ತ್ರಿವಿಕ್ರಮ್ ಹೇಳಿದ ಹುಲಿ-ಜಿಂಕೆ ಕತೆ, ಯಾರು ಹುಲಿ? ಯಾರು ಜಿಂಕೆ?
Bigg Boss Kannada season 11: ಬಿಗ್ಬಾಸ್ ಕನ್ನಡ ಸೀಸನ್ 11 ರ ಕೊನೆಯ ವಾರದ ಪಂಚಾಯಿತಿಯನ್ನು ಶನಿವಾರ ಸುದೀಪ್ ನಡೆಸಿಕೊಟ್ಟರು. ಈ ವೇಳೆ ಚರ್ಚೆಯೊಂದಕ್ಕೆ ಸಂಬಂಧಿಸಿದಂತೆ ಸುದೀಪ್ ಎದುರು ತ್ರಿವಿಕ್ರಮ್ ಹುಲಿ ಹಾಗೂ ಜಿಂಕೆ ಕತೆಯೊಂದನ್ನು ಹೇಳಿದರು. ಅಂದಹಾಗೆ ಬಿಗ್ಬಾಸ್ ಮನೆಯಲ್ಲಿ ಯಾರು ಜಿಂಕೆ? ಯಾರು ಹುಲಿ?
ಬಿಗ್ಬಾಸ್ ಕನ್ನಡ ಸೀಸನ್ 11 ರ ಕೊನೆಯ ವಾರದ ಪಂಚಾಯಿತಿ ಶನಿವಾರ (ಜನವರಿ 18) ಪ್ರಾರಂಭ ಆಗಿದೆ. ಶನಿವಾರದ ಎಪಿಸೋಡ್ನಲ್ಲಿ ಸುದೀಪ್ ಒಬ್ಬ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಿದ್ದಾರೆ. ಶನಿವಾರದ ಎಪಿಸೋಡ್ನಲ್ಲಿ ಗೌತಮಿ, ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಇನ್ನೂ ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಹೋಗುವುದು ಬಾಕಿ ಇದೆ. ಶನಿವಾರದ ವಾರದ ಪಂಚಾಯಿತಿಯಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದವು. ಈ ವೇಳೆ ತ್ರಿವಿಕ್ರಮ್, ಸುದೀಪ್ ಎದುರು ಹುಲಿ ಮತ್ತು ಜಿಂಕೆಯ ಕತೆ ಹೇಳಿದರು. ಅಂದಹಾಗೆ ಯಾರು ಜಿಂಕೆ? ಯಾರು ಹುಲಿ?
ಸುದೀಪ್ ಎದುರು ಹುಲಿ-ಜಿಂಕೆ ಕತೆ ಹೇಳಿದ ತ್ರಿವಿಕ್ರಮ್. ಒಂದು ಕಾಡಿನಲ್ಲಿ ಒಂದು ಹುಲಿ ಇತ್ತು, ಆ ಹುಲಿ ಭೇಟಿ ಆಡಿಕೊಂಡು, ಮಾಂಸ ತಿಂದುಕೊಂಡು ಆರಾಮವಾಗಿ ಇತ್ತು. ಹೀಗೆ ಕಾಡಿನಲ್ಲಿ ಬರುವಾಗ ದೇವಸ್ಥಾನದ ಎದುರು ಒಂದು ಜಿಂಕೆಯನ್ನು ನೋಡಿತು. ಆ ಜಿಂಕೆಯೂ ಹೆದರಿತ್ತು. ಆದರೆ ಜಿಂಕೆ, ಹುಲಿ ಜೊತೆ ಗೆಳೆತನ ಮಾಡಿಕೊಂಡಿತು. ಅಬ್ಬರಿಸುತ್ತಿದ್ದ ಆ ಹುಲಿಯನ್ನು ಈ ಜಿಂಕೆ ಮೆತ್ತಗೆ ಮಾಡಿಬಿಟ್ಟಿತು. ಆ ಹುಲಿಗೆ ನಾನ್ ವೇಜ್ ತಿನ್ನಬೇಡ ಅಂತು. ಬೇಟೆ ಆಡಬೇಡ ಅಂತು, ಹುಲಿ ಸಹ ಮಾಂಸ ತಿನ್ನುವುದು ಬಿಟ್ಟಿತು, ಬೇಟೆ ಆಡುವುದನ್ನು ಬಿಟ್ಟಿತು. ಈಗ ಹುಲಿ ಹಸಿದುಕೊಂಡಿದೆ ಆದರೆ ಬೇಟೆ ಆಡುವುದನ್ನೇ ಮರೆತುಬಿಟ್ಟಿದೆ’ ಎಂದರು ತ್ರಿವಿಕ್ರಮ್.
