West Bengal Assembly Elections 2021: ಕೊನೆಯ ಹಂತದ ಚುನಾವಣೆಗೆ ಮತದಾನ; ಉತ್ತರ ಕೊಲ್ಕತ್ತಾದಲ್ಲಿ ಬಾಂಬ್ ದಾಳಿ
West Bengal Voting: ಮಾಲ್ಡಾ, ಮುರ್ಷಿದಾಬಾದ್, ಬಿರ್ಭೂಂ ಮತ್ತು ಉತ್ತರ ಕೊಲ್ಕತ್ತಾ ಸೇರಿದಂತೆ 35 ವಿಧಾನಸಭಾ ಕ್ಷೇತ್ರಗಳಿಗೆ 8ನೇ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದೆ. 285 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಗೆ ಕೊನೆಯ ಹಂತದ ಚುನಾವಣೆಗೆ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಬೆಳಗ್ಗೆ 9.30ರ ಹೊತ್ತಿಗೆ ಶೇ 16.04 ಮತದಾನ ದಾಖಲಾಗಿದೆ. ಕೊವಿಡ್ ಎರಡನೇ ಅಲೆಯಿಂದಾಗಿ ಪ್ರಕರಣಗಳು ಏರಿಕೆಯಾಗುತ್ತಿರುವ ಹೊತ್ತಿನಲ್ಲಿಯೇ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆದಿದೆ. ಬುಧವಾರ ಪಶ್ಚಿಮ ಬಂಗಾಳದಲ್ಲಿ 17,207 ಹಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ದಾಖಲೆಯಾಗಿದೆ. ರಾಜ್ಯದಲ್ಲಿ ಒಟ್ಟು 7,93,552 ಕೊವಿಡ್ ಸೋಂಕಿತರಿದ್ದಾರೆ. ಬುಧವಾರ 77 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 11,159ಕ್ಕೇರಿದೆ. ಮಾಲ್ಡಾ, ಮುರ್ಷಿದಾಬಾದ್ ,ಬಿರ್ಭೂಂ ಮತ್ತು ಉತ್ತರ ಕೊಲ್ಕತ್ತಾ ಸೇರಿದಂತೆ 35 ವಿಧಾನಸಭಾ ಕ್ಷೇತ್ರಗಳಿಗೆ 8ನೇ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದೆ. 285 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
#WestBengalElections2021 | 16.04% voter turnout recorded till 9:31 am. pic.twitter.com/vlBswY3tLf
— ANI (@ANI) April 29, 2021
ಉತ್ತರ ಕೊಲ್ಕತ್ತಾದಲ್ಲಿ ಬಾಂಬ್ ದಾಳಿ ಮತದಾನ ನಡೆಯುತ್ತಿದ್ದಂತೆ ಮಹಾಜತಿ ಸದನ್ ಹೊರಗಡೆ ಬಾಂಬ್ ದಾಳಿ ನಡೆದಿದೆ. ನನ್ನನ್ನು ಹತ್ಯೆ ಮಾಡಲು ಬಾಂಬ್ ಎಸೆದಿದ್ದಾರೆ. ನನ್ನ ಕಾರಿನ ಮೇಲೆ ಗುರಿಯಿಟ್ಟಿದ್ದರು. ಮತದಾರರನ್ನು ಭಯಪಡಿಸುವ ತಂತ್ರ ಇದು ಎಂದು ಜಜೊರ್ಸಂಕೊ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೀನಾ ದೇವಿ ಪುರೋಹಿತ್ ಆರೋಪಿಸಿದ್ದಾರೆ .ಈ ಬಾಂಬ್ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
West Bengal: A bomb was hurled near Mahajati Sadan Auditorium in north Kolkata today. Election Commission has sought details of the incident. Details awaited. pic.twitter.com/hbhikPorZo
— ANI (@ANI) April 29, 2021
8ನೇ ಹಂತದ ಚುನಾವಣೆಯಲ್ಲಿ 11,860 ಮತಗಟ್ಟೆಗಳಿದ್ದು 84 ಲಕ್ಷಕ್ಕಿಂತಲೂ ಹೆಚ್ಚು ಮತದಾರರು ಇದ್ದಾರೆ. ಉತ್ತರ ಕೊಲ್ಕತ್ತಾದ ಬೆಲೆಘಾಟಾ, ಜೊರ್ಸಂಕೊ,ಶ್ಯಾಮ್ಪುಕುರ್, ಮಣಿಕ್ತಲ, ಕಾಶೀಪುರ್ ಬೆಲ್ಗಾಚಿಯಾ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.
