ್ನು ಇದೆಲ್ಲದರಿಂದ ಪಾರು ಮಾಡಿದ್ದಾರೆ. ತಮ್ಮ ಮುಂದಾಲೋಚನೆಯಿಂದ ಜಿಲ್ಲೆಯ ಆರೋಗ್ಯ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿಟ್ಟಿದ್ದಾರೆ.

ಈ ಜಿಲ್ಲಾಧಿಕಾರಿಯ ಹೆಸರು ಡಾ. ರಾಜೇಂದ್ರ ಭರೌದ್​. ವೈದ್ಯಕೀಯ ಹಿನ್ನೆಲೆ ಇರುವ ಇವರು ಮಹಾರಾಷ್ಟ್ರದಲ್ಲಿ ಬುಡಕಟ್ಟು ಜನಾಂಗದವರೇ ಹೆಚ್ಚಾಗಿ ಇರುವ ನಂದರ್ಬಾರ್​ ಜಿಲ್ಲೆಯ ಡಿಸಿ. ಇಲ್ಲಿ ಆಕ್ಸಿಜನ್​, ಆಸ್ಪತ್ರೆಯಲ್ಲಿ ಬೆಡ್​, ಕೊವಿಡ್​ ರೋಗಿಗಳಿಗಾಗಿ ಐಸೋಲೇಶನ್​ ವಾರ್ಡ್​ಗಳು ಸಾಕಷ್ಟಿದೆ. ಹಾಗೇ, ಲಸಿಕೆ ನೀಡುವ ಅಭಿಯಾನ ಕೂಡ ಸರಾಗವಾಗಿ ನಡೆಯುತ್ತಿದೆ. ಯಾವುದೇ ಆರೋಗ್ಯ ವ್ಯವಸ್ಥೆಯಲ್ಲೂ ಅಭಾವ ಇಲ್ಲ.

ಸದ್ಯ ನಂದರ್ಬಾರ್​ ಜಿಲ್ಲೆಯಲ್ಲಿ 150 ಖಾಲಿ ಬೆಡ್​ಗಳಿವೆ. 2 ಆಕ್ಸಿಜನ್​ ಘಟಕಗಳು ಇವೆ. ಈ 2 ಆಮ್ಲಜನಕ ಘಟಕಗಳಿಂದ ನಿಮಿಷಕ್ಕೆ 2400 ಲೀಟರ್​​ಗಳಷ್ಟು ಆಮ್ಲಜನಕ ಉತ್ಪತ್ತಿಯಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟಿ ದರವನ್ನು ನಿಯಂತ್ರಿಸಿದ್ದಲ್ಲದೆ, ಅದನ್ನು ಶೇ.30 ಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಂದರ್ಬಾರ್ ಜಿಲ್ಲೆ ಮಧ್ಯಪ್ರದೇಶ ಮತ್ತು ಗುಜರಾತ್​ನ ಗಡಿಯಲ್ಲಿ ಇದ್ದು, ಈಗ ಅತ್ಯುತ್ತಮ ಆರೋಗ್ಯ ವ್ಯವಸ್ಥೆಯ ಕಾರಣಕ್ಕೆ ಅಲ್ಲಿನ ಜನರೂ ಇಲ್ಲಿಗೆ ಬರುತ್ತಿದ್ದಾರೆ.

ಮುನ್ಸೂಚನೆ ಇದ್ದಿದ್ದರಿಂದಲೇ ಮುಂಜಾಗ್ರತೆ ನಂದರ್ಬಾರ್​ ಜಿಲ್ಲೆಯಲ್ಲಿ ಕಳೆದ ವರ್ಷ ಕೊರೊನಾ ಸೋಂಕು ಕಾಲಿಟ್ಟ ಸಂದರ್ಭದಲ್ಲಿ ಆಕ್ಸಿಜನ್ ಘಟಕಗಳು ಇರಲಿಲ್ಲ. ಸೆಪ್ಟೆಂಬರ್​ನಲ್ಲಿ ಇಲ್ಲಿ ಕೂಡ ಕೊರೊನಾ ಸೋಂಕಿನ ಪ್ರಮಾಣ ತುಂಬ ಇಳಿಮುಖದಲ್ಲಿತ್ತು. ಅದೇ ಸಂದರ್ಭದಲ್ಲಿ ಡಿಸಿ ರಾಜೇಂದ್ರ ಭರೌದ್​ ಅವರು ಇಲ್ಲಿ 2 ಆಮ್ಲಜನಕ ಘಟಕಗಳನ್ನು ಸ್ಥಾಪಿಸಿದರು. ಕೊರೊನಾ ಸೋಂಕು ಕಡಿಮೆಯಾಯಿತು ಎಂದು ಉಳಿದವರೆಲ್ಲ ಸಮಾಧಾನ ಪಟ್ಟುಕೊಂಡು, ಮೈಮರೆಯುತ್ತಿದ್ದಾಗ ಈ ಡಿಸಿ ಸದ್ದಿಲ್ಲದೆ ತಮ್ಮ ಜಿಲ್ಲೆಯ ಆರೋಗ್ಯ ವ್ಯವಸ್ಥೆ ಸದೃಢಮಾಡಿಕೊಳ್ಳುತ್ತಿದ್ದರು. ಕೊರೊನಾ ವೈರಾಣು ಇನ್ನು ಕೊನೆಯಾಗಿಲ್ಲ, ಯಾವುದೇ ಸಂದರ್ಭದಲ್ಲೂ ಮತ್ತೆ ಉಲ್ಬಣಗೊಳ್ಳಬಹುದು ಎಂಬ ಬಗ್ಗೆ ಅವರಿಗಿದ್ದ ಮುಂದಾಲೋಚನೆಯೇ ಮುಂಜಾಗ್ರತೆ ವಹಿಸಲು ಕಾರಣವಾಯಿತು.