ಇದನ್ನೂ ಓದಿ:ತ್ರಿವಿಕ್ರಮ್ ಅನ್ನು ಬಳಸಿಕೊಂಡರೇ ಭವ್ಯಾ: ಸುದೀಪ್ ಎದುರು ಬಿಸಿ-ಬಿಸಿ ಚರ್ಚೆ
ಅಸಲಿಗೆ ಈ ಕತೆಯನ್ನು ತ್ರಿವಿಕ್ರಮ್ ಹೇಳಿದ್ದು ಉಗ್ರಂ ಮಂಜು ಮತ್ತು ಗೌತಮಿ ಅವರನ್ನು ಉದ್ದೇಶಿಸಿ. ಕತೆಯಲ್ಲಿ ಬೇಟೆ ಆಡುವುದನ್ನು ಮರೆತಿರುವ ಹುಲಿ ಉಗ್ರಂ ಮಂಜು. ಜಿಂಕೆ ಗೌತಮಿ. ಆದರೆ ಆ ನಂತರ ಮಾತನಾಡಿದ ಸುದೀಪ್, ಉಗ್ರಂ ಮಂಜು ಅವರು ಗೌತಮಿ ಜೊತೆಗೆ ಇದ್ದರು ಕೊನೆಯ ವಾರದಲ್ಲಿ ಅವರನ್ನೇ ನಾಮಿನೇಟ್ ಮಾಡಿದರು. ಗೌತಮಿ-ಗೌತಮಿ ಎನ್ನುತ್ತಲೇ ಕೊನೆಯ ಮೆಟ್ಟಿಲಿನಿಂದ ಕೆಳಗೆ ತಳ್ಳಿದರು. ಹಾಗಿದ್ದರೆ ಇಲ್ಲಿ ಜಿಂಕೆ ಮಂಜು, ಹುಲಿ ಗೌತಮಿ ಅನ್ನಿಸುತ್ತಿಲ್ಲವೆ? ಎಂದು ಪ್ರಶ್ನೆ ಮಾಡಿದರು.
ಆದರೆ ಈಗ ಗೌತಮಿಯ ಆಟ ಮುಗಿದಿದೆ. ಬಿಗ್ಬಾಸ್ ಮನೆಯಿಂದ ಗೌತಮಿ ಹೊರ ಹೋಗಿದ್ದಾಗಿದೆ. ಉಗ್ರಂ ಮಂಜು ಇನ್ನೂ ಮನೆಯಲ್ಲಿ ಉಳಿದಿದ್ದಾರೆ. ಆದರೆ ಭಾನುವಾರದ ಎಪಿಸೋಡ್ನಲ್ಲಿಯೂ ಒಬ್ಬರು ಮನೆಯಿಂದ ಹೊರಗೆ ಹೋಗಲಿದ್ದಾರೆ. ಅದು ಯಾರೆಂಬುದು ಪ್ರಶ್ನೆ. ರಜತ್, ಉಗ್ರಂ ಮಂಜು, ಧನರಾಜ್ ಮತ್ತು ಭವ್ಯಾ ಗೌಡ ಅವರ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಇಷ್ಟರಲ್ಲಿ ಯಾರಾದರೂ ಒಬ್ಬರು ಭಾನುವಾರದ ಎಪಿಸೋಡ್ನಲ್ಲಿ ಮನೆಗೆ ಹೋಗಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