Election is the greatest festival in democracy, we both voted. COVID protocol being followed 100%. I’m very happy with the arrangements. Excellent work done by EC & CAPF. Democracy is powered only by your votes. Anyone who doesn’t vote loses the right to grievance: WB Governor pic.twitter.com/NSCrVMnBzG
— ANI (@ANI) April 29, 2021
ಚುನಾವಣೆ ಜನತಂತ್ರದ ಹಬ್ಬ , ನಾವಿಬ್ಬರೂ ಮತದಾನ ಮಾಡಿದ್ದೇವೆ. ಕೊವಿಡ್ ನಿಯಮಾವಳಿಗಳನ್ನು ಸಂಪೂರ್ಣ ಪಾಲಿಸಲಾಗಿದೆ. ಇಲ್ಲಿರುವ ವ್ಯವಸ್ಥೆ ನೋಡಿ ಖುಷಿಯಾಯ್ತು. ಚುನಾವಣಾ ಆಯೋಗ ಮತ್ತು ಸಿಎಪಿಎಫ್ ಉತ್ತಮ ಕೆಲಸ ಮಾಡಿದೆ. ನಿಮ್ಮ ಮತದಿಂದಲೇ ಪ್ರಜಾತಂತ್ರಕ್ಕೆ ಶಕ್ತಿ ಬರುವುದು. ಮತದಾನ ಮಾಡದವರಿಗೆ ದೂರುವ ಹಕ್ಕು ಇರುವುದಿಲ್ಲ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್ ಹೇಳಿದ್ದಾರೆ.
ಇಲ್ಲಿರುವುದು ಜಂಗಲ್ ರಾಜ್: ಬಿಜೆಪಿ ಅಭ್ಯರ್ಥಿ ಗೋಪಾಲ್ ಚಂದ್ರ ಸಾಹಾ
West Bengal: BJP candidate from Malda, Gopal Chandra Saha cast his vote at a polling booth in the constituency. He says, “There was a public rally on April 18 in Sahapur where I was shot & taken to hospital. It was done by either TMC or Congress goons. There is ‘jungle raj’ here” pic.twitter.com/QyWe1DJek5
— ANI (@ANI) April 29, 2021
ಏಪ್ರಿಲ್ 18ರಂದು ಸಾಹಾಪುರ್ ನಲ್ಲಿ ಸಾರ್ವಜನಿಕ ಪ್ರಚಾರ ಕಾರ್ಯಕ್ರಮ ನಡೆಸುತ್ತಿದ್ದಾಗ ನನ್ನ ಮೇಲೆ ಗುಂಡು ಹಾರಿಸಲಾಗಿತ್ತು. ತಕ್ಷಣವೇ ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು. ನನ್ನ ಮೇಲೆ ದಾಳಿ ನಡೆಸಿದವರು ಟಿಎಂಸಿ ಅಥವಾ ಕಾಂಗ್ರೆಸ್ ನ ಗೂಂಡಾಗಳಾಗಿರುತ್ತಾರೆ. ಇಲ್ಲಿರುವುದು ಜಂಗಲ್ ರಾಜ್ (ಕಾಡಿನ ಆಡಳಿತ) ಎಂದು ಮಾಲ್ಡಾದ ಬಿಜೆಪಿ ಅಭ್ಯರ್ಥಿ ಗೋಪಾಲ್ ಚಂದ್ರ ಸಾಹಾ ಹೇಳಿದ್ದಾರೆ.
(West Bengal votes in the last phase of the Assembly elections 2021)
Published On - 11:41 am, Thu, 29 April 21