ಬಿಗ್​ಬಾಸ್ ಕನ್ನಡ: ಕೊನೆಯ ಮೆಟ್ಟಿಲಲ್ಲಿ ಎಡವಿದ ಗೌತಮಿ

Bigg Boss Kannada season 11: ಬಿಗ್​ಬಾಸ್​ ಕನ್ನಡ ಸೀಸನ್​ 11ರ ಕೊನೆಯ ಪಂಚಾಯಿತಿ ಇಂದು ನಡೆಯಿತು. ಈ ವಾರ ರಜತ್, ಭವ್ಯಾ ಗೌಡ, ಗೌತಮಿ, ಉಗ್ರಂ ಮಂಜು ಮತ್ತು ಧನರಾಜ್ ನಾಮಿನೇಟ್ ಆಗಿದ್ದರು. ಈ ವಾರ ಇಬ್ಬರು ಹೊರಗೆ ಹೋಗಲಿದ್ದಾರೆ ಎಂದು ಸುದೀಪ್ ಮೊದಲೇ ಹೇಳಿದ್ದರು. ಅಂದಹಾಗೆ ಶನಿವಾರದ ಎಪಿಸೋಡ್​ನಲ್ಲಿ ಎಲಿಮಿನೇಟ್ ಆಗಿದ್ದು ಯಾರು?

ಬಿಗ್​ಬಾಸ್ ಕನ್ನಡ: ಕೊನೆಯ ಮೆಟ್ಟಿಲಲ್ಲಿ ಎಡವಿದ ಗೌತಮಿ
Bigg Boss Kannada 11
Follow us
ಮಂಜುನಾಥ ಸಿ.
|

Updated on: Jan 18, 2025 | 11:10 PM

ಬಿಗ್​ಬಾಸ್ ಕನ್ನಡ ಸೀಸನ್ 11ರ ಕೊನೆಯ ಎಲಿಮಿನೇಷನ್​ ವಾರದ ಪಂಚಾಯಿತಿಯಲ್ಲಿ ನಡೆದಿದೆ. ಈ ವಾರ ನಡೆಯಬೇಕಿದ್ದ ಮಿಡ್ ವೀಕ್ ಎಲಿಮಿನೇಷನ್ ಕಾರಣಾಂತರಗಳಿಂದ ನಡೆಯದಿದ್ದ ಕಾರಣ ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಸುದೀಪ್ ಮೊದಲೇ ಹೇಳಿ ಬಿಟ್ಟರು. ಹನುಮಂತು, ಮೋಕ್ಷಿತಾ ಮತ್ತು ತ್ರಿವಿಕ್ರಮ್ ಅವರುಗಳು ಮೊದಲೇ ಫಿನಾಲೆ ವಾರ ತಲುಪಿಬಿಟ್ಟಿದ್ದರು. ಉಳಿದವರು ರಜತ್, ಉಗ್ರಂ ಮಂಜು, ಧನರಾಜ್, ಭವ್ಯಾ ಗೌಡ ಮತ್ತು ಗೌತಮಿ. ಈ ಐವರಲ್ಲಿ ಗೌತಮಿ ಈ ಎಪಿಸೋಡ್​ನಲ್ಲಿ ಎಲಿಮಿನೇಟ್ ಆಗಿದ್ದಾರೆ.

ಕೊನೆಯ ಎಲಿಮಿನೇಷನ್ ಅನ್ನು ಆಸಕ್ತಿಕರವಾಗಿ ಮಾಡಿದರು ಸುದೀಪ್. ನಾಮಿನೇಟ್ ಆಗಿದ್ದ ಐದು ಮಂದಿಯನ್ನು ಆಕ್ಟಿವಿಟಿ ರೂಂಗೆ ಕರೆಸಿದ ಸುದೀಪ್. ಅಲ್ಲಿ ಪ್ರತಿ ಸ್ಪರ್ಧಿಯ ಮುಂದೆ ಒಂದೊಂದು ಸೂಟ್​ ಕೇಸ್ ಇಡಲಾಗಿತ್ತು. ಸೂಟ್​ಕೇಸ್​ ಒಳಗೆ ಯಾರು ಸೇಫ್ ಯಾರು ಎಲಿಮಿನೇಟ್ ಎಂದು ಬರೆಯಲಾಗಿತ್ತು. ಮೊದಲಿಗೆ ಸೂಟ್​ಕೇಸ್ ತೆರೆದ ರಜತ್ ಸೇಫ್ ಎಂಬ ಪತ್ರ ತೋರಿಸಿ ಧನ್ಯವಾದ ಹೇಳಿ ಮತ್ತೆ ಬಿಗ್​ಬಾಸ್ ಮನೆಯೊಳಗೆ ಹೋದರು.

