Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್

ಮಂಜುನಾಥ ಸಿ.
|

Updated on:Jan 19, 2025 | 3:32 PM

Daali Dhananjay in Nanjanagoodu: ನಟ ಡಾಲಿ ಧನಂಜಯ್ ವೈದ್ಯೆ ಧನ್ಯತಾ ಅವರನ್ನು ವಿವಾಹವಾಗಲಿದ್ದಾರೆ. ರಾಜ್ಯದಾದ್ಯಂತ ಓಡಾಡುತ್ತಾ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರೆ. ಇಂದು ನಂಜನಗೂಡಿಗೆ ಭೇಟಿ ನೀಡಿದ್ದ ಡಾಲಿ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಇಲ್ಲಿದೆ ನೋಡಿ ವಿಡಿಯೋ...

ನಟ ಡಾಲಿ ಧನಂಜಯ್ ಮುಂದಿನ ತಿಂಗಳು ವೈದ್ಯೆ ಧನ್ಯತಾ ಅವರನ್ನು ವಿವಾಹವಾಗಲಿದ್ದಾರೆ. ರಾಜ್ಯದಾದ್ಯಂತ ಓಡಾಡುತ್ತಾ ರಾಜಕೀಯ ಮುಖಂಡರು, ಪ್ರಮುಖ ಮಠಾಧೀಶರು, ಸಿನಿಮಾ ಸೆಲೆಬ್ರಿಟಿಗಳು, ಗೆಳೆಯರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರೆ. ಇಂದು ಡಾಲಿ ಧನಂಜಯ್ ನಂಜನಗೂಡಿಗೆ ಆಗಮಿಸಿದ್ದರು. ಶ್ರೀಕಂಠಶ್ವರನ ಸನ್ನಿಧಿಯಲ್ಲಿ ಮದುವೆ ಆಹ್ವಾನ ಪತ್ರ ಇಟ್ಟು ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕರಾದ ದರ್ಶನ್ ಧ್ರುವನಾರಾಯಣ್ ಸಹ ಡಾಲಿ ಧನಂಜಯ್ ಜೊತೆಗಿದ್ದರು. ದೇವಸ್ಥಾನ ಅರ್ಚಕರು ಸಿಬ್ಬಂದಿಗೆ ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದರು. ಮೈಸೂರಿಗೆ ತೆರಳುತ್ತಿರುವ ಡಾಲಿ, ತಮ್ಮ ಗೆಳೆಯರನ್ನು ಮದುವೆಗೆ ಆಹ್ವಾನಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 19, 2025 03:21 PM