AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಸಿಜನ್ ಹಂಚಿಕೆಯಲ್ಲಿ ರಾಜ್ಯದ ಜನತೆಗೆ ಘನಘೋರ ಅನ್ಯಾಯ; ಈ ಎಲ್ಲ ಸಾವಿಗೆ ಮೋದಿ, ರಾಜ್ಯ ಸರ್ಕಾರವೇ ಹೊಣೆ -ಈಶ್ವರ್ ಖಂಡ್ರೆ

ವೈದ್ಯಕೀಯ ಆಕ್ಸಿಜನ್ ಹಂಚಿಕೆಯಲ್ಲಿ ರಾಜ್ಯದ ಜನತೆಗೆ ಘನಘೋರ ಅನ್ಯಾಯ ಮಾಡ್ತಿರುವುದೇಕೆ? ಎಂದು ಈಶ್ವರ್ ಖಂಡ್ರೆ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಸಂಸದರ ಮೇಲೆ ಹರಿಹಾಯ್ದಿದ್ದಾರೆ.

ಆಕ್ಸಿಜನ್ ಹಂಚಿಕೆಯಲ್ಲಿ ರಾಜ್ಯದ ಜನತೆಗೆ ಘನಘೋರ ಅನ್ಯಾಯ; ಈ ಎಲ್ಲ ಸಾವಿಗೆ ಮೋದಿ, ರಾಜ್ಯ ಸರ್ಕಾರವೇ ಹೊಣೆ -ಈಶ್ವರ್ ಖಂಡ್ರೆ
ಈಶ್ವರ್​ ಖಂಡ್ರೆ
ಆಯೇಷಾ ಬಾನು
|

Updated on:Apr 29, 2021 | 12:07 PM

Share

ಬೆಂಗಳೂರು: 25 ಸಂಸದರಿಗೆ ರಾಜ್ಯದ ಪ್ರಾಣ ಕಾಪಾಡುವ ಬದ್ಧತೆ ಇಲ್ಲವೇ? ರಾಜ್ಯಕ್ಕೆ ಬೇಕಾದಷ್ಟು ಪ್ರಮಾಣದ ಮೆಡಿಕಲ್ ಆಕ್ಸಿಜನ್, ರೆಮ್‌ಡಿಸಿವಿರ್ ತರಿಸುವ ಶಕ್ತಿ ನಮ್ಮ ಸಂಸದರಿಗೆ ಇಲ್ಲವೇ? ಮತ ಕೊಟ್ಟು ರಾಜ್ಯದ ಜನರ ಪ್ರಾಣ ನಿಕೃಷ್ಟವಾಯಿತೆ? ಇವರನ್ನು ಜನರಷ್ಟೇ ಅಲ್ಲ, ದೇವರು ಕೂಡ ಕ್ಷಮಿಸುವುದಿಲ್ಲ ಎಂದು ಟ್ವೀಟ್ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.

ವೈದ್ಯಕೀಯ ಆಕ್ಸಿಜನ್ ಹಂಚಿಕೆಯಲ್ಲಿ ರಾಜ್ಯದ ಜನತೆಗೆ ಘನಘೋರ ಅನ್ಯಾಯ ಮಾಡ್ತಿರುವುದೇಕೆ? ಎಂದು ಈಶ್ವರ್ ಖಂಡ್ರೆ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಸಂಸದರ ಮೇಲೆ ಹರಿಹಾಯ್ದಿದ್ದಾರೆ. ಕರ್ನಾಟಕದ ಬಗ್ಗೆ ಪದೇ ಪದೇ ನರೇಂದ್ರ ಮೋದಿ ಸರ್ಕಾರ ಅಸಡ್ಡೆ ತೋರಿಸುತ್ತಿದೆ. ಆಕ್ಸಿಜನ್ ಹಂಚಿಕೆಯಲ್ಲೂ ರಾಜ್ಯಕ್ಕೆ ಘನಘೋರ ಅನ್ಯಾಯ ಎಸಗುತ್ತಿದೆ ಎಂದು ಖಂಡ್ರೆ ಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ 1,013 ಮೆಟ್ರಿಕ್ ಟನ್ ಆಕ್ಸಿಜನ್ ತಯಾರಿಯಾಗುತ್ತೆ. ಆದರೆ ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ 742 ಮೆಟ್ರಿಕ್ ಟನ್ ಆಕ್ಸಿಜನ್ ಮಾತ್ರ ಹಂಚಿಕೆ ಮಾಡಿದೆ. ರಾಜ್ಯದ ಜನತೆಗೆ ಘನಘೋರ ಅನ್ಯಾಯ ಮಾಡ್ತಿರುವುದೇಕೆ? ಈ ಎಲ್ಲ ಸಾವಿಗೆ ಮೋದಿ, ರಾಜ್ಯ ಸರ್ಕಾರವೇ ಹೊಣೆ ಎಂದು ಟ್ವೀಟ್ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಕಿಡಿಕಾರಿದ್ದಾರೆ.

ರಾಜ್ಯ 25 ಸದಸ್ಯರಿಗೆ ರಾಜ್ಯದ ಪ್ರಾಣ ಕಾಪಾಡುವ ಬದ್ಧತೆ ಇಲ್ಲವೆ? ಅಗತ್ಯ ಪ್ರಮಾಣದ ಆಕ್ಸಿಜನ್, ರೆಮ್ಡಿಸಿವಿರ್ ತರಿಸುವ ಶಕ್ತಿ ಇಲ್ಲವೆ? ಮತಕೊಟ್ಟು ಗೆಲ್ಲಿಸಿದ ರಾಜ್ಯದ ಜನರ ಪ್ರಾಣ ನಿಕೃಷ್ಟವಾಯಿತೆ? ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: Oxygen Cylinder: ಕೊರೊನಾದಿಂದ ಕಂಗಾಲಾದ ಬೆಂಗಳೂರಿಗೆ ಉಚಿತ ಆಕ್ಸಿಜನ್​ ನೀಡಲು ಮುಂದೆ ಬಂದ ಸುನೀಲ್​ ಶೆಟ್ಟಿ

Published On - 12:02 pm, Thu, 29 April 21