Karan Veer Mehra: ಹಿಂದಿ ಬಿಗ್ ಬಾಸ್ ಟ್ರೋಫಿ ಗೆದ್ದ ಕರಣ್ ವೀರ್ ಮೆಹ್ರಾ; ಇವರಿಗೆ ಸಿಕ್ಕ ಹಣ ಎಷ್ಟು?

Bigg Boss 18 Winner: ಬಿಗ್ ಬಾಸ್ 18 ರ ಗ್ರ್ಯಾಂಡ್ ಫಿನಾಲೆಯಲ್ಲಿ ಕರಣ್ ವೀರ್ ಮೆಹ್ರಾ ವಿನ್ ಆಗಿದ್ದಾರೆ. ಬಹುಮಾನ ಮೊತ್ತ ಮತ್ತು ಟ್ರೋಫಿಯನ್ನು ಗೆದ್ದಿದ್ದಾರೆ. ವಿವಿಯನ್ ದೇಸೇನಾ ಮೊದಲ ರನ್ನರ್ ಅಪ್ ಆಗಿದ್ದಾರೆ. 105 ದಿನಗಳ ರಿಯಾಲಿಟಿ ಶೋ ನಂತರ, ಕರಣ್ ಅವರ ಪ್ರಾಮಾಣಿಕತೆ ಮತ್ತು ಆಟದಲ್ಲಿನ ಅವರ ಉತ್ತಮ ಪ್ರದರ್ಶನ ಅವರ ಗೆಲುವಿಗೆ ಕಾರಣವಾಯಿತು.

Karan Veer Mehra: ಹಿಂದಿ ಬಿಗ್ ಬಾಸ್ ಟ್ರೋಫಿ ಗೆದ್ದ ಕರಣ್ ವೀರ್ ಮೆಹ್ರಾ; ಇವರಿಗೆ ಸಿಕ್ಕ ಹಣ ಎಷ್ಟು?
ಕರಣ್ ವೀರ್
Follow us
ರಾಜೇಶ್ ದುಗ್ಗುಮನೆ
|

Updated on:Jan 20, 2025 | 7:10 AM

‘ಬಿಗ್ ಬಾಸ್ 18′ ರ ಗ್ರ್ಯಾಂಡ್ ಫಿನಾಲೆ ಪೂರ್ಣಗೊಂಡಿದೆ. 105 ದಿನಗಳ ಕಾಲ ನಡೆದ ಆಟದಲ್ಲಿ ಕರಣ್ ವೀರ್ ಮೆಹ್ರಾ ಅವರು ಟ್ರೋಫಿ ಗೆದ್ದಿದ್ದಾರೆ. ವಿವಿಯನ್ ದೇಸೇನಾ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಕರಣ್ ಅವರಿಗೆ ಆಕರ್ಷಕ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಬಹುಮಾನ ಮೊತ್ತ ಸಿಕ್ಕಿದೆ. ಸಲ್ಮಾನ್ ಖಾನ್ ಅವರು ತಡರಾತ್ರಿ ಈ ಘೋಷಣೆ ಮಾಡಿದರು. ಕರಣ್​ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸುತ್ತಾ ಇದ್ದಾರೆ.

ಈ ಸೀಸನ್‌ನಲ್ಲಿ 23 ಸ್ಪರ್ಧಿಗಳು ಭಾಗವಹಿಸಿದ್ದರು. ಇವರಲ್ಲಿ ವಿವಿಯನ್ ದೇಸೇನಾ, ಕರಣ್​ ವೀರ್ ಮೆಹ್ರಾ, ರಜತ್ ದಲಾಲ್, ಅವಿನಾಶ್ ಮಿಶ್ರಾ, ಚುಮ್ ದರಾಂಗ್ ಮತ್ತು ಇಶಾ ಸಿಂಗ್ ಟಾಪ್ 6 ಅಲ್ಲಿ ಸ್ಥಾನ ಪಡೆದರು. ವಿವಿಯನ್ ದೇಸೇನಾ ಮತ್ತು ಕರಣ್​ ವೀರ್ ಮೆಹ್ರಾ ನಡುವೆ ಅಂತಿಮ ಹಣಾಹಣಿ ನಡೆಯಿತು. ಕರಣ್ 50 ಲಕ್ಷ ರೂಪಾಯಿ ಬಹುಮಾನ ಮತ್ತು ಬಿಗ್ ಬಾಸ್ ಟ್ರೋಫಿಯನ್ನು ಪಡೆದಿದ್ದಾರೆ.

