AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಸಿಕ್ತು ಉತ್ತರ; ಯಶ್ ಮೇಕೋವರ್ ನೋಡಿ

ಯಶ್ ಅವರ ‘ಟಾಕ್ಸಿಕ್’ ಚಿತ್ರದ ‘ಟಿಕೆಟ್’ ಲುಕ್ ಎಐ ಸೃಷ್ಟಿ ಎಂಬ ವದಂತಿಗಳಿಗೆ ತೆರೆ ಬಿದ್ದಿದೆ. ಸೆಲೆಬ್ರಿಟಿ ಹೇರ್‌ಸ್ಟೈಲಿಸ್ಟ್ ಅಲೆಕ್ಸ್ ವಿಜಯ್ ಕಾಂತ್ ಹಂಚಿಕೊಂಡ ವಿಡಿಯೋದಲ್ಲಿ, ಯಶ್ ಅವರ ನಿಜವಾದ ಮೇಕೋವರ್ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಪರ್ಫೆಕ್ಷನಿಸ್ಟ್ ಯಶ್ ತಮ್ಮ ಪಾತ್ರಕ್ಕಾಗಿ ವಹಿಸಿದ ಕಾಳಜಿ ಮತ್ತು ಶ್ರಮದಿಂದ ಈ ಯಂಗ್ ಲುಕ್ ಪಡೆದಿರುವುದು ದೃಢಪಟ್ಟಿದೆ.

ಯಶ್ ‘ಟಿಕೆಟ್’ ಲುಕ್ ಎಐ ಎಂದವರಿಗೆ ಸಿಕ್ತು ಉತ್ತರ; ಯಶ್ ಮೇಕೋವರ್ ನೋಡಿ
ಯಶ್
ರಾಜೇಶ್ ದುಗ್ಗುಮನೆ
|

Updated on:Feb 23, 2026 | 11:17 AM

Share

‘ಟಾಕ್ಸಿಕ್’ ಚಿತ್ರದ (Toxic Movie) ಮೂಲಕ ಯಶ್ ಅವರು ಜನರ ಎದುರು ಬರಲು ರೆಡಿ ಆಗಿದ್ದಾರೆ. ಈ ಚಿತ್ರದ ಟೀಸರ್ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಯಶ್ ಅವರು ಎರಡು ಲುಕ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ರಾಯ ಮತ್ತೊಂದು ಟಿಕೆಟ್. ಈ ಲುಕ್​​ ಅಲ್ಲಿ ಯಶ್ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಇದನ್ನು ಎಐ ಮೂಲಕ ಮಾಡಲಾಗಿದೆ ಎಂದು ಹೇಳಲಾಗಿತ್ತು. ಇದಕ್ಕೆ ಉತ್ತರ ಸಿಕ್ಕಿದೆ.

ಯಶ್ ಅವರು ಪರ್ಫೆಕ್ಷನಿಸ್ಟ್. ಏನೇ ಮಾಡಿದರೂ ಪರ್ಫೆಕ್ಟ್ ಆಗಿ ಮಾಡಬೇಕು ಎಂದು ಬಯಸುತ್ತಾರೆ. ‘ಕೆಜಿಎಫ್’, ‘ಕೆಜಿಎಫ್ 2’ ಚಿತ್ರಗಳಲ್ಲಿ ಇದು ಕಾಣಿಸಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಅವ ಜವಾಬ್ದಾರಿ ಹೆಚ್ಚಿದೆ. ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ನಿರ್ಮಾಪಕರಲ್ಲಿ ಅವರೂ ಒಬ್ಬರು. ಹೀಹಾಗಿ, ಸಿನಿಮಾ ಮೇಕಿಂಗ್ ವಿಷಯದಲ್ಲಿ ಅವರೂ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ‘ಟಾಕ್ಸಿಕ್’ ಚಿತ್ರದಲ್ಲಿ ಬರೋ ಟಿಕೆಟ್ ಪಾತ್ರವನ್ನು ಅವರೇ ನಿಂತು ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

ಯಶ್ ಅವರ ಲುಕ್​​ನ ಹೇಗೆ ಬದಲಾಯಿಸಲಾಯಿತು ಎಂಬುದಕ್ಕೆ ಸೆಲೆಬ್ರಿಟಿ ಹೇರ್​ಸ್ಟೈಲಿಸ್ಟ್ ಅಲೆಕ್ಸ್ ವಿಜಯ್ ಕಾಂತ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯಶ್ ಮೇಕೋವರ್ ತೋರಿಸಲಾಗಿದೆ. ಹೇರ್ ಕಟಿಂಗ್, ಗಡ್ಡ ಟ್ರಿಮ್ ಮಾಡಿ ಬಳಿಕ ಯಶ್ ಅವರು ಸಖತ್ ಯಂಗ್ ಆಗಿ ಕಾಣಿಸಿದ್ದಾರೆ. ಈ ಲುಕ್ ಗಮನ ಸೆಳೆಯೋ ರೀತಿಯಲ್ಲಿ ಇದೆ.

ಇದನ್ನೂ ಓದಿ: ರಿಲೀಸ್​​ಗೂ ಮೊದಲೇ ದೊಡ್ಡ ಲಾಭ ಕಂಡ ‘ಟಾಕ್ಸಿಕ್’; ‘ಧುರಂಧರ್ 2’ ಹಿಂದಿಕ್ಕಿದ ಯಶ್ ಚಿತ್ರ

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರ ಈ ಲುಕ್ ಐಡಿಯಾ ಯಾರಿಗೆ ಬಂದಿದ್ದು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಈ ವಿಷಯದಲ್ಲಿ ಮುಂದಿನ ದಿನಗಳಲ್ಲಿ ಮಾಹಿತಿ ನೀಡುವ ಸಾಧ್ಯತೆ ಇದೆ. ‘ಟಾಕ್ಸಿಕ್ ’ ಸಿನಿಮಾಗೆ ಭರ್ಜರಿ ಈವೆಂಟ್ ಆಯೋಜನೆ ಮಾಡವ ಸಾಧ್ಯತೆ ಇದೆ. ಇದಕ್ಕಾಗಿ ಫ್ತಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:12 am, Mon, 23 February 26