ಗೌತಮಿ ಜಾದವ್ ಔಟ್ ಆದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಮಂಕಾದ ಉಗ್ರಂ ಮಂಜು

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆಟದಲ್ಲಿ ಗೌತಮಿ ಜಾದವ್ ಹಾಗೂ ಉಗ್ರಂ ಮಂಜು ತುಂಬಾ ಆತ್ಮೀಯವಾಗಿ ಇದ್ದರು. ಎಷ್ಟೇ ಆಪ್ತವಾಗಿ ಇದ್ದರೂ ಕೂಡ ಒಂದು ದಿನ ದೂರಾಗಲೇ ಬೇಕಿತ್ತು. ಆ ದಿನ ಬಂದೇ ಬಿಡ್ತು. ಗೌತಮಿ ಅವರು ಶನಿವಾರ (ಜನವರಿ 18) ಎಲಿಮಿನೇಟ್ ಆದರು. ಬಳಿಕ ಉಗ್ರಂ ಮಂಜು ಮಂಕಾಗಿ ಕುಳಿತುಕೊಂಡರು.

ಗೌತಮಿ ಜಾದವ್ ಔಟ್ ಆದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಮಂಕಾದ ಉಗ್ರಂ ಮಂಜು
Ugram Manju
Follow us
ಮದನ್​ ಕುಮಾರ್​
|

Updated on:Jan 19, 2025 | 9:52 PM

ಉಗ್ರಂ ಮಂಜು ಅವರು ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಬಹಳ ಜೋಶ್ ಹೊಂದಿದ್ದರು. ಆದರೆ ನಂತರದ ದಿನಗಳಲ್ಲಿ ಅವರು ಮೆತ್ತಗಾದರು. ಯಾವಾಗ ಅವರಿಗೆ ಗೌತಮಿ ಜಾದವ್ ಜೊತೆ ಸ್ನೇಹ ಬೆಳೆಯಿತೋ ಆಗಲೇ ಅವರ ಆಟದ ಲಯ ಬದಲಾಯಿತು. ಗೌತಮಿಯ ಸ್ನೇಹದಲ್ಲಿಯೇ ಅವರು ಸದಾ ಕಾಲ ಮುಳುಗಿ ಇರುತ್ತಿದ್ದರು. ಇದನ್ನು ಅನೇಕರು ಗಮನಿಸಿ ಹೇಳಿದರು. ಆದರೂ ಕೂಡ ಉಗ್ರಂ ಮಂಜು ಬುದ್ಧಿ ಕಲಿತಿರಲಿಲ್ಲ. ಈಗ ಗೌತಮಿ ಅವರು ಬಿಗ್ ಬಾಸ್ ಆಟದಿಂದ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಗೌತಮಿಯ ಅನುಪಸ್ಥಿತಿಯಿಂದ ಉಗ್ರಂ ಮಂಜು ಮಂಕಾಗಿದ್ದಾರೆ.

ಕಳೆದ ವಾರ ನಾಮಿನೇಷನ್​ನಲ್ಲಿ ಉಗ್ರಂ ಮಂಜು ಅವರು ಗೌತಮಿಯ ಹೆಸರು ತೆಗೆದುಕೊಂಡಿದ್ದರು. ಅದರಿಂದ ಗೌತಮಿಗೆ ಬೇಸರ ಆಗಿತ್ತು. ಡೇಂಜರ್​ ಜೋನ್​ನಲ್ಲಿ ರಜತ್, ಭವ್ಯಾ ಗೌಡ, ಧನರಾಜ್, ಉಗ್ರಂ ಮಂಜು ಹಾಗೂ ಗೌತಮಿ ಜಾದವ್ ಅವರು ಇದ್ದರು. ಎಲ್ಲರೂ ಸೇಫ್ ಆಗಿ ಗೌತಮಿ ಎಲಿಮಿನೇಟ್​ ಆದರು. ಈ ವಿಷಯ ತಿಳಿದ ಕೂಡಲೇ ಉಗ್ರಂ ಮಂಜು ಅವರು ಮಂಕಾಗಿ ಕುಳಿತರು.

ಒಂದು ವೇಳೆ ಗೌತಮಿ ಜಾದವ್ ಅವರು ಉಗ್ರಂ ಮಂಜು ಜೊತೆ ಕೈ ಜೋಡಿಸದೇ ಇದ್ದಿದ್ದರೆ ಅವರ ಆಟ ಬೇರೆ ರೀತಿ ಇರುತ್ತಿತ್ತು. ಗೌತಮಿ ಬೇರೆ ಸ್ಪರ್ಧಿಗಳ ಜೊತೆಗೂ ಬೆರೆಯಬಹುದಿತ್ತು. ಅದೇ ರೀತಿ ಉಗ್ರಂ ಮಂಜು ಕೂಡ ಇನ್ನುಳಿದ ಸ್ಪರ್ಧಿಗಳ ಜೊತೆಗೆ ಬೆರೆಯುವ ಅವಕಾಶ ಇತ್ತು. ಆದರೆ ಅದರ ಬಗ್ಗೆ ಗೌತಮಿ ಮತ್ತು ಉಗ್ರಂ ಮಂಜು ಗಮನ ನೀಡಲೇ ಇಲ್ಲ. ಅದರಿಂದ ಇಬ್ಬರ ಆಟದ ಮೇಲೆ ಪರಿಣಾಮ ಬೀರಿತು.

ಇದನ್ನೂ ಓದಿ: ಮಂಜು ಸ್ನೇಹ ಬದಲಾಗಲ್ಲ: ಎಲಿಮಿನೇಟ್ ಬಳಿಕ ಗೌತಮಿ ಮಾತು

ನೋಡನೋಡುತ್ತಿದ್ದಂತೆಯೇ ಬಿಗ್ ಬಾಸ್ ಫಿನಾಲೆ ಬಂದೇ ಬಿಟ್ಟಿದೆ. 11ನೇ ಸೀಸನ್​ನಲ್ಲಿ ಉತ್ತಮ ಟಿಆರ್​ಪಿ ಕೂಡ ಸಿಕ್ಕಿದೆ. ಸಿಂಗರ್ ಹನುಮಂತ ಅವರು ಮೊದಲು ಫಿನಾಲೆ ಟಿಕೆಟ್ ಪಡೆದರು. ಅವರ ಆಟ ಡಿಫರೆಂಟ್ ಆಗಿದೆ. ನೇರ ನಡೆ-ನುಡಿಯಿಂದ ಅವರು ಗಮನ ಸೆಳೆದಿದ್ದಾರೆ. ಅವರೇ ಗೆಲ್ಲಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವರು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅಂತಿಮವಾಗಿ ಯಾರಿಗೆ ಕಪ್ ಸಿಗಲಿದೆ ಎಂಬುದನ್ನು ತಿಳಿಯುವ ಸಮಯ ಹತ್ತಿರದಲ್ಲೇ ಇದೆ. ಮುಂದಿನ ವೀಕೆಂಡ್​ನಲ್ಲಿ ಫಿನಾಲೆ ಎಪಿಸೋಡ್ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:51 pm, Sun, 19 January 25