View this post on Instagram

A post shared by ColorsTV (@colorstv)

ಕರಣ್ ​ವೀರ್ ಮೆಹ್ರಾಗೆ ರಿಯಾಲಿಟಿ ಶೋ ಹೊಸದೇನೂ ಅಲ್ಲ. ಈ ಮೊದಲು ಅವರು ‘ಖತ್ರೋ ಕೆ ಕಿಲಾಡಿ’ ಟೈಟಲ್ ಗೆದ್ದಿದ್ದರು. ನಂತರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈಗ ಈ ಟೈಟಲ್ ಕೂಡ ಗೆದ್ದು ದಾಖಲೆ ಬರೆದಿದ್ದಾರೆ.

ಬಿಗ್‌ಬಾಸ್‌ ಆರಂಭ ಆದ ದಿನದಿಂದಲೇ ಕರಣ್‌ನ ಸುದ್ದಿಯಲ್ಲಿದ್ದರು. ಅವರು ಸ್ನೇಹಕ್ಕೆ ಬೆಲೆ ಕೊಡುತ್ತಾ, ಆಟದಲ್ಲಿ ಉತ್ತಮ ಪ್ರದರ್ಶನ ನೀಡಿ, ಎಲ್ಲಿಯೂ ಮೋಸ ಮಾಡದೆ ಆಡುತ್ತಾ ಬಂದರು. ಈ ಕಾರಣಕ್ಕೆ ಅವರು ಎಲ್ಲರಿಗೂ ಇಷ್ಟವಾದರು. ಅವರ ಪ್ರಾಮಾಣಿಕತೆಯೇ ಅವರನ್ನು ಗೆಲ್ಲಿಸಿದೆ.

ಇದನ್ನೂ ಓದಿ:  ಫಿನಾಲೆ ಸಮೀಪದಲ್ಲಿ ಧನರಾಜ್ ಆಚಾರ್ ಎಲಿಮಿನೇಟ್

‘ಹಿಂದಿ ಬಿಗ್ ಬಾಸ್ 18’ನೇ ಸೀಸನ್ 2024ರ ಅಕ್ಟೋಬರ್ 6ರಂದು ಪ್ರಾರಂಭ ಆಯಿತು. 105 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಈ ಸ್ಪರ್ಧಿಗಳ ಪಯಣ ಕೊನೆಗೂ ಅಂತ್ಯಗೊಂಡಿದೆ. ಕನ್ನಡ ಬಿಗ್ ಬಾಸ್ ಫಿನಾಲೆಗೆ ಒಂದು ವಾರ ಇರುವಾಗಲೇ ಹಿಂದಿ ಬಿಗ್ ಬಾಸ್ ಫಿನಾಲೆ ನಡೆದಿದೆ.

ಕರಣ್​ವೀರ್ ಮೆಹ್ರಾ ಯಾರು?

ಕರಣ್​​ವೀರ್​ ಮೆಹ್ರಾ 2005ರಲ್ಲಿ ‘ರಿಮಿಕ್ಸ್’ ಕಾರ್ಯಕ್ರಮದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ನಂತರ ‘ಬೀವಿ ಔರ್ ಮೇ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ‘ರಾಗಿಣಿ ಎಂಎಂಎಸ್ 2′, ‘ಮೇರೆ ಡ್ಯಾಡ್ ಕಿ ಮಾರುತಿ’, ‘ಬ್ಲಡ್ ಮನಿ’, ಮೊದಲಾದ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಅವರು ‘ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಕಿಲಾಡಿ 14′ ಗೆದ್ದಿದ್ದಾರೆ. ಕರಣ್​ ವೀರ್​ ಅವರು ‘ಪವಿತ್ರ ರಿಶ್ತಾ’, ‘ಯೇ ರಿಶ್ತಾ ಕ್ಯಾ ಕೆಹ್ಲತಾ ಹೈ’, ‘ಪ್ಯಾರಿ ಹೂ ಮೇ’ ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:07 am, Mon, 20 January 25