ವೈವಾಹಿಕ ಜೀವನಕ್ಕೆ ಕಾಲಿರಿಸಿದ ನೀರಜ್ ಚೋಪ್ರಾ! ಜಾವೆಲಿನ್ ಸ್ಟಾರ್ ವರಿಸಿದ ಹುಡುಗಿ ಯಾರು?

Neeraj Chopra Marriage: ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಅವರು ಹಿಮಾನಿ ಎಂಬ ಹುಡುಗಿಯನ್ನು ಮದುವೆಯಾಗಿದ್ದಾರೆ. ಈ ವಿಚಾರವನ್ನು ಸ್ವತಃ ನೀರಜ್ ಅವರೇ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿರಿಸಿದ ನೀರಜ್ ಚೋಪ್ರಾ! ಜಾವೆಲಿನ್ ಸ್ಟಾರ್ ವರಿಸಿದ ಹುಡುಗಿ ಯಾರು?
ನೀರಜ್ ಚೋಪ್ರಾ
Follow us
ಪೃಥ್ವಿಶಂಕರ
|

Updated on:Jan 19, 2025 | 10:58 PM

ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ಹಾಗೂ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಹೊಸ ವರ್ಷದಲ್ಲಿ ತಮ್ಮ ಅಭಿಮಾನಿಗಳಿಗೆ ಆಶ್ಚರ್ಯಕರ ಉಡುಗೊರೆಯೊಂದನ್ನು ನೀಡಿದ್ದಾರೆ. ನೀರಜ್ ಚೋಪ್ರಾ ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದು, ಹಿಮಾನಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಸದ್ಯ ನೀರಜ್ ಅವರ ಪತ್ನಿ ಹಿಮಾನಿ ಯಾರು ಮತ್ತು ಅವರು ಏನು ಮಾಡುತ್ತಾರೆ ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ ಮತ್ತು ನೀರಜ್ ಕೂಡ ಈ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ. ಇವರಿಬ್ಬರೂ ಸ್ನೇಹಿತರೇ ಅಥವಾ ನೀರಜ್ ಮನೆಯವರು ನೋಡಿದ ಹುಡುಗಿಯನ್ನು ವರಿಸಿದ್ದಾರೆಯೇ ಎಂಬುದು ಇನ್ನಷ್ಟೇ ಖಚಿತವಾಗಬೇಕಾಗಿದೆ.

ಹಿಮಾನಿ ಯಾರು?

ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ ಹಿಮಾನಿ ಸೋನಿಪತ್‌ನವರಾಗಿದ್ದು, ಪ್ರಸ್ತುತ ಅಮೆರಿಕದಲ್ಲಿ ಓದುತ್ತಿದ್ದಾರೆ. ನೀರಜ್ ಅವರ ಚಿಕ್ಕಪ್ಪ ಭೀಮ್ ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಮಾಹಿತಿಯ ಪ್ರಕಾರ, ಮದುವೆ ಎರಡು ದಿನಗಳ ಹಿಂದೆಯೇ ನಡೆದಿದ್ದು, ದಂಪತಿಗಳು ಹನಿಮೂನ್‌ಗೆ ತೆರಳಿದ್ದಾರೆ ಎಂದಿದ್ದಾರೆ. ಇದರ ಜೊತೆಗೆ ಹುಡುಗಿಯ ಬಗ್ಗೆ ಮಾಹಿತಿ ನೀಡಿರುವ ಅವರು ಹಿಮಾನಿ ಸೋನಿಪತ್‌ನವರಾಗಿದ್ದು ಅಮೆರಿಕದಲ್ಲಿ ಓದುತ್ತಿದ್ದಾಳೆ. ಮದುವೆಯ ಬಳಿಕ ಅವರಿಬ್ಬರು ಹನಿಮೂನ್‌ಗೆ ತೆರಳಿದ್ದು, ಅವರು ಎಲ್ಲಿಗೆ ಹೋಗುತ್ತಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸದ್ದಿಲ್ಲದೇ ಮದುವೆಯಾಗಿರುವ ನೀರಜ್

ಜನವರಿ 19 ರಂದು ತಮ್ಮ ಮದುವೆಯ 3 ಫೋಟೋಗಳನ್ನು ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನೀರಜ್ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ವಾಸ್ತವವಾಗಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದ ನೀರಜ್ ಚೋಪ್ರಾ ಮದುವೆಗಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಇದಲ್ಲದೆ ನೀರಜ್ ಯಾವಾಗ ಮದುವೆಯಾಗುತ್ತಾರೆ ಅಥವಾ ಅವರ ಪ್ರೇಯಸಿ ಯಾರು ಎಂಬ ಪ್ರಶ್ನೆಗಳನ್ನು ಈ ಹಿಂದೆಯೇ ನೀರಜ್​ಗೆ ಕೇಳಲಾಗಿತ್ತು. ಆದರೆ ನೀರಜ್ ಅದರ ಬಗ್ಗೆ ಏನನ್ನು ಹೇಳುತ್ತಿರಲಿಲ್ಲ. ಆದರೆ ಇದೀಗ ಸದ್ದಿಲ್ಲದೇ ಮದುವೆಯಾಗಿರುವ ನೀರಜ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ನೀರಜ್ ಸಾಧನೆಗಳು

