AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮ ಸಹವಾಸ ಸಾಕಾಗಿದೆ’; ಸ್ಪರ್ಧಿಗಳಿಗೆ ನೇರವಾಗಿ ಹೇಳಿದ ಸುದೀಪ್

ಬಿಗ್ ಬಾಸ್ ಕನ್ನಡ ಸೀಸನ್ 11 ಫೈನಲ್ ಹಂತಕ್ಕೆ ಬಂದಿದೆ. ಈ ಸೀಸನ್ ನಲ್ಲಿ ಸುದೀಪ್ ಅವರು ಸ್ಪರ್ಧಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅನೇಕರು ಈ ಸೀಸನ್ ಅನ್ನು ‘ಕೆಟ್ಟ ಸೀಸನ್’ ಎಂದು ಟೀಕಿಸಿದ್ದಾರೆ. ಸುದೀಪ್ ಅವರು ಬಿಗ್ ಬಾಸ್ ನಿಂದ ನಿರ್ಗಮಿಸುವ ಬಗ್ಗೆ ಘೋಷಿಸಿದ್ದಾರೆ ಆದರೆ ಕಲರ್ಸ್ ಕನ್ನಡ ಇನ್ನೂ ಅದಕ್ಕೆ ಒಪ್ಪಿಗೆ ನೀಡಿಲ್ಲ.

‘ನಿಮ್ಮ ಸಹವಾಸ ಸಾಕಾಗಿದೆ’; ಸ್ಪರ್ಧಿಗಳಿಗೆ ನೇರವಾಗಿ ಹೇಳಿದ ಸುದೀಪ್
ರಜತ್-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Jan 20, 2025 | 7:32 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ ಕೊನೆಯ ಹಂತಕ್ಕೆ ಬಂದಿದೆ. ಇನ್ನೊಂದು ವಾರದಲ್ಲಿ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಸದ್ಯ ದೊಡ್ಮನೆಯಲ್ಲಿ ಆರು ಸ್ಪರ್ಧಿಗಳು ಇದ್ದು, ಈ ವಾರಾಂತ್ಯದಲ್ಲಿ ಫಿನಾಲೆ ನಡೆಯಲಿದೆ. ಈ ಸೀಸನ್​ನಲ್ಲಿ ಉತ್ತಮ ಟಿಆರ್​ಪಿ ಬಂದಿದೆ ನಿಜ. ಆದರೆ, ಸ್ಪರ್ಧಿಗಳು ನಡೆದುಕೊಂಡ ರೀತಿಗೆ ಸುದೀಪ್ ಬೇಸರಗೊಂಡಿದ್ದಾರೆ. ಇದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದೂ ಇದೆ. ‘ಅತ್ಯಂತ ಕೆಟ್ಟ ಸೀಸನ್’ ಎಂದು ಅನೇಕರು ಟೀಕೆ ಮಾಡಿದ್ದೂ ಇದೆ. ಈಗ ಸ್ಪರ್ಧಿಗಳಿಗೆ ಸುದೀಪ್ ಅವರು ಈ ಬಗ್ಗೆ ನೇರವಾಗಿ ಹೇಳಿದ್ದಾರೆ.

ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಫನ್ ಮೂಡ್​ನಲ್ಲಿ ಇರುತ್ತಾರೆ. ಏನೇ ಹೇಳಿದರೂ ಅದನ್ನು ಫನ್ ಆಗಿ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಯಾರು ಹೊರ ಹೋಗುತ್ತಾರೆ ಎಂದು ಕೇಳುತ್ತಾ ಬರಲಾಯಿತು. ಆಗ ಎಲ್ಲರೂ ಫನ್ ಆಗಿ ಉತ್ತರ ಕೊಟ್ಟರು. ರಜತ್ ಅವರು ಸುದೀಪ್​ನ ಹೊಗಳಿದರು. ಇದಕ್ಕೆ ಸುದೀಪ್ ಅವರು ನೇರ ಮಾತುಗಳಲ್ಲಿ ಕೌಂಟರ್ ಕೊಟ್ಟಿದ್ದಾರೆ.

‘ಯಾವ ಸೀಸನ್​ನಲ್ಲೂ ಇಲ್ಲದಿರೋ ಕಳೆ ನಿಮಗೆ ಈ ಸೀಸನ್​ನಲ್ಲಿ ಬಂದಿದೆ’ ಎಂದು ರಜತ್ ಅವರು ಸುದೀಪ್ ಬಳಿ ಹೇಳಿದರು. ಇದಕ್ಕೆ ಉತ್ತರಿಸಿದ ಸುದೀಪ್ ಅವರು, ‘ಯಾವ ಸೀಸನ್​ನಲ್ಲೂ ಇಲ್ಲದಿರೋ ಕಳೆ ಈಗ ಯಾಕೆ ಬಂತು ಎಂದರೆ, ಈ ಸೀಸನ್ ಇನ್ನೊಂದು ವಾರ ಇದೆಯಲ್ಲ. ಅದಕ್ಕೆ ಕಳೆ ಬಂದಿದೆ. ನಿಮ್ಮ ಸಹವಾಸ ಸಾಕಾಗಿದೆ’ ಎಂದು ಸುದೀಪ್ ಹೇಳಿದ್ದಾರೆ.

ಇದನ್ನೂ ಓದಿ: ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್

ಈಗಾಗಲೇ ಸುದೀಪ್ ಅವರು ಬಿಗ್ ಬಾಸ್ ತೊರೆಯುವ ನಿರ್ಧಾರ ಮಾಡಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಘೋಷಣೆ ಕೂಡ ಮಾಡಿದ್ದಾರೆ. ಆದರೆ, ಕಲರ್ಸ್ ಕನ್ನಡ ಕಡೆಯಿಂದ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅವರು ಈ ಬಗ್ಗೆ ಯೋಚಿಸೋದಾಗಿ ಹೇಳಿದ್ದಾರೆ. ಅವರು ಮನಸ್ಸು ಬದಲಿಸಲಿ ಎಂದು ಫ್ಯಾನ್ಸ್ ಕೋರುತ್ತಾ ಇದ್ದಾರೆ. ಆ ಬಗ್ಗೆ ಸುದೀಪ್ ಫಿನಾಲೆ ದಿನ ಘೋಷಣೆ ಮಾಡುವ ಸಾಧ್ಯತೆ ಇದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More