ಒಂದೊಮ್ಮೆ ಮತ್ತೆ ಕೊರೊನಾ ಉಲ್ಬಣಗೊಂಡು ಹೆಚ್ಚೆಚ್ಚು ಜನರು ಅನಾರೋಗ್ಯಕ್ಕೀಡಾದರೆ ಬೇಕಾಗುತ್ತದೆ ಎಂದು ತ್ವರಿತವಾಗಿ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಿದ್ದಾರೆ. ಅದರಲ್ಲೂ ಮೊದಲು, ನಿಮಿಷಕ್ಕೆ 600 ಲೀಟರ್​ ಆಕ್ಸಿಜನ್ ಉತ್ಪತ್ತಿ ಮಾಡುವ ಒಂದು ಘಟಕವನ್ನು ಸ್ಥಾಪಿಸಲಾಗಿತ್ತು. ಆದರೆ ನವೆಂಬರ್​​ನಲ್ಲಿ ಮತ್ತೆ ಸೋಂಕಿನ ಪ್ರಸರಣ ಹೆಚ್ಚಾಗುತ್ತಿದ್ದಂತೆ ಇರುವ ಘಟಕದ ಸಾಮರ್ಥ್ಯ ಹೆಚ್ಚಿಸಿದ್ದರ ಜತೆಗೆ, ಇನ್ನೊಂದು ಆಮ್ಲಜನಕರ ಘಟಕವನ್ನೂ ಕೂಡ ಸ್ಥಾಪಿಸಲಾಗಿದೆ.

ಇನ್ನು ಜಿಲ್ಲೆಯಲ್ಲಿ ಆಂಬುಲೆನ್ಸ್, ವೆಂಟಿಲೇಟರ್​, ಬೆಡ್​ಗಳು, ಆಕ್ಸಿಜನ್​ ಘಟಕಗಳು, ಲಸಿಕೆ, ಔಷಧ, ವೈದ್ಯಕೀಯ ಸಿಬ್ಬಂದಿಗೆ ತರಬೇತಿ…ಹೀಗೆ ವಿವಿಧ ಆರೋಗ್ಯ ಸೌಕರ್ಯ ಅಭಿವೃದ್ಧಿಗೆ ಡಾ.ಭರೌದ್​ ಬಳಸಿದ್ದು, ಜಿಲ್ಲಾ ಯೋಜನೆ ಮತ್ತು ಅಭಿವೃದ್ಧಿ ನಿಧಿಗಳು, ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಬರುವ ಹಣವನ್ನು. ಇನ್ನು ನಮ್ಮ ಜಿಲ್ಲೆಯ ಆರೋಗ್ಯ ವ್ಯವಸ್ಥೆ ದೃಢಪಡಿಸುವಲ್ಲಿ ನನ್ನೊಬ್ಬನದೇ ಪಾತ್ರವಿಲ್ಲ. ನನ್ನೊಂದಿಗೆ ನನ್ನ ತಂಡ ಇದೆ. ಅವರೆಲ್ಲರೂ ಶ್ರಮಿಸಿದ್ದಾರೆ ಎನ್ನುತ್ತಾರೆ ಡಾ. ಭರೌದ್​. ಯಾವ ರೋಗಿಯೂ ಆಕ್ಸಿಜನ್ ಅಭಾವದಿಂದ ಸಾಯಬಾರದು ಎಂದು ಕಳಕಳಿ ವ್ಯಕ್ತಪಡಿಸುವ ಅವರು, ಜಿಲ್ಲೆಯಲ್ಲಿ ಐಸೋಲೇಶನ್​ ವಾರ್ಡ್​ಗಳನ್ನು ಹೆಚ್ಚಿಸಲೂ ಕ್ರಮ ಕೈಗೊಂಡಿದ್ದಾರೆ.

