ನಮ್ಮಲ್ಲಿ ಸೀಮಿತ ಸಂಪನ್ಮೂಲವಿದ್ದರೂ ಕೊವಿಡ್ ಲಸಿಕೆಯನ್ನು 80 ರಾಷ್ಟ್ರಗಳಿಗೆ  ನೀಡಿದ್ದೇವೆ: ವಿಶ್ವಸಂಸ್ಥೆಗೆ ಭಾರತದಿಂದ ಮಾಹಿತಿ

ಇಲ್ಲಿಯವರೆಗೆ ಭಾರತದ ಸುಮಾರು 66.37 ಡೋಸ್​ ಲಸಿಕೆಗಳು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಅನುದಾನ, ವಾಣಿಜ್ಯಾತ್ಮಕ ವ್ಯವಸ್ಥೆ ಮತ್ತು ಕೊವ್ಯಾಕ್ಸ್ ಉಪಕ್ರಮದಡಿ ನೀಡಲಾಗಿದೆ. ಹಾಗೇ, ಏಪ್ರಿಲ್​ 28ರ ಹೊತ್ತಿಗೆ ಭಾರತದಲ್ಲಿ 14,78,27,367 ಡೋಸ್ ಲಸಿಕೆ ನೀಡಲಾಗಿದೆ.

ನಮ್ಮಲ್ಲಿ ಸೀಮಿತ ಸಂಪನ್ಮೂಲವಿದ್ದರೂ ಕೊವಿಡ್ ಲಸಿಕೆಯನ್ನು 80 ರಾಷ್ಟ್ರಗಳಿಗೆ  ನೀಡಿದ್ದೇವೆ: ವಿಶ್ವಸಂಸ್ಥೆಗೆ ಭಾರತದಿಂದ ಮಾಹಿತಿ
ವಿಶ್ವಸಂಸ್ಥೆಯ ಲೋಗೋ
Follow us
Lakshmi Hegde
|

Updated on: Apr 29, 2021 | 12:32 PM

ದೆಹಲಿ: ನಮ್ಮಲ್ಲಿ ತೀವ್ರ ನಿರ್ಬಂಧಗಳಿದ್ದರೂ, ಸೀಮಿತ ಸಂಪನ್ಮೂಲ ಇದ್ದರೂ ಸಹ ಕೊವಿಡ್​ ಲಸಿಕೆ ಸಮಾನತೆಗೆ ನಾವು ಬದ್ಧರಾಗಿದ್ದೇವೆ. ನುಡಿದಂತೆ ನಡೆದಿದ್ದೇವೆ.. ಸುಮಾರು 80 ರಾಷ್ಟ್ರಗಳಿಗೆ ನಾವು ಲಸಿಕೆ ನೀಡಿದ್ದೇವೆ ಎಂದು ಭಾರತ ವಿಶ್ವಸಂಸ್ಥೆಗೆ ತಿಳಿಸಿದೆ.

ವಿಶ್ವಸಂಸ್ಥೆಯ ಕಾರ್ಯಗಳ ಬಗ್ಗೆ ವಿಶ್ವದಾದ್ಯಂತ ಮಾಹಿತಿ ನೀಡಲು ಇರುವ ಜಾಗತಿಕ ಸಂವಹನ ವಿಭಾಗದ ಸಾಮಾನ್ಯ ಸಭೆಯ ಮಾಹಿತಿ ಸಮಿತಿಯ 43ನೇ ಸೆಷನ್​ನಲ್ಲಿ, ಭಾರತದ ಶಾಶ್ವತ ಮಿಷನ್​ನ ಕೌನ್ಸಿಲರ್ ಎ.ಅಮರನಾಥ್​ ಈ ವಿಚಾರ ತಿಳಿಸಿದ್ದಾರೆ.

