ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಕೊನೇ ವಾರದ ಪಂಚಾಯಿತಿ ನಡೆದಿದೆ. ಯಾರು ಕಥೆ ಹಿಟ್? ಯಾರ ಕಥೆ ಫ್ಲಾಪ್ ಎಂದು ಸುದೀಪ್ ಪ್ರಶ್ನೆ ಕೇಳಿದ್ದಾರೆ. ರಜತ್ ಫ್ಲಾಪ್ ಎಂದು ಹನುಮಂತ ಹೇಳಿದ್ದಾರೆ. ಹಾಡಿನ ಮೂಲಕವೇ ರಜತ್ಗೆ ಹನುಮಂತ ತಿರುಗೇಟು ನೀಡಿದ್ದಾರೆ. ಹನುಮಂತನ ಮಾತು ಕೇಳಿ ರಜತ್ ಕಂಗಾಲಾಗಿದ್ದಾರೆ.
ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಸಿಲ್ಲಿ ಕಾರಣಗಳನ್ನು ಕೊಟ್ಟು ನಾಮಿನೇಟ್ ಮಾಡುತ್ತಾರೆ ಎಂಬುದು ರಜತ್ ವಾದ. ಆ ಮಾತಿಗೆ ಹನುಮಂತ ತಿರುಗೇಟು ನೀಡಿದ್ದಾರೆ. ‘ಮೊದಲು ಸಿಲ್ಲಿ ಕಾರಣಗಳನ್ನು ಅರ್ಥ ಮಾಡಿಕೊ, ಆಮೇಲೆ ಸ್ಟ್ರಾಂಗ್ ಕಾರಣ ಕೊಡುತ್ತೇನೆ’ ಎಂದು ಹನುಮಂತ ಹೇಳಿದ್ದು ಕೇಳಿ ರಜತ್ಗೆ ಕಂಗಾಲಾಗಿದೆ. ಸುದೀಪ್ ಅವರು ಜೋರಾಗಿ ನಕ್ಕಿದ್ದಾರೆ. ಜನವರಿ 19ರ ಸಂಚಿಕೆಯ ಪ್ರೊಮೋ ಇದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 19, 2025 03:20 PM
Latest Videos