ಅಚ್ಚರಿಯ ರೀತಿಯಲ್ಲಿ ಬಿಗ್ ಬಾಸ್ ಫಿನಾಲೆ ವಾರ ತಲುಪಿದ ತ್ರಿವಿಕ್ರಂ

ಈ ವಾರದ ಬಿಗ್ ಬಾಸ್ ಕನ್ನಡದಲ್ಲಿ ಅನಿರೀಕ್ಷಿತ ತಿರುವುಗಳು ಕಂಡುಬಂದಿವೆ. ಟಾಸ್ಕ್‌ನಲ್ಲಿ ಸೋತ ತ್ರಿವಿಕ್ರಂ ಅವರು ನಾಮಿನೇಷನ್‌ನಿಂದ ಪಾರಾಗಿದ್ದಾರೆ. ಧನರಾಜ್ ಅವರ ಮೋಸದ ಆಟದಿಂದ ಮಧ್ಯವಾರದ ಎಲಿಮಿನೇಷನ್ ರದ್ದಾಗಿದೆ ಮತ್ತು ಅವರ ಇಮ್ಯುನಿಟಿ ಕೂಡ ರದ್ದಾಗಿದೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ಇಲ್ಲಿದೆ ಮಾಹಿತಿ.

ಅಚ್ಚರಿಯ ರೀತಿಯಲ್ಲಿ ಬಿಗ್ ಬಾಸ್ ಫಿನಾಲೆ ವಾರ ತಲುಪಿದ ತ್ರಿವಿಕ್ರಂ
ತ್ರಿವಿಕ್ರಂ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 18, 2025 | 7:28 AM

ತ್ರಿವಿಕ್ರಂ ಅವರು ಈ ವಾರ ನಾಮಿನೇಟ್ ಆಗಿದ್ದರು. ಟಾಸ್ಕ್ ಸರಿಯಾಗಿ ಆಡಲು ಸಿಗದ ಕಾರಣ ಅವರಿಗೆ ಗೆಲ್ಲೋಕೆ ಸಾಧ್ಯ ಆಗಿರಲಿಲ್ಲ. ಈ ಕಾರಣಕ್ಕೆ ಫಿನಾಲೆ ವಾರ ತಲುಪುವ ಅವಕಾಶ ಅವರ ಕೈ ತಪ್ಪಿತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಬಿಗ್ ಬಾಸ್​ನ ಒಂದು ಅಚ್ಚರಿಯ ನಿರ್ಧಾರದಿಂದ ಎಲ್ಲವೂ ಬದಲಾಗಿಬಿಟ್ಟಿದೆ. ಆಟ ಆಡಿ ಗೆದ್ದವರು ನಾಮಿನೇಟ್ ಆದರೆ, ಆಟದಲ್ಲಿ ಸೋತವರು ಎಲಿಮಿನೇಷನ್​ನಿಂದ ಬಚಾವ್ ಆಗಿದ್ದಾರೆ.

ಮೋಸದಾಟ

ಧನರಾಜ್ ಅವರು ಮೋಸ ಮಾಡಿ ಗೆದ್ದಿದ್ದಾರೆ ಎಂಬ ಆರೋಪ ಇದೆ. ಇದನ್ನು ಅವರೂ ಒಪ್ಪಿಕೊಂಡಿದ್ದಾರೆ. ಈ ಕಾರಣಕ್ಕೆ ಮಧ್ಯ ವಾರದ ಎಲಿಮಿನೇಷನ್ ರದ್ದು ಮಾಡಲಾಯಿತು. ಟಾಸ್ಕ್​​ನಲ್ಲಿ ಗೆದ್ದ ಹನುಮಂತ ಅವರ ಇಮ್ಯೂನಿಟಿಯನ್ನು ರದ್ದು ಮಾಡಲಾಯಿತು. ಆ ಬಳಿಕ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ.

ತ್ರಿವಿಕ್ರಂ ಹೆಸರೇ ಇಲ್ಲ

ನಾಮಿನೇಷನ್ ಪ್ರಕ್ರಿಯೆಯಲ್ಲಿ ಭವ್ಯಾ ಅವರನ್ನು ಹೊರತುಪಡಿಸಿ ಇನ್ಯಾರೂ ಕೂಡ ತ್ರಿವಿಕ್ರಂ ಅವರ ಹೆಸರನ್ನು ತೆಗೆದುಕೊಂಡೇ ಇಲ್ಲ. ನಾಮಿನೇಟ್ ಆಗಬೇಕು ಎಂದರೆ ಕನಿಷ್ಠ ಎರಡು ವೋಟ್ ಬೀಳಬೇಕು. ಒಂದು ವೋಟ್ ಬಿದ್ದರೆ ಬಿಗ್ ಬಾಸ್ ಅದನ್ನು ಎಂದಿಗೂ ಪರಿಗಣಿಸುವುದಿಲ್ಲ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಭವ್ಯಾ ವೋಟ್ ಬಿಟ್ಟು ಮತ್ಯಾರೂ ತ್ರಿವಿಕ್ರಂ ಅವರನ್ನು ನಾಮಿನೇಟ್ ಮಾಡಿರಲಿಲ್ಲ. ಹೀಗಾಗಿ, ಅವರು ಫಿನಾಲೆ ವಾರ ತಲುಪಿದರು.

ಮೋಕ್ಷಿತಾ ಕೂಡ ಬಚಾಚ್

ಮೋಕ್ಷಿತಾ ಅವರು ನಾಮಿನೇಷನ್​ ಲಿಸ್ಟ್​​ನಲ್ಲಿ ಇದ್ದರು. ಆದರೆ, ಅವರು ಕೂಡ ಬಚಾವ್ ಆಗಿದ್ದಾರೆ. ನಾಮಿನೇಷನ್​ನಿಂದ ಒಬ್ಬರನ್ನು ಸೇವ್ ಮಾಡುವ ಅವಕಾಶವನ್ನು ಅಲ್ಟಿಮೇಟ್ ಕ್ಯಾಪ್ಟನ್ ಹನುಮಂತಗೆ ಬಿಗ್ ಬಾಸ್ ನೀಡಿದರು. ಆಗ ಹನುಮಂತ ಅವರು ಮೋಕ್ಷಿತಾ ಹೆಸರನ್ನು ತೆಗೆದುಕೊಂಡರು.

ಇದನ್ನೂ ಓದಿ: ಇಂದು ಶೋ ಆರಂಭಕ್ಕೂ ಮೊದಲೇ ನಡೆಯಲಿದೆ ಒಂದು ಎಲಿಮಿನೇಷನ್? ಟ್ವಿಸ್ಟ್ ಕೊಡಲು ಕಿಚ್ಚ ರೆಡಿ

ನಾಮಿನೇಟ್ ಆದವರು

ಹನುಮಂತ ಅವರು ಅಲ್ಟಿಮೇಟ್ ಕ್ಯಾಪ್ಟನ್ ಆಗಿ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಅಂತಿಮವಾಗಿ ಧನರಾಜ್, ಗೌತಮಿ, ಮಂಜು, ರಜತ್ ಹಾಗೂ ಭವ್ಯಾ ನಾಮಿನೇಷನ್​ ಸಾಲಿನಲ್ಲಿ ಇದ್ದಾರೆ. ಇವರ ಪೈಕಿ ಇಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?