AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರ್ಣ’ ಧಾರಾವಾಹಿಗೆ ಎಂಟ್ರಿ ಆಯ್ತು ಹೊಸ ಪಾತ್ರ; ಇನ್ಮುಂದೆ ಮತ್ತಷ್ಟು ಟ್ವಿಸ್ಟ್

ಕರ್ಣ ಧಾರಾವಾಹಿಯಲ್ಲಿ ಇತ್ತೀಚೆಗೆ ಕರ್ಣನ ಸೇಡಿನ ಸರಣಿ ಆರಂಭವಾಗಿದೆ. ದುಷ್ಟ ಸಂಜಯ್‌ಗೆ ಪಾಠ ಕಲಿಸಲು ರಿಯಾ ಹೊಸದಾಗಿ ಪ್ರವೇಶಿಸಿದ್ದಾಳೆ. ಇವರಿಬ್ಬರ ಪ್ರೇಮ ಪ್ರಸಂಗ ಕಥೆಗೆ ಹೊಸ ತಿರುವು ನೀಡುವ ಸಾಧ್ಯತೆ ಇದೆ. ಕರ್ಣನು ನಿತ್ಯಾಳನ್ನು ಮದುವೆಯಾಗಿದ್ದರೂ, ನಿಧಿ ಮೇಲಿನ ಪ್ರೀತಿ ಬಹಿರಂಗವಾಗುವ ಸನ್ನಿವೇಶಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿವೆ.

‘ಕರ್ಣ’ ಧಾರಾವಾಹಿಗೆ ಎಂಟ್ರಿ ಆಯ್ತು ಹೊಸ ಪಾತ್ರ; ಇನ್ಮುಂದೆ ಮತ್ತಷ್ಟು ಟ್ವಿಸ್ಟ್
ಕರ್ಣ ಧಾರಾವಾಹಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 04, 2026 | 7:53 AM

Share

‘ಕರ್ಣ’ ಧಾರಾವಾಹಿ  (Karna Serial) ಹೊಸ ಹೊಸ ತಿರುವು ಪಡೆದುಕೊಂಡು ಸಾಗುತ್ತಿದೆ. ಇಷ್ಟು ದಿನ ಕರ್ಣ ಧಾರಾವಾಹಿಯಲ್ಲಿ ಎಲ್ಲ ಗೆಲುವು ವಿಲನ್​​ದೇ ಆಗುತ್ತಿತ್ತು. ಆದರೆ, ಈಗ ಕರ್ಣನ ಗೆಲುವಿನ ಸಮಯ. ಧಾರಾವಾಹಿಯಲ್ಲಿ ಕರ್ಣನಿಗೆ ರಿವೇಂಜ್ ತೆಗೆದುಕೊಳ್ಳುವ ಸಮಯ ಬಂದಿದೆ. ಇದರ ಜೊತೆಗೆ ಹೊಸ ಪಾತ್ರಧಾರಿಯ ಎಂಟ್ರಿ ಕೂಡ ಆಗಿದೆ. ಇದು ಸಾಕಷ್ಟು ಗಮನ ಸೆಳೆಯುವ ಸೂಚನೆ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ.

ಕರ್ಣನ ಸಹೋದರ ಸಂಜಯ್ ತುಂಬಾನೇ ಮೆರೆಯುತ್ತಿದ್ದ. ತಂದೆ ಜೊತೆ ಸೇರಿ ಸಾಕಷ್ಟು ಕೆಟ್ಟ ಕೆಲಸಗಳಲ್ಲಿ ಭಾಗಿ ಆಗುತ್ತಿದ್ದ. ಆತ ಕೊಬ್ಬಿನಿಂದ ಮೆರೆಯುತ್ತಿದ್ದ. ಈತನಿಗೆ ಈಗ ಪಾಠ ಕಲಿಸೋ ಸಮಯ ಬಂದೇ ಬಿಟ್ಟಿದೆ. ಹೌದು, ಸಂಜಯ್​​ಗೆ ಪಾಠ ಕಲಿಸಲು ರಿಯಾ ಬಂದಿದ್ದಾಳೆ. ಇಬ್ಬರೂ ಒಂದೇ ಆಟೋ ಏರುವ ಪರಿಸ್ಥಿತಿ ಬಂದಿದೆ. ಅಲ್ಲಿಂದ ಇವರ ಪ್ರೇಮ ಪ್ರಸಂಗ ಆರಂಭ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಸಂಜಯ್ ತುಂಬಾನೇ ಕೆಟ್ಟವನು. ಆತನ ಬಳಿ ಪ್ರೀತಿಗೆ ಜಾಗವೇ ಇಲ್ಲ. ಆತನ ಮನಸ್ಸಲ್ಲಿ ಇರೋದು ಕೇವಲ ದ್ವೇಷ ಮಾತ್ರ. ಈ ದ್ವೇಷವನ್ನು ತೆಗೆದು ಹಾಕಲು ಕರ್ಣ ಸಾಕಷ್ಟು ಪ್ರಯತ್ನಿಸಿದ. ಆದರೆ, ಅದು ಯಶಸ್ವಿ ಆಗಲೇ ಇಲ್ಲ. ಈ ಕಾರಣದಿಂದಲೇ ಕರ್ಣ ಈ ಮಾರ್ಗ ಉಪಯೋಗಿಸಿರಬಹುದು ಎಂದು ಅನೇಕರು ಊಹಿಸುತ್ತಾ ಇದ್ದಾರೆ.

