Bigg Boss Elimination: ಫಿನಾಲೆ ಸಮೀಪದಲ್ಲಿ ಧನರಾಜ್ ಆಚಾರ್ ಎಲಿಮಿನೇಟ್

ಕರಾವಳಿ ಪ್ರತಿಭೆ ಧನರಾಜ್ ಅವರು ಫಿನಾಲೆಗೆ ಹೋಗಬಹುದು ಎಂದು ಊಹಿಸಲಾಗಿತ್ತು. ಆದರೆ ಆ ಊಹೆ ನಿಜವಾಗಲಿಲ್ಲ. ಫಿನಾಲೆಗೆ ಸಮೀಪ ಇರುವಾಗಲೇ ಅವರು ಎಲಿಮಿನೇಟ್ ಆಗಿದ್ದಾರೆ. ಈ ವಾರ ಧನರಾಜ್ ಪಾಲಿಗೆ ಹಾವು-ಏಣಿ ಆಟದ ರೀತಿ ಇತ್ತು. ಫಿನಾಲೆಗೆ ಎಂಟ್ರಿ ನೀಡುವ ಚಾನ್ಸ್ ಪಡೆದಿದ್ದು ಅವರು ಆಟದಲ್ಲಿ ಮಾಡಿದ ತಪ್ಪಿನಿಂದ ಎಲಿಮಿನೇಟ್ ಆಗಬೇಕಾಯಿತು.

Bigg Boss Elimination: ಫಿನಾಲೆ ಸಮೀಪದಲ್ಲಿ ಧನರಾಜ್ ಆಚಾರ್ ಎಲಿಮಿನೇಟ್
Dhanraj Achar
Follow us
ಮದನ್​ ಕುಮಾರ್​
|

Updated on: Jan 19, 2025 | 11:08 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋ ಆರಂಭ ಆದಾಗ ಧನರಾಜ್ ಆಚಾರ್ ಅವರು ಅಷ್ಟೇನೂ ಸ್ಟ್ರಾಂಗ್ ಸ್ಪರ್ಧಿ ಎಲ್ಲ ಎಂಬ ಅಭಿಪ್ರಾಯ ಅನೇಕರಿಗೆ ಇತ್ತು. ಆದರೆ ನಂತರದ ದಿನಗಳಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿಕೊಂಡಿದ್ದರು. ಆ ಕಾರಣದಿಂದ ಅವರು ಸೆಮಿ ಫೈನಲ್ ತನಕ ಬರಲು ಸಾಧ್ಯವಾಯ್ತು. ಇನ್ನೇನು ಅವರು ಫಿನಾಲೆಗೂ ಕಾಲಿಡಬಹುದು ಎಂಬ ಸಾಧ್ಯತೆ ಇತ್ತು. ಆದರೆ ಗ್ರೇ ಏರಿಯಾ ಹುಡುಕಿಕೊಂಡಿದ್ದು ಅವರಿಗೆ ಮುಳುವಾಯಿತು. ಈ ವಾರ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ದೊಡ್ಮನೆಯನ್ನು ತೊರೆಯುವಾಗ ಧನರಾಜ್ ತುಂಬ ಎಮೋಷನಲ್ ಆದರು.

‘ಕಪ್ ಗೆಲ್ಲಲು ನಾನು ಸೋತಿರಬಹುದು. ಆದರೆ ಬದುಕಿನಲ್ಲಿ ಗೆಲ್ಲುತ್ತೇನೆ ಎಂಬ ಪಾಠವನ್ನು ಈ ಮನೆ ಕಲಿಸಿದೆ. ಈ ಅವಕಾಶಕ್ಕೆ ಧನ್ಯವಾದಳು. ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಧನರಾಜ್ ಆಚಾರ್ ಹೇಳಿದರು. ಮನೆಯಿಂದ ಹೊರಗೆ ಬರುವಾಗ ತಮ್ಮ ಆಪ್ತರಿಗೆ ಅವರು ಕೊನೇ ಸಂದೇಶವನ್ನು ತಿಳಿಸಿದರು.