ಶಾಲೆ, ಸಮುದಾಯ ಭವನಗಳೆಲ್ಲ ಕೊವಿಡ್​ ಕೇಂದ್ರ ಕೇವಲ ಜಿಲ್ಲೆಯ ಆಸ್ಪತ್ರೆಗಳನ್ನು ನೆಚ್ಚಿಕೊಂಡರೆ ಕೊವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಅರಿತ ಡಾ. ಭರೌದ್ ಆ್ಯಂಡ್ ಟೀಂ, ಜಿಲ್ಲೆಯ ಹಲವು ಶಾಲೆಗಳು, ಸಮುದಾಯ ಭವನಗಳನ್ನೆಲ್ಲ ಕೊವಿಡ್​ ಕೇಂದ್ರವನ್ನಾಗಿ ಮಾರ್ಪಾಡು ಮಾಡಿದೆ. ಬರೀ ಐಸೋಲೇಶನ್​ಗೆಂದು 7000 ಬೆಡ್​ಗಳನ್ನು ಮೀಸಲಿಟ್ಟಿದೆ. ಹಾಗೇ, ಐಸಿಯು, ವೆಂಟಿಲೇಟರ್​ ಸೌಕರ್ಯ ಇರುವ 1300 ಬೆಡ್​ಗಳನ್ನು ಸಿದ್ಧಪಡಿಸಿದೆ. ಇದೆಲ್ಲದರೊಂದಿಗೆ ನಾಗರಿಕರಲ್ಲಿ ಅರಿವು ಮೂಡಿಸಲು, ಅವರಿಗೆ ಅಗತ್ಯ ಸಹಾಯ ಮಾಡಲು ಕಂಟ್ರೋಲ್​ ರೂಂಗಳನ್ನೂ ಸ್ಥಾಪಿಸಿದೆ.

ಇನ್ನು ಕೊವಿಡ್ ರೋಗಿಗಳ ಆಮ್ಲಜನಕ ಮಟ್ಟ ಪರಿಶೀಲನೆ, ಔಷಧಿ ನೀಡಲು ಸ್ಥಳೀಯ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಸರಿಯಾಗಿ ತರಬೇತಿಯನ್ನೂ ನೀಡಲಾಗಿದೆ. ಇವೆಲ್ಲ ಯೋಜನೆಗಳೂ ಜಿಲ್ಲಾಧಿಕಾರಿ ಡಾ. ಭರೌದ್​ ಅವರದ್ದೇ ಆಗಿದೆ.

