ಪ್ರಯಾಗ್ರಾಜ್ ಕುಂಭಮೇಳದ ಹಲವು ಟೆಂಟ್ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಸೆಕ್ಟರ್ 19ರಲ್ಲಿ ಸಿಲಿಂಡರ್ ಸ್ಫೋಟದಿಂದ ಟೆಂಟ್‌ಗಳು ಹೊತ್ತಿ ಉರಿದಿವೆ. ಬೆಂಕಿ ಸೆಕ್ಟರ್ 20ಕ್ಕೂ ಹರಡಿತ್ತು. ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎಂದು ಪ್ರಯಾಗ್ರಾಜ್ ಎಡಿಜಿ ಭಾನು ಭಾಸ್ಕರ್ ತಿಳಿಸಿದ್ದಾರೆ. ಈವರೆಗೆ ಯಾರಿಗೂ ಹಾನಿಯಾಗಿಲ್ಲ.
ಉತ್ತರ ಪ್ರದೇಶ, ಜನವರಿ 19: 144 ವರ್ಷಗಳ ಬಳಿಕ ಪ್ರಯಾಗ್ರಾಜ್ನಲ್ಲಿ ಮಹಾಕುಂಭ (Maha Kumbh) ಮೇಳ ನಡೆಯುತ್ತಿರುವ ಈ ಹೊತ್ತಲ್ಲೇ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಕುಂಭಮೇಳದ 19ನೇ ಸೆಕ್ಟರ್ ಪ್ರದೇಶದಲ್ಲಿರುವ ಗೀತಾ ಪ್ರೆಸ್ ಟೆಂಟ್ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಜೋರಾಗಿ ಗಾಳಿ ಬೀಸಿದ್ದರ ಪರಿಣಾಮ ಬೆಂಕಿ ಒಂದು ಟೆಂಟ್ನಿಂದ ಮತ್ತೊಂದು ಟೆಂಟ್ಗೆ ಆವರಿಸಿದೆ. 20ರಿಂದ 25 ಟೆಂಟ್‌ಗಳು ಬೆಂಕಿಗೆ ಆಹುತಿಯಾಗಿವೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.