‘ಮೋಕ್ಷಿತಾ ನಿಮಗೆ ಪ್ರಾಮಾಣಿಕತೆ ಇದೆ. ಚೆನ್ನಾಗಿ ಆಡುತ್ತಿದ್ದೀರಿ’ ಎಂದು ಧನರಾಜ್ ಹೇಳಿದರು. ‘ನಾನು ಎಂದಿಗೂ ನಿನ್ನ ಜೊತೆಗೆ ಇರುತ್ತೇನೆ. ಚೆನ್ನಾಗಿ ಆಡು ದೋಸ್ತಾ’ ಎಂದು ಹನುಮಂತನಿಗೆ ಧನರಾಜ್ ಬೆನ್ನು ತಟ್ಟಿದರು. ‘ಮಂಜು ಅವರೇ ನೀವು ಸೈಲೆಂಟ್ ಆಗಿ ಇರಬಾರದು. ಎದುರು ಉತ್ತರ ನೀಡುವ ರೀತಿ ನಿಮ್ಮನ್ನು ನಾವು ನೋಡಬೇಕು’ ಎಂದು ಹುರಿದುಂಬಿಸಿದರು. ‘ನನ್ನನ್ನು ನಿಮ್ಮ ಎದುರಿನ ಸ್ಪರ್ಧಿ ಅಂತ ನೀವು ಪರಿಗಣಿಸಿದ್ದು ನನಗೆ ಹೆಮ್ಮೆ ಎನಿಸಿತು. ಹೊರಗೂ ನಮ್ಮ ಸ್ನೇಹ ಮುಂದುವರಿಯಲಿ’ ಎಂದು ರಜತ್​ಗೆ ಧನರಾಜ್ ಹೇಳಿದರು.

ಇದನ್ನೂ ಓದಿ: ಗೌತಮಿ ಜಾದವ್ ಔಟ್ ಆದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಮಂಕಾದ ಉಗ್ರಂ ಮಂಜು

‘ಇಲ್ಲಿಯವರೆಗೆ ಇದ್ದಿದ್ದು ನನಗೆ ಖುಷಿ ಇದೆ. ಈ ವೇದಿಕೆಯಲ್ಲಿ ನಿಮ್ಮ ಜೊತೆ ಮಾತನಾಡಿದ್ದು ನನ್ನ ಪುಣ್ಯ. ಹನುಮಂತ ನನ್ನ ಜೀವನ. ಅವನು ಶಕ್ತಿ ನೀಡಿದ್ದಾನೆ. ನಾವು ಖುಷಿಯಿಂದ ಆ ಮನೆಯಲ್ಲಿ ಜೀವಿಸಿದ್ದೇವೆ’ ಎಂದು ಸುದೀಪ್ ಎದುರಲ್ಲಿ ಹನುಮಂತ ಹೇಳಿದರು. ಧನರಾಜ್ ಔಟ್ ಆಗಿದ್ದಕ್ಕೆ ಹನುಮಂತ ಕಣ್ಣೀರು ಹಾಕಿದರು. ತುಂಬ ಸಾಫ್ಟ್ ಎಂಬಂತಹ ವ್ಯಕ್ತಿ ಇಲ್ಲಿಯ ತನಕ ಬಂದಿದ್ದಕ್ಕೆ ಅವರಿಗೂ ಖುಷಿ ಇದೆ. ಕೊನೇ ವಾರ ಅವರು ಹಲವು ಟಾಸ್ಕ್​ನಲ್ಲಿ ಉತ್ತಮವಾಗಿ ಆಡಿದ್ದರು. ಈ ಮೊದಲು ಕಿಚ್ಚನ ಚಪ್ಪಾಳೆ ಹಾಗೂ ಕ್ಯಾಪ್ಟನ್ ಪಟ್ಟ ಕೂಡ ಅವರಿಗೆ ಸಿಕ್ಕಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.