AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತ್ರಿವಿಕ್ರಂ ಪ್ರಪೋಸ್ ಒಪ್ಪಿಕೊಂಡ್ರಾ’; ಸುರೇಶ್ ಪ್ರಶ್ನೆಗೆ ಭವ್ಯಾ ಉತ್ತರ ಏನು?

ಬಿಗ್ ಬಾಸ್ ಕನ್ನಡದಲ್ಲಿ ಭವ್ಯಾ ಮತ್ತು ತ್ರಿವಿಕ್ರಂ ಅವರ ನಡುವಿನ ಪ್ರೇಮ ಸಂಬಂಧದ ಬಗ್ಗೆ ಗೋಲ್ಡ್ ಸುರೇಶ್ ಪ್ರಶ್ನಿಸಿದ್ದಾರೆ. ತ್ರಿವಿಕ್ರಂ ಅವರ ಪ್ರಪೋಸಲ್‌ಗೆ ಭವ್ಯಾ ಅವರ ಪ್ರತಿಕ್ರಿಯೆ ಅನಿಶ್ಚಿತವಾಗಿದೆ. ಅವರ ಮಧ್ಯೆ ಉಂಟಾಗುತ್ತಿರುವ ಭಿನ್ನಾಭಿಪ್ರಾಯಗಳ ಬಗ್ಗೆಯೂ ಚರ್ಚೆ ನಡೆದಿದೆ. ಇವರಿಬ್ಬರ ಪೈಕಿ ಭವ್ಯಾ ನಾಮಿನೇಟ್ ಆಗಿದ್ದು, ತ್ರಿವಿಕ್ರಂ ಉಳಿದುಕೊಂಡಿದ್ದಾರೆ.

‘ತ್ರಿವಿಕ್ರಂ ಪ್ರಪೋಸ್ ಒಪ್ಪಿಕೊಂಡ್ರಾ’; ಸುರೇಶ್ ಪ್ರಶ್ನೆಗೆ ಭವ್ಯಾ ಉತ್ತರ ಏನು?
ತ್ರಿವಿಕ್ರಂ-ಸುರೇಶ್, ಭವ್ಯಾ
ರಾಜೇಶ್ ದುಗ್ಗುಮನೆ
|

Updated on: Jan 18, 2025 | 8:52 AM

Share

ಬಿಗ್ ಬಾಸ್​ನಲ್ಲಿ ತ್ರಿವಿಕ್ರಂ ಹಾಗೂ ಭವ್ಯಾ ಕ್ಲೋಸ್ ಆಗಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತ್ರಿವಿಕ್ರಂ ಅವರು ಭವ್ಯಾಗೆ ನೇರವಾಗಿ ಲವ್ ಪ್ರಪೋಸ್ ಇಟ್ಟಿದ್ದರು. ಈ ಪ್ರಪೋಸ್​ನ ಭವ್ಯಾ ಒಪ್ಪಿಕೊಂಡೂ ಇಲ್ಲ, ತಿರಸ್ಕರಿಸಲೂ ಇಲ್ಲ. ಈ ಬಗ್ಗೆ ಮನೆಗೆ ಅತಿಥಿಯಾಗಿ ಬಂದ ಗೋಲ್ಡ್ ಸುರೇಶ್ ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಭವ್ಯಾ ನಾಚಿ ನೀರಾಗಿದ್ದಾರೆ.

ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಹೊರ ನಡೆದರು. ವೈಯಕ್ತಿಕ ಕಾರಣಗಳನ್ನು ನೀಡಿ ಆಟವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಈಗ ಅವರು ದೊಡ್ಮನೆಗೆ ಅತಿಥಿಯಾಗಿ ಆಗಮಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ನಿತ್ಯವೂ ಬಿಗ್ ಬಾಸ್ ಶೋ ನೋಡುವ ಸುರೇಶ್ ಅವರು ಭವ್ಯಾ ಬಳಿ ಪ್ರಶ್ನೆ ಮಾಡಿದ್ದಾರೆ.

