‘ತಪ್ಪಂತೂ ನಡೆಯಲ್ಲ’ ಜನರಿಗೆ ಭರವಸೆ ಕೊಟ್ಟ ಸುದೀಪ್

Bigg Boss Kannada season 11: ಬಿಗ್​ಬಾಸ್ ಕನ್ನಡ ಸೀಸನ್ 11ರ ಕಡೆಯ ವಾರದ ಪಂಚಾಯಿತಿ ನಡೆದಿದೆ. ಈ ವಾರದ ಮಧ್ಯಭಾಗ ನಡೆಯಬೇಕಿದ್ದ ಎಲಿಮಿನೇಷನ್ ನಡೆದಿಲ್ಲ. ಮನೆಗೆ ಹೋಗಬೇಕಿದ್ದ ಒಬ್ಬರು ಹೋಗಲಿಲ್ಲ ಇದರಿಂದ ಇನ್ನೊಬ್ಬ ಅರ್ಹ ಸ್ಪರ್ಧಿಗೆ ಅನ್ಯಾಯ ಆದಂತಾಗಿದೆ. ಆದರೆ ಬಿಗ್​ಬಾಸ್​ ನಲ್ಲಿ ಅರ್ಹ ಸ್ಪರ್ಧಿಗೆ ಅನ್ಯಾಯ ಆಗುವುದಿಲ್ಲ ಎಂದು ಸುದೀಪ್ ಭರವಸೆ ನೀಡಿದ್ದಾರೆ.

‘ತಪ್ಪಂತೂ ನಡೆಯಲ್ಲ’ ಜನರಿಗೆ ಭರವಸೆ ಕೊಟ್ಟ ಸುದೀಪ್
Bigg Boss Kannada Season 11
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Jan 18, 2025 | 10:14 PM

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ವೇದಿಕೆ ಏರುತ್ತಿದ್ದಂತೆ ಸ್ಪರ್ಧಿಗಳಿಗೆ ಒಂದು ಭರವಸೆ ನೀಡಿದ್ದಾರೆ. ತಪ್ಪಂತೂ ನಡೆಯಲ್ಲ ಎಂದು ಜನರಿಗೆ ಅವರು ಹೇಳಿದ್ದಾರೆ. ಹಾಗಾದರೆ, ಅವರು ಈ ಭರವಸೆಯನ್ನು ಜನರಿಗೆ ಏಕೆ ಕೊಟ್ಟರು? ಆ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ. ಸುದೀಪ್ ಅವರು ಈ ವಿಚಾರವನ್ನು ಹೇಳಿದ್ದು ಧನರಾಜ್ ಅವರ ವಿಚಾರಕ್ಕೆ. ಅಷ್ಟಕ್ಕೂ ವಾರಾಂತ್ಯದಲ್ಲಿ ಏನು ನಡೆಯಿತು ಎಂಬುದನ್ನು ನೋಡೋಣ.

ಈ ವಾರದಲ್ಲಿ ದೊಡ್ಮನೆಯಲ್ಲಿ ಒಂದು ಘಟನೆ ನಡೆದಿತ್ತು. ಮಧ್ಯವಾರದ ಎಲಿಮಿನೇಷ್​ನಿಂದ ಬಚಾವ್ ಆಗಲು ಸ್ಪರ್ಧಿಗಳಿಗೆ ಒಂದಷ್ಟು ಟಾಸ್ಕ್ ಕೊಡಲಾಗಿತ್ತು. ಕೊನೆಯ ಟಾಸ್ಕ್​ನಲ್ಲಿ ಭವ್ಯಾ, ಮೋಕ್ಷಿತಾ ಹಾಗೂ ಧನರಾಜ್ ಮುಂದಿದ್ದರು. ಈ ಟಾಸ್ಕ್​ನಲ್ಲಿ ಯಾರು ಗೆಲ್ಲುತ್ತಾರೋ ಅವರಿಗೆ ಮಿಡ್ ವೀಕ್​ನಿಂದ ಬಚಾವ್ ಆಗುವ ಅವಕಾಶ ಇತ್ತು. ಈ ಅವಕಾಶವನ್ನು ಧನರಾಜ್ ಪಡೆದರು. ಅವರು ಗೆದ್ದು ಮಧ್ಯವಾರದ ನಾಮಿನೇಷನ್​ನಿಂದ ಬಚಾವ್ ಆದರು.