ಹೀಗೆ ಐಸೋಲೇಶನ್ ವಾರ್ಡ್​ಗಳನ್ನು ಹೆಚ್ಚಿಸಲು ಜಿಲ್ಲಾಧಿಕಾರಿ ರೈಲ್ವೆ ಇಲಾಖೆಯ ಸಹಾಯ ತೆಗೆದುಕೊಂಡಿದ್ದಾರೆ. ಇವರ ಮನವಿಯನ್ನು ಪುರಸ್ಕರಿಸಿ ಪಶ್ಚಿಮ ವಲಯ ರೈಲ್ವೆ ಇಲಾಖೆ 21 ಕೋಚ್​ಗಳನ್ನು ಐಸೋಲೇಶನ್​ಗೆ ಬಿಟ್ಟುಕೊಟ್ಟಿದೆ. ಇದರಲ್ಲಿ ಒಂದು ಕೋಚ್​ನಲ್ಲಿ 16 ರೋಗಿಗಳು ಐಸೋಲೇಟ್ ಆಗಬಹುದು. ಪ್ರತಿ ಕೋಚ್​​ನಲ್ಲಿಯೂ ಒಂದು ಬಾತ್​ ರೂಂ, ಮೂರು ಟಾಯ್ಲೆಟ್​ಗಳು ಇವೆ. ರೋಗಿಗಳಿಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನೂ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಕೂಡ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಲಸಿಕೆ ಅಭಿಯಾನದಲ್ಲೂ ಶಿಸ್ತು ಈ ಜಿಲ್ಲೆಯಲ್ಲಿ ಏನಿಲ್ಲವೆಂದರೂ 3 ಲಕ್ಷ ಜನರಿದ್ದಾರೆ. ಬುಡಕಟ್ಟು ಜನಾಂಗದವರೇ ಆಗಿದ್ದರಿಂದ ಅವರಲ್ಲಿ ಲಸಿಕೆ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮೊದಲು ಮಾಡಬೇಕಿತ್ತು ಎನ್ನುವ ಡಿಸಿ ಡಾ. ರಾಜೇಂದ್ರ ಭರೌದ್, ಈವರೆಗೆ 45 ವರ್ಷ ಮೇಲ್ಪಟ್ಟ ಸುಮಾರು 1 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದರಲ್ಲೂ ಶಿಸ್ತು ಕ್ರಮವನ್ನೇ ಅಳವಡಿಸಿಕೊಂಡಿರುವ ಅವರು, ಜಿಲ್ಲೆಯಾದ್ಯಂತ ಒಟ್ಟು 16 ವಾಹನಗಳನ್ನು ಲಸಿಕೆ ವಿತರಣೆಗಾಗಿ ಮೀಸಲಾಗಿಟ್ಟಿದ್ದಾರೆ. ಲಸಿಕಾ ಕೇಂದ್ರಗಳಿಗೆ ಬಂದು ವ್ಯಾಕ್ಸಿನ್ ತೆಗೆದುಕೊಂಡು ಹೋಗಿ ಎಂದು ಹೇಳುವ ಬದಲು ಈ ವಾಹನಗಳ ಮೂಲಕ ಅವರಿದ್ದಲ್ಲೇ ಹೋಗಿ ಲಸಿಕೆ ನೀಡಲಾಗಿದೆ. ಕೊರೊನಾ ಕಡಿಮೆಯಾಯಿತು ಎಂದು ಉಳಿದವರೆಲ್ಲ ಮೈಮರೆತ ಸಮಯದಲ್ಲಿ ಮುಂದಾಲೋಚನೆಯಿಂದ ಜಿಲ್ಲೆಯ ಆರೋಗ್ಯ ವ್ಯವಸ್ಥೆ ಸುಧಾರಿಸಿದ ಜಿಲ್ಲಾಧಿಕಾರಿಯನ್ನು ಜನರು ಶ್ಲಾಘಿಸುತ್ತಿದ್ದಾರೆ.

ಕಷ್ಟದಲ್ಲೇ ಬೆಳೆದವರು ಡಾ. ಭರೌದ್​ ಇನ್ನು ಜಿಲ್ಲಾಧಿಕಾರಿ ಡಾ. ಭರೌದ್​ ಅವರ ಬಾಲ್ಯವೆಲ್ಲ ಕಷ್ಟಕರವಾಗಿತ್ತು. ಇವರು ತಾಯಿ ಹೊಟ್ಟೆಯಲ್ಲಿದ್ದಾಗಲೇ ಅಪ್ಪನನ್ನು ಮಲೇರಿಯಾ ರೋಗ ಬಲಿಪಡೆಯಿತು. ನಂತರ ಅಮ್ಮನೇ ಇವರನ್ನು ಬೆಳೆಸಿದ್ದು. ಧುಲೆಯ ಒಂದು ಸಣ್ಣ ಹಳ್ಳಿಯಲ್ಲಿ ಪ್ರಾಥಮಿಕ ಶಾಲಾಭ್ಯಾಸವನ್ನು ಮುಗಿಸಿದರು. ಅಮ್ಮ ಹೊಲಗದ್ದೆಗಳಲ್ಲಿ ದುಡಿದು ಗಳಿಸಿದ ಹಣದಲ್ಲಿ ಮಗನನ್ನು ಸಾಕಿಬೆಳೆಸಿದ್ದಾರೆ. ವೈದ್ಯಕೀಯ ವೃತ್ತಿಯೆಡೆಗೆ ಮನಸು ಹರಿಸಿದ್ದ ಇವರು, ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ವೈದ್ಯಕೀಯ ಪದವಿ ಪಡೆದರು. ನಂತರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೇರೆ ಸ್ಥಳಗಳಿಂದ ಆಗಮಿಸುವ ಸಾರ್ವಜನಿಕರು ಮನೆಯಲ್ಲಿಯೇ ಇರಿ; ಗದಗ ಜಿಲ್ಲಾಧಿಕಾರಿ ಮನವಿ

ಕೊರೊನಾ ನೆಗೆಟಿವ್ ಬಂದರೂ ನಿಮ್ಮಲ್ಲಿ ಕೆಲವು ಪ್ರಶ್ನೆಗಳಿರಬಹುದು, ಅವೆಲ್ಲದಕ್ಕೂ ಉತ್ತರ ಇಲ್ಲಿದೆ

Published On - 9:36 am, Thu, 29 April 21

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್