ತ್ರಿವಿಕ್ರಂ ಬಳಿ ತೆರಳಿದ ಸುರೇಶ್ ‘ಚೆನ್ನಾಗಿದೆ ಲವ್’ ಎಂದರು. ‘ಪ್ರಪೋಸ್ ಮಾಡಿದ್ದು ಒಪ್ಪಿಕೊಂಡ್ರಾ’ ಎಂದು ಸುರೇಶ್ ಕೇಳಿದರು. ‘ಪ್ರಪೋಸಾ? ಏನ್ ಏನ್ ಹೇಳ್ತಾ ಇದೀರಾ’ ಎಂದು ಭವ್ಯಾ ಏನೂ ಗೊತ್ತಿಲ್ಲದಂತೆ ಆ್ಯಕ್ಟ್ ಮಾಡಿದರು. ಇದನ್ನು ಕೇಳಿ ಮನೆ ಮಂದಿಗೆ ಅಚ್ಚರಿ ಆಯಿತು. ಈ ರೀತಿಯ ವಿಚಾರವೇ ನಮಗೆ ಗೊತ್ತಿರಲಿಲ್ಲ ಎಂದರು. ‘ನಾನು ಮೂರು ವರ್ಷ ಮದುವೆ ಆಗಲ್ಲ’ ಎಂಬರ್ಥದಲ್ಲಿ ಮಾತನಾಡಿದರು.

ಭವ್ಯಾ ಹಾಗೂ ತ್ರಿವಿಕ್ರಂ ಮಧ್ಯೆ ಮಿಸ್​ ಅಂಡರ್​ಸ್ಟ್ಯಾಂಡಿಗ್ ಬರ್ತಿದೆ. ಈ ಬಗ್ಗೆ ಭವ್ಯಾ ಬಳಿ ಅನುಷಾ ರೈ ಪ್ರಶ್ನೆ ಮಾಡಿದ್ದಾರೆ. ‘ನಮ್ಮ ಮಧ್ಯೆ ಸಣ್ಣ ಸಣ್ಣ ವಿಚಾರಕ್ಕೆ ಮಿಸ್​ ಅಂಡರ್​ಸ್ಟ್ಯಾಂಡಿಗ್ ಬರುತ್ತಿದೆ. ನಂತರ ಕೆಲವೇ ನಿಮಿಷಗಳಲ್ಲಿ ಅದು ಸರಿ ಆಗುತ್ತಿದೆ’ ಎಂದು ಸ್ಪಷ್ಟನೆ ನೀಡಿದರು ಭವ್ಯಾ.

ಇದನ್ನೂ ಓದಿ:  ಅಚ್ಚರಿಯ ರೀತಿಯಲ್ಲಿ ಬಿಗ್ ಬಾಸ್ ಫಿನಾಲೆ ವಾರ ತಲುಪಿದ ತ್ರಿವಿಕ್ರಂ

ಸದ್ಯ ಬಿಗ್ ಬಾಸ್ ಫಿನಾಲೆ ತಲುಪುವ ಹಂತದಲ್ಲಿ ಇದೆ. ಈ ವೇಳೆ ಸ್ಪರ್ಧಿಗಳ ಮಧ್ಯೆ ಕಿತ್ತಾಟ ಕಡಿಮೆ ಆಗಿದೆ. ಈ ವಾರ ಧನರಾಜ್, ಗೌತಮಿ, ಮಂಜು, ರಜತ್ ಹಾಗೂ ಭವ್ಯಾ ನಾಮಿನೇಷನ್​ ಸಾಲಿನಲ್ಲಿ ಇದ್ದಾರೆ. ಇವರ ಪೈಕಿ ಇಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ. ಹನುಮಂತ, ಮೋಕ್ಷಿತಾ ಹಾಗೂ ತ್ರಿವಿಕ್ರಂ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಇಂದೂ ಬೆಂಗಳೂರಿನಲ್ಲಿ ವರುಣನ ಆರ್ಭಟ; ಕೆರೆಯಂತಾದ ರಸ್ತೆಗಳು!
ಇಂದೂ ಬೆಂಗಳೂರಿನಲ್ಲಿ ವರುಣನ ಆರ್ಭಟ; ಕೆರೆಯಂತಾದ ರಸ್ತೆಗಳು!
ಸರ್ವೀಸ್ ರೈಫಲ್‌ನಿಂದ ನಾಲ್ವರು ಸಹೋದ್ಯೋಗಿಗಳನ್ನೇ ಕೊಂದ ಯೋಧ
ಸರ್ವೀಸ್ ರೈಫಲ್‌ನಿಂದ ನಾಲ್ವರು ಸಹೋದ್ಯೋಗಿಗಳನ್ನೇ ಕೊಂದ ಯೋಧ