ಆದರೆ, ಈ ಟಾಸ್ಕ್​ ವೇಳೆ ಮೋಸ ನಡೆದಿದೆ ಎಂಬುದು ಸ್ಪಷ್ಟವಾಗಿತ್ತು. ಧನರಾಜ್ ಅವರು ಮೋಸ ಮಾಡಿ ಗೆದ್ದರು ಎನ್ನಲಾಯಿತು. ಇದನ್ನು ಅವರೂ ಒಪ್ಪಿಕೊಂಡರು. ಆ ಬಳಿಕ ಮಧ್ಯವಾರದ ಎಲಿಮಿನೇಷನ್​ ನಡೆಸಲೇ ಇಲ್ಲ. ಇದಕ್ಕೆ ಕಾರಣ ಆಗಿದ್ದು ಧನರಾಜ್ ಮೋಸ್ ಎಂದೇ ಬಿಗ್ ಬಾಸ್ ಹೇಳಿದರು. ಈ ರೀತಿಯ ನಿರ್ಧಾರವನ್ನು ಬಿಗ್ ಬಾಸ್ ತೆಗೆದುಕೊಂಡಿದ್ದು ಇದೇ ಮೊದಲು. ಈ ಕಾರಣಕ್ಕೆ ಸುದೀಪ್ ಅವರು ಬಿಗ್ ಬಾಸ್ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದರು. ಅವರು ಬಿಗ್ ಬಾಸ್ ನಿರ್ಧಾರವನ್ನು ಬೆಂಬಲಿಸಿದರು.

ಇದನ್ನೂ ಓದಿ:ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?

‘ನಾನು ಕಳೆದ ವಾರ ಹೋಗುವಾಗ ಮಧ್ಯವಾರದಲ್ಲಿ ಒಬ್ಬರು ಹೋಗುತ್ತಾರೆ ಎಂದು ಜನರಿಗೆ ಭರವಸೆ ಕೊಟ್ಟು ಹೋಗಿದ್ದೆ. ಆದರೆ, ಅದು ಸುಳ್ಳಾಗಿದೆ. ಇದಕ್ಕೆ ಕಾರಣವೂ ಇದೆ. ತಪ್ಪು ಮಾಡದೆ ಇದ್ದವರಿಗೆ ಶಿಕ್ಷೆ ಆಗಬಾರದು ಎಂಬುದು ನಮ್ಮ ನಿಯಮ. ಹೀಗಾಗಿ ತಪ್ಪು ಆಗೋಕೆ ನಾವಂತೂ ಬಿಡಲ್ಲ’ ಎಂದರು ಸುದೀಪ್.

ಒಂದೊಮ್ಮೆ ಧನರಾಜ್ ಅವರು ಗೆಲ್ಲದೆ ಇದ್ದಿದ್ದರೆ ಬೇರೆ ಯಾರೋ ಆ ಟಾಸ್ಕ್ ಗೆಲ್ಲುತ್ತಿದ್ದರು. ಈ ಮೂಲಕ ಬೇರೆ ಯಾರೋ ಟಾಪ್​ಗೆ ಬಂದು ಆ ವಾರ ನಾಮಿನೇಷನ್​ನಿಂದ ಬಚಾವ್ ಆಗುತ್ತಿದ್ದರೇನೋ ಎಂಬುದು ಬಿಗ್ ಬಾಸ್ ಹಾಗೂ ಸುದೀಪ್ ಅಭಿಪ್ರಾಯ. ಈ ವಿಚಾರದಲ್ಲಿ ಸುದೀಪ್ ಅವರು ಧನರಾಜ್​ಗೆ ಹೆಚ್ಚು ಬೈಯದೇ ವಾರ್ನ್ ಮಾಡಿ ಬಿಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