AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯ್ದೆ ಜಾರಿ; ಇನ್ನು ಮೇಲೆ ದೆಹಲಿ ಸರ್ಕಾರವೆಂದರೆ ಲೆಫ್ಟಿನೆಂಟ್ ಗವರ್ನರ್!

ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯ್ದೆ 2021ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು ಮಾರ್ಚ್​ 28 ರಂದು ಅನುಮೋದನೆ ನೀಡಿದ್ದರು.

ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯ್ದೆ ಜಾರಿ; ಇನ್ನು ಮೇಲೆ ದೆಹಲಿ ಸರ್ಕಾರವೆಂದರೆ ಲೆಫ್ಟಿನೆಂಟ್ ಗವರ್ನರ್!
ದೆಹಲಿ ಎಲ್​ಜಿ ಅನಿಲ್ ಬೈಜಲ್ ಮತ್ತು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk|

Updated on:Apr 29, 2021 | 1:08 PM

Share

ನವದೆಹಲಿ: ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯ್ದೆ ಏಪ್ರಿಲ್ 27ರಿಂದ ಜಾರಿಗೆ ಬಂದಿದ್ದು ಇನ್ನು ಮೇಲೆ ದೆಹಲಿ ಸರ್ಕಾರವೆಂದರೆ ಲೆಫ್ಟಿನೆಂಟ್ ಗವರ್ನರ್ ಅಂತ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಗೃಹಖಾತೆ ಸಚಿವಾಲಯದ ಸೂಚನೆಯೊಂದರ ಪ್ರಕಾರ ಕೇಂದ್ರ ಸರ್ಕಾರವು ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯ್ದೆ ಏಪ್ರಿಲ್ 27ರಿಂದ ಜಾರಿಗೆ ಬರಲು ಏಪ್ರಿಲ್ 27ನೇ ತಾರೀಖನ್ನು ನಿಗದಿ ಮಾಡಿತ್ತು.

‘ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯ್ದೆ 2021 (2021ರ 15)ರ ಸೆಕ್ಷನ್ 1 ರ ಉಪ-ವಿಭಾಗ (2) ದಿಂದ ಕೊಡಮಾಡಲ್ಪಡುವ ಅಧಿಕಾರಗಳನ್ನು ಬಳಸಿ ಕೇಂದ್ರ ಸರ್ಕಾರವು ಏಪ್ರಿಲ್ 27 ತಾರೀಖನ್ನು ಈ ಕಾಯ್ದೆಯ ಪ್ರಾವಿಷನ್​ಗಳು ಜಾರಿಗೆ ಬರುವ ಹಾಗೆ ನಿಯುಕ್ತಿಗೊಳಿಸಿತ್ತು,’ ಎಂದು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಗೋವಿಂದ ಮೋಹನ್ ಅವರಿ ಸಹಿ ಮಾಡಿರುವ ನೋಟಿಫಿಕೇಶನ್ ಸೂಚಿಸುತ್ತದೆ.

ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯ್ದೆ 2021ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು ಮಾರ್ಚ್​ 28 ರಂದು ಅನುಮೋದನೆ ನೀಡಿದ್ದರು.

ಮಾರ್ಚ್ 24 ರಂದು ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯ್ದೆ 2021 ಅನ್ನು ರಾಜ್ಯಸಭೆಯಲ್ಲಿ ಪಾಸು ಮಾಡಲಾಗಿತ್ತು. ಅದನ್ನು ವಿರೋಧಿಸಿ ಕಾಂಗ್ರೆಸ್, ಆಪ್ ಮತ್ತು ಇತರ ವಿರೋಧ ಪಕ್ಷಗಳು ಸದನದಿಂದ ವಾಕ್​ಔಟ್​ ಮಾಡಿದ್ದವು. ಈ ಮಸೂದೆಯು ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯ್ದೆ 1991ರನ್ನು ತಿದ್ದುಪಡಿ ಮಾಡಿದೆ.