ಅಗತ್ಯ ಇರುವ ದೇಶಗಳಿಗೆ ಲಸಿಕೆಯನ್ನು ನೀಡಿರುವ, ನೀಡುತ್ತಿರುವ ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಲಸಿಕೆ ಉತ್ಪಾದಕರ ಪ್ರಯತ್ನಗಳನ್ನು ಜಗತ್ತಿನೆದುರು ಸೂಕ್ತವಾಗಿ ಎತ್ತಿ ತೋರಿಸಬೇಕು ಎಂದು ಭಾರತ ವಿಶ್ವಸಂಸ್ಥೆಯ ಜಾಗತಿಕ ಸಂವಹನ ವಿಭಾಗವನ್ನು ಒತ್ತಾಯಿಸಿದೆ. ನಮ್ಮಲ್ಲಿ ಸೀಮಿತ ಸಂಪನ್ಮೂಲ ಇದ್ದಾಗ್ಯೂ ಜಗತ್ತಿನ 80ಕ್ಕೂ ಹೆಚ್ಚು ರಾಷ್ಟ್ರಗಳೊಂದಿಗೆ ಕೊವಿಡ್ ಲಸಿಕೆಯನ್ನು ಹಂಚಿಕೊಂಡಿದ್ದೇವೆ. ಹಾಗೇ 150ಕ್ಕೂ ಹೆಚ್ಚು ದೇಶಗಳಿಗೆ ಜೀವ ರಕ್ಷಕ ಔಷಧಿಗಳನ್ನು, ರಕ್ಷಣಾ ಉಪಕರಣಗಳನ್ನು ಕೊಟ್ಟಿದ್ದೇವೆ ಎಂದು ಅಮರನಾಥ್​ ಈ ಸಾಮಾನ್ಯ ಸಭೆಯಲ್ಲಿ ತಿಳಿಸಿದ್ದಾರೆ.

ಎರಡು ಲಸಿಕೆಗಳನ್ನು ಕಂಡ ಹಿಡಿದ ಭಾರತ ಲಸಿಕೆ ಮೈತ್ರಿ ಉಪಕ್ರಮದ ಅಡಿ ಭಾರತ ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಿಗೆ ಕೊರೊನಾ ಲಸಿಕೆ ಪೂರೈಕೆ ಮಾಡಿದೆ. ಅದರಲ್ಲ ಲ್ಯಾಟಿನ್ ಅಮೆರಿಕದ ದೇಶಗಳು, ಆಫ್ರಿಕಾಕ್ಕೆ ಸಹ ಕೊವಿಡ್​ ಲಸಿಕೆಗಳನ್ನು ಕಳಿಸಿ, ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡಿದೆ.

ಇಲ್ಲಿಯವರೆಗೆ ಭಾರತದ ಸುಮಾರು 66.37 ಡೋಸ್​ ಲಸಿಕೆಗಳು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಅನುದಾನ, ವಾಣಿಜ್ಯಾತ್ಮಕ ವ್ಯವಸ್ಥೆ ಮತ್ತು ಕೊವ್ಯಾಕ್ಸ್ ಉಪಕ್ರಮದಡಿ ನೀಡಲಾಗಿದೆ. ಹಾಗೇ, ಏಪ್ರಿಲ್​ 28ರ ಹೊತ್ತಿಗೆ ಭಾರತದಲ್ಲಿ 14,78,27,367 ಡೋಸ್ ಲಸಿಕೆ ನೀಡಲಾಗಿದೆ ಎಂಬ ಮಾಹಿತಿಯನ್ನು ಅಮರ್​ನಾಥ್ ನೀಡಿದ್ದಾರೆ. ಹಾಗೇ, ಜಗತ್ತು ಕೊವಿಡ್​ ಸೋಂಕಿನ ವಿವಿಧ ಅಲೆಗಳ ಸವಾಲನ್ನು ಎದುರಿಸಬೇಕಾಗುತ್ತದೆ. ಇದೇ ಹೊತ್ತಲ್ಲಿ ಕೆಲವು ವಿಚಾರಗಳ ಬಗ್ಗೆ ತಪ್ಪುತಪ್ಪು ಮಾಹಿತಿಗಳೂ ಸಹ ವೈರಸ್​ನಂತೆ ಪ್ರಸಾರ ಆಗುತ್ತಿವೆ. ಹಾಗಾಗಿ ಜಗತ್ತಿನಾದ್ಯಂತ ಜನರು ವೈಜ್ಞಾನಿಕ ಮತ್ತು ಸತ್ಯ ಆಧಾರಿತ ವಿಚಾರಗಳನ್ನು ತಿಳಿಸುವ ವಿಶ್ವಾಸಾರ್ಹ ಮೂಲಗಳನ್ನು ಹುಡುಕುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂಓದಿ: ಆಕ್ಸಿಜನ್ ಹಂಚಿಕೆಯಲ್ಲಿ ರಾಜ್ಯದ ಜನತೆಗೆ ಘನಘೋರ ಅನ್ಯಾಯ; ಈ ಎಲ್ಲ ಸಾವಿಗೆ ಮೋದಿ, ರಾಜ್ಯ ಸರ್ಕಾರವೇ ಹೊಣೆ -ಈಶ್ವರ್ ಖಂಡ್ರೆ

West Bengal Assembly Elections 2021: ಕೊನೆಯ ಹಂತದ ಚುನಾವಣೆಗೆ ಮತದಾನ; ಉತ್ತರ ಕೊಲ್ಕತ್ತಾದಲ್ಲಿ ಬಾಂಬ್ ದಾಳಿ

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