ಅದಾದ ಬಳಿಕ ಉಗ್ರಂ ಮಂಜು ಅವರು ಸೂಟ್​ಕೇಸ್ ತೆರೆದರು ಅವರಿಗೂ ಸಹ ಸೇಫ್ ಎಂಬ ಸಂದೇಶವೇ ದೊರಕಿತು. ಇನ್ನು ಉಳಿದವರು ಭವ್ಯಾ, ಧನರಾಜ್ ಮತ್ತು ಗೌತಮಿ. ಅಲ್ಲಿ ಆಟವನ್ನು ತುಸು ಬದಲಾಯಿಸಿದ ಸುದೀಪ್, ಮೂವರೂ ಒಟ್ಟಿಗೆ ಸೂಟ್​ಕೇಸ್ ಓಪನ್ ಮಾಡಿ ಎಂದರು. ಮೂವರು ಒಟ್ಟಿಗೆ ಓಪನ್ ಮಾಡಿದಾಗ ಧನರಾಜ್ ಹಾಗೂ ಭವ್ಯಾ ಅವರಿಗೆ ಸೇಫ್ ಎಂಬ ಸಂದೇಶ ಸಿಕ್ಕರೆ ಗೌತಮಿಗೆ ಎವಿಕ್ಟೆಡ್ ಎಂಬ ಸಂದೇಶ ಸಿಕ್ಕಿತು. ಗೌತಮಿ ಅವರು ಸಣ್ಣದಾಗಿ ಕಣ್ಣೀರು ಹಾಕಿ ಧನರಾಜ್ ಹಾಗೂ ಭವ್ಯಾ ಗೌಡ ಅವರಿಗೆ ವಿದಾಯ ಹೇಳಿದರು.

ಇದನ್ನೂ ಓದಿ:ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್

ಸುದೀಪ್ ಅವರು, ಗೌತಮಿ ಅವರನ್ನು ವೇದಿಕೆಗೆ ಕರೆಸಿ ಮಾತನಾಡಿದ, ಪಾಸಿಟಿವ್ ಆಗಿಯೇ ಮಾತನಾಡಿದ ಗೌತಮಿ, ‘ಈ ಶೋಗೆ ನನ್ನನ್ನು ಕೇಳಿದಾಗಲೂ ಸಹ ಈ ಆಟಕ್ಕೆ ನಾನು ಸರಿ ಹೋಗುತ್ತೀನಾ ಎಂದು ಕೇಳಿದ್ದೆ. ನನಗೆ ಲೌಡ್ ಆಗಿ ಇರಲು ಬರುವುದಿಲ್ಲ. ನನಗೆ ಕೂಡಲೇ ಪ್ರತಿಕ್ರಿಯಿಸಲು ಬರುವುದಿಲ್ಲ. ನಾನು ಯೋಚಿಸಿ ಪ್ರತಿಕ್ರಿಯೆ ನೀಡುತ್ತೇನೆ. ಮಾತನಾಡುವ ಮುಂಚೆ ಎದುರು ನಿಂತಿರುವ ವ್ಯಕ್ತಿ ಬಗ್ಗೆ ಯೋಚನೆ ಮಾಡುತ್ತೀನಿ ಎಲ್ಲೋ ಅದೇ ನನ್ನ ಸೋಲಿಗೆ ಕಾರಣವಾಗಿದೆ ಎನಿಸುತ್ತದೆ’ ಎಂದರು.

ಅಂದಹಾಗೆ ಈಗ ಗೌತಮಿ ಅವರು ಎಲಿಮಿನೇಟ್ ಆಗಿರುವುದು ಈ ಎಪಿಸೋಡ್​ನಿಂದ. ಅಂದರೆ ಇನ್ನೂ ಒಂದು ಎಲಿಮಿನೇಷನ್ ಬಾಕಿ ಇದೆ. ರಜತ್, ಭವ್ಯಾ ಗೌಡ, ಧನರಾಜ್ ಮತ್ತು ಭವ್ಯಾ ಅವರ ಮೇಲೆ ಇನ್ನೂ ತೂಗುಗತ್ತಿ ನೇತಾಡುತ್ತಿದೆ. ನಾಳೆ (ಭಾನುವಾರ)ಯ ಎಪಿಸೋಡ್​ನಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