ತಿದ್ದುಪಡಿ ಕಾಯ್ದೆ ಅನುಸಾರ ಕೇಂದ್ರಾಡಳಿತ ಪ್ರದೇಶದ ಶಾಸಕಾಂಗ ಸಭೆಯಲ್ಲಿ ಉಲ್ಲೇಖಿಸಲ್ಪಡುವ ಯಾವುದೇ ಕಾನೂನಿನಲ್ಲಿ ದೆಹಲಿ ಸರ್ಕಾರ ಅಂತ ಹೇಳುವುದರ ಅರ್ಥ ಲೆಫ್ಟಿನೆಂಟ್​ ಗವರ್ನರ್ ಆಗಿರುತ್ತದೆ. ಖ್ಯಾತ ಪತ್ರಿಕೆಯೊಂದರಲ್ಲಿ ಗೃಹಖಾತೆಯ ರಾಜ್ಯ ಸಚಿವ ಜಿ.ಕೃಷ್ಣಾರೆಡ್ಡಿ ಬರೆದಿರುವ ಲೇಖನದಲ್ಲಿ ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ (ತಿದ್ದುಪಡಿ) ಕಾಯ್ದೆ ದೆಹಲಿಯಲ್ಲಿ ಲೆಫ್ಟಿನೆಂಟ್​ ಗವರ್ನರ್ ಅವರ ಪಾತ್ರವನ್ನು ಸ್ಪಷ್ಟೀಕರಿಸುತ್ತದೆ ಮತ್ತು ಕೇಂದ್ರ ಹಾಗೂ ಕೇಂದ್ರಾಡಳಿತ ಪ್ರದೇಶದ ನಡುವೆ ಉತ್ತಮ ಸಾಮರಸ್ಯ ಏರ್ಪಡಲು ನೆರವಾಗುತ್ತದೆ ಎಂದು ಹೇಳಿದ್ದಾರೆ.

‘ಕಾಯ್ದೆಗೆ ಈಗ ರಾಷ್ಟ್ರಪತಿಗಳ ಅನುಮೋದನೆ ಸಿಕ್ಕಿರುವುದರಿಂದ ಲೆಫ್ಟಿನೆಂಟ್​ ಗವರ್ನರ್ ಹೆಚ್ಚು ಹೊಣೆಗಾರಿಕೆ ಹೊಂದಿದ್ದಾರೆ ಎನ್ನುವುದನ್ನು ನಾವು ಖಾತರಿಪಡಿಸಬೇಕಾಗುತ್ತದೆ. ಶಾಸಕಾಂಗದ ಪ್ರಸ್ತಾವನೆಗಳನ್ನು ಮತ್ತು ಆಡಳಿತಾತ್ಮಕ ವಿಷಯಗಳನ್ನು ಲೆಫ್ಟಿನೆಂಟ್​ ಗವರ್ನರ್ ಅವರ ಸುಪರ್ದಿಗೆ ತಂದಾಗ ಅವರು ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಕಾಲಾವಕಾಶ ನೀಡುವ ಮೂಲಕ ಇದನ್ನು ಮಾಡಬಹದಾಗಿದೆ,’ ಎಂದು ಅವರ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಕೇಂದ್ರ ಸರ್ಕಾರ ಮತ್ತು ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶಗಳ ನಡುವೆ ಸಂಪೂರ್ಣ ಸಾಮರಸ್ಯದ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಿರುವ ರೆಡ್ಡಿ ಅವರು ಶಾಸಕಾಂಗ ವಿಷಯಗಳಿಗೆ ಸಂಬಂಧಿಸಿದಂತೆ ಎರಡರ ಮಧ್ಯೆ ಅತಿಕ್ರಮಣದಂಥ ಸಂಗತಿ ಉದ್ಭವಿಸಬಾರದು ಎಂದಿದ್ದಾರೆ

ಇದನ್ನೂ ಓದಿ: #DelhiNeedsOxygen: ದೆಹಲಿಯ ಕುಸಿದ ಆರೋಗ್ಯ ವ್ಯವಸ್ಥೆ ಪಂಡಿತ್ ರಾಜನ್ ಮಿಶ್ರಾರ ಬಲಿ ಪಡೆಯಿತೇ?

Published On - 12:10 am, Thu, 29 April 21