ಹರಿಯಾಣದ ಪಾಣಿಪತ್ ಜಿಲ್ಲೆಯ ಖಂಡ್ರಾ ಗ್ರಾಮದವರಾದ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಎರಡೆರಡು ಒಲಂಪಿಕ್ಸ್ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. 2016 ರಲ್ಲಿ ಅಂಡರ್-20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದಿದ್ದ ನೀರಜ್, ಆ ನಂತರ 2018 ರಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕಗಳನ್ನು ಗೆದ್ದರು. 2021 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ನೀರಜ್ 87.58 ಮೀಟರ್ ಜಾವೆಲಿನ್ ಎಸೆದು ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯನೆಂಬ ಇತಿಹಾಸ ಸೃಷ್ಟಿಸಿದ್ದರು. ಆ ನಂತರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ನೀರಜ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ಪದಕ ಗೆದ್ದ ದಾಖಲೆ ಬರೆದಿದ್ದರು. ಇದಲ್ಲದೆ, ನೀರಜ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮತ್ತು ಡೈಮಂಡ್ ಲೀಗ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:31 pm, Sun, 19 January 25

ಮದುವೆಗೆ ಟೆಂಪಲ್-ಗೋಲ್ಡ್​ ಥೀಮ್; ಹೀಗಿರುತ್ತೆ ಡಾಲಿ ಧನಂಜಯ್ ವಿವಾಹ
ಮದುವೆಗೆ ಟೆಂಪಲ್-ಗೋಲ್ಡ್​ ಥೀಮ್; ಹೀಗಿರುತ್ತೆ ಡಾಲಿ ಧನಂಜಯ್ ವಿವಾಹ
ಚಾಲಕ ಇಳಿದು ಹೋಗುತ್ತಿದ್ದಂತೆ ಆತನ ಹಿಂದೆಯೇ ಚಲಿಸಿದ ಡೀಸೆಲ್ ಟ್ಯಾಂಕರ್!
ಚಾಲಕ ಇಳಿದು ಹೋಗುತ್ತಿದ್ದಂತೆ ಆತನ ಹಿಂದೆಯೇ ಚಲಿಸಿದ ಡೀಸೆಲ್ ಟ್ಯಾಂಕರ್!
ಕೆಆರ್ ಮಾರುಕಟ್ಟೆ ಫ್ಲೈಓವರ್​ನಲ್ಲಿ ಬಿಎಂಟಿಸಿ ಬಸ್​, ಬೈಕ್ ಡಿಕ್ಕಿ
ಕೆಆರ್ ಮಾರುಕಟ್ಟೆ ಫ್ಲೈಓವರ್​ನಲ್ಲಿ ಬಿಎಂಟಿಸಿ ಬಸ್​, ಬೈಕ್ ಡಿಕ್ಕಿ
ಮನೆಯಲ್ಲಿ ಡೈನಿಂಗ್ ಟೇಬಲ್ ಎಲ್ಲಿದ್ದರೆ ಉತ್ತಮ ತಿಳಿಯಲು ಈ ವಿಡಿಯೋ ನೋಡಿ
ಮನೆಯಲ್ಲಿ ಡೈನಿಂಗ್ ಟೇಬಲ್ ಎಲ್ಲಿದ್ದರೆ ಉತ್ತಮ ತಿಳಿಯಲು ಈ ವಿಡಿಯೋ ನೋಡಿ
ಈ ರಾಶಿಯವರು ಇಂದು ಶಕ್ತಿಯ ಆರಾಧನೆ ಮಾಡಿದ್ರೆ ಶುಭ ಸುದ್ದಿ ಕೇಳುವರು
ಈ ರಾಶಿಯವರು ಇಂದು ಶಕ್ತಿಯ ಆರಾಧನೆ ಮಾಡಿದ್ರೆ ಶುಭ ಸುದ್ದಿ ಕೇಳುವರು
ಕೇರಳದ ದೇವಾಲಯದ ಉತ್ಸವದಲ್ಲಿ ರೊಚ್ಚಿಗೆದ್ದ ಆನೆಗಳು; ಮೂವರು ಸಾವು
ಕೇರಳದ ದೇವಾಲಯದ ಉತ್ಸವದಲ್ಲಿ ರೊಚ್ಚಿಗೆದ್ದ ಆನೆಗಳು; ಮೂವರು ಸಾವು
ಪ್ರಧಾನಿ ಮೋದಿ ಜೊತೆಗಿನ ಸಭೆಗೆ ಬ್ಲೇರ್​ ಹೌಸ್​ಗೆ ಆಗಮಿಸಿದ ಎಲಾನ್ ಮಸ್ಕ್
ಪ್ರಧಾನಿ ಮೋದಿ ಜೊತೆಗಿನ ಸಭೆಗೆ ಬ್ಲೇರ್​ ಹೌಸ್​ಗೆ ಆಗಮಿಸಿದ ಎಲಾನ್ ಮಸ್ಕ್
ಮಗನ ಅರಿಶಿನ ಶಾಸ್ತ್ರದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಡ್ಯಾನ್ಸ್
ಮಗನ ಅರಿಶಿನ ಶಾಸ್ತ್ರದಲ್ಲಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಡ್ಯಾನ್ಸ್
ಪುಂಡಾಟ ಮಾಡುತ್ತಿದ್ದ ಎಮ್ಮೆ ಕಟ್ಟಿಹಾಕಲು ಜೆಸಿಬಿಯೇ ಬರಬೇಕಾಯ್ತು!
ಪುಂಡಾಟ ಮಾಡುತ್ತಿದ್ದ ಎಮ್ಮೆ ಕಟ್ಟಿಹಾಕಲು ಜೆಸಿಬಿಯೇ ಬರಬೇಕಾಯ್ತು!
ಮಹಾಕುಂಭದಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪುಣ್ಯ ಸ್ನಾನ
ಮಹಾಕುಂಭದಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪುಣ್ಯ ಸ್ನಾನ