ಇದನ್ನೂ ಓದಿ: ಕರ್ಣನ ಟಾರ್ಚರ್​​ಗೆ ಬೇಸತ್ತ ತಂದೆ ರಮೇಶ್; ಮುಂದಿದೆ ಮಾರಿ ಹಬ್ಬ

ಸಂಜಯ್ ಹಾಗೂ ರಿಯಾ ಲವ್​​​ಸ್ಟೋರಿ ನೋಡಲು ವೀಕ್ಷಕರು ಕಾದಿದ್ದಾರೆ. ಈಗಾಗಲೇ ಕರ್ಣನ ರಮೇಶ್​​ಗೆ ಪಾಠ ಕಲಿಸೋ ಕೆಲಸ ಆಗುತ್ತಿದೆ. ರಮೇಶ್ ಕೆಟ್ಟ ಕೆಲಸಗಳು ಬಯಲಿಗೆ ಬಂದಿವೆ. ಈಗ ಕರ್ಣನ ರಿವೇಂಜ್ ಎಪಿಸೋಡ್ ಸಾಕಷ್ಟು ಗಮನ ಸೆಳೆಯುತ್ತಿದೆ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಸಂಜಯ್ ಬೈಕ್ ಹಾಳಾಗಿತ್ತು. ಆತ ಅದನ್ನು ಸರಿಮಾಡಿಸಿಕೊಂಡು ಕಚೇರಿಗೆ ತೆರಳಿದ್ದಾನೆ. ಈ ವೇಳೆ ಬೈಕ್ ಮತ್ತೆ ಕೈ ಕೊಟ್ಟಿದೆ. ಆಗ ಆಟೋ ಹಿಡಿಯಲು ಹೋದಾಗ ರಿಯಾಳ ಭೇಟಿ ಆಗಿದೆ.

View this post on Instagram

A post shared by Zee Kannada (@zeekannada)

ಕರ್ಣ ಧಾರಾವಾಹಿಯಲ್ಲಿ ಕರ್ಣನು ನಿತ್ಯಾಳನ್ನು ಮದುವೆ ಆಗಿದ್ದಾನೆ. ಆತನಿಗೆ ನಿಧಿ ಮೇಲೆ ಪ್ರೀತಿ ಇದೆ. ಇದು ಇನ್ನೂ ರಿವೀಲ್ ಆಗಿಲ್ಲ. ಇದು ರಿವೀಲ್ ಆದ ಬಳಿಕ ಕಥೆಯಲ್ಲಿ ಮತ್ತಷ್ಟು ಟ್ವಿಸ್ಟ್​​​ಗಳನ್ನು ಪ್ರೇಕ್ಷಕ ನಿರೀಕ್ಷಿಸಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮುನಿರತ್ನಗೆ ಮಹತ್ವದ ಭರವಸೆ ನೀಡಿದ ಡಿಕೆ ಶಿವಕುಮಾರ್
ಮುನಿರತ್ನಗೆ ಮಹತ್ವದ ಭರವಸೆ ನೀಡಿದ ಡಿಕೆ ಶಿವಕುಮಾರ್
ಈ ಊರಲ್ಲಿ ಚಾಡಿ ಹೇಳಿದ್ರೆ, ವದಂತಿ ಹಬ್ಬಿಸಿದ್ರೆ ದಂಡ: ಈ ರೂಲ್ಸ್ ಏಕೆ?
ಈ ಊರಲ್ಲಿ ಚಾಡಿ ಹೇಳಿದ್ರೆ, ವದಂತಿ ಹಬ್ಬಿಸಿದ್ರೆ ದಂಡ: ಈ ರೂಲ್ಸ್ ಏಕೆ?
ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್​ಗೆ ಸುನಿಲ್ ಜೋಶಿ ಹೆಸರು ನಾಮಕರಣ
ಹುಬ್ಬಳ್ಳಿ ಸ್ಟೇಡಿಯಂ ಪೆವಿಲಿಯನ್​ಗೆ ಸುನಿಲ್ ಜೋಶಿ ಹೆಸರು ನಾಮಕರಣ
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!