AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ಣ ರಕ್ಷಣೆಗೆ ನಿಂತ ಸ್ತ್ರೀ ಶಕ್ತಿ; ಭಲೇ ಭಲೇ ಎಂದ ವೀಕ್ಷಕರು

ಜೀ ಕನ್ನಡದ 'ಕರ್ಣ' ಧಾರಾವಾಹಿಯಲ್ಲಿ ಅತ್ತೆಯ ಸಂಚಿನಿಂದ ಕರ್ಣ ಬಂಧಿತನಾಗಿದ್ದಾನೆ. ಆತನ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಿ ಬಳಸಿ ಹಲವರು ಮೃತಪಟ್ಟಿದ್ದಾರೆ. ಈಗ ಕರ್ಣನನ್ನು ಬಿಡಿಸಲು ಜೀ ಕನ್ನಡದ 'ಸ್ತ್ರೀ ಶಕ್ತಿ' ಒಂದಾಗಿದೆ. ದೀಪಾ, ಶ್ರಾವಣಿ, ರಾಣಿ ಸೇರಿ ಹಲವು ಕಲಾವಿದರು ಕರ್ಣನ ನೆರವಿಗೆ ನಿಂತಿದ್ದಾರೆ.

ಕರ್ಣ ರಕ್ಷಣೆಗೆ ನಿಂತ ಸ್ತ್ರೀ ಶಕ್ತಿ; ಭಲೇ ಭಲೇ ಎಂದ ವೀಕ್ಷಕರು
ಕರ್ಣ ಧಾರಾವಾಹಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 23, 2026 | 7:55 AM

Share

‘ಕರ್ಣ’ ಧಾರಾವಾಹಿಯಲ್ಲಿ (Karna Serial) ಕರ್ಣನಿಗೆ ಒಂದಲ್ಲಾ ಒಂದು ತೊಂದರೆಗಳು ಎದುರಾಗುತ್ತಲೇ ಇವೆ. ವೈರಿಗಳು ಆತನಿಗೆ ಬೇರೆ ಎಲ್ಲಿಯೂ ಇಲ್ಲ, ಇರೋದು ಮನೆಯಲ್ಲಿಯೇ ಎಂದರೂ ತಪ್ಪಾಗಲಾರದು. ಅಪ್ಪ ಎನಿಸಿಒಕೊಂಡವನು, ಅತ್ತೆ ಎನಿಸಿಕೊಂಡವಳು ಹಾಗೂ ತಮ್ಮನು ಈತನ ವಿರುದ್ಧ ಕತ್ತಿ ಮಸೆಯುವ ಕೆಲಸ ಮಾಡುತ್ತಿದ್ದಾನೆ. ಈ ಮೂಲಕ ಆತನಿಗೆ ಸಾಕಷ್ಟು ತೊಂದರೆ ಉಂಟು ಮಾಡುತ್ತಿದ್ದಾರೆ. ಆದರೆ, ಇದಕ್ಕೆಲ್ಲ ಕರ್ಣ ಹೆದರುವವನು ಅಲ್ಲ ಎಂದೇ ಹೇಳಬಹುದು. ಈಗ ಆತನಿಗೆ ಎದುರಾದ ಸಮಸ್ಯೆಗೆ ಇಡೀ ಜೀ ಕನ್ನಡ ವಾಹಿನಿಯ ಸ್ತ್ರೀ ಶಕ್ತಿ ಒಂದಾಗಿದೆ.

ಕರ್ಣ ಧಾರಾವಾಹಿಯಲ್ಲಿ ಕರ್ಣನ ವಿರುದ್ಧ ಆತನ ಅತ್ತೆಯೇ ಮಸಲತ್ತು ಮಾಡಿದ್ದಾಳೆ. ಹೌದು, ಕರ್ಣನ ಆಸ್ಪತ್ರೆಯಲ್ಲಿ ಔಷಧಿಗಳು ಎಕ್ಸ್​​ಪೈರಿ ಡೇಟ್ ಮುಗಿದರೂ ಅದನ್ನು ಬಳಸುವಂತೆ ಮಾಡಿದ್ದಾಳೆ ಆತನ ಅತ್ತೆ. ಆ ಬಳಿಕ ಶುರುವಾಯ್ತು ನೋಡಿ ಅಸಲಿ ಆಟ. ಈ ಔಷಧ ಸೇವನೆ ಮಾಡಿ ಕೆಲವರು ನಿಧನ ಹೊಂದಿದರು. ಹೀಗಾಗಿ, ಕರ್ಣನ ಅರೆಸ್ಟ್ ಮಾಡಲಾಗಿದೆ. ಕರ್ಣನ ತೆಗೆದುಕೊಂಡು ಹೋಗಿ ಜೈಲಿಗೆ ಹಾಕಲಾಗಿದೆ. ಇದರ ಹಿಂದೆ ಇರೋದು ಕರ್ಣನ ಅತ್ತೆ ಹಾಗೂ ತಂದೆ.

View this post on Instagram

A post shared by Zee Kannada (@zeekannada)

ಈಗ ಕರ್ಣನ ಬಿಡಿಸೋಕೆ ಜೀ ಕನ್ನಡದ ಇತರ ಧಾರಾವಾಹಿ ಕಲಾವಿದರು ಬಂದಿದ್ದಾರೆ. ದೀಪಾ, ಶ್ರಾವಣಿ, ರಾಣಿ, ಮಲ್ಲಿ, ನಿತ್ಯಾ ಹಾಗೂ ನಿಧಿ ಮೊದಲಾದವರು ಬಂದಿದ್ದಾರೆ. ಇದು ವೀಕ್ಷಕರ ಖುಷಿಗೆ ಕಾರಣ ಆಗಿದೆ. ‘ಕರ್ಣ’ ಧಾರಾವಾಹಿಯ ಈ ಟ್ವಿಸ್ಟ್ ವೀಕ್ಷಕರಿಗೆ ಖುಷಿ ಕೊಟ್ಟಿದೆ.

ಇದನ್ನೂ ಓದಿ: ‘ಕರ್ಣ’ ಧಾರಾವಾಹಿಗೆ ಎಂಟ್ರಿ ಆಯ್ತು ಹೊಸ ಪಾತ್ರ; ಇನ್ಮುಂದೆ ಮತ್ತಷ್ಟು ಟ್ವಿಸ್ಟ್

ಕರ್ಣ ಧಾರಾವಾಹಿಯಲ್ಲಿ ಸಾಕಷ್ಟು ತಿರುವುಗಳು ಎದುರಾಗುತ್ತಿದೆ. ಕರ್ಣ ಈಗಾಗಲೇ ನಿಧಿಯನ್ನು ಮದುವೆ ಆಗಿದ್ದಾಳೆ, ನಿತ್ಯಾಳನ್ನು ಆತ ಪ್ರೀತಿ ಮಾಡುತ್ತಿದ್ದಾನೆ. ಇವರ ಮದುವೆ ನೋಡಲು ಎಲ್ಲರೂ ಕಾದಿದ್ದಾರೆ. ನಿಧಿಗೆ ನಿಧಾನವಾಗಿ ಕರ್ಣನ ಮೇಲೆ ಪ್ರೀತಿ ಮೂಡುತ್ತಿದೆ. ಅಭಿಮಾನಿಗಳಿಗೆ ಇದು ಖುಷಿ ಕೊಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.