AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟನ ದುರ್ಮರಣ; ಆಡಿಷನ್​ಗೆ ಹೊರಟವ ಸೇರಿದ್ದು ಮಸಣಕ್ಕೆ

ಹಿಂದಿ ಕಿರುತೆರೆ ನಟ ಅಮನ್ ಜೈಸ್ವಾಲ್ ಅವರು ಮುಂಬೈನಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಕೇವಲ 23 ವರ್ಷ ವಯಸ್ಸಿನ ಅವರು 'ಧರ್ತಿಪುತ್ರ ನಂದಿನಿ' ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಅವರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.

ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟನ ದುರ್ಮರಣ; ಆಡಿಷನ್​ಗೆ ಹೊರಟವ ಸೇರಿದ್ದು ಮಸಣಕ್ಕೆ
ಅಮನ್ ಜೈಸ್ವಾಲ್
ರಾಜೇಶ್ ದುಗ್ಗುಮನೆ
|

Updated on: Jan 18, 2025 | 12:09 PM

Share

ಭೀಕರ ರಸ್ತೆ ಅಪಘಾತದಲ್ಲಿ ಹಿಂದಿ ಕಿರುತೆರೆ ನಟ ಅಮನ್ ಜೈಸ್ವಾಲ್ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 23 ವರ್ಷ ಆಗಿತ್ತು. ಬಾಳಿ ಬದುಕಬೇಕಿದ್ದ ಅವರು ಸಣ್ಣ ವಯಸ್ಸಿನಲ್ಲೇ ಕೊನೆಯುಸಿರು ಎಳೆದಿದ್ದಾರೆ. ‘ಧರ್ತಿಪುತ್ರ ನಂದಿನಿ’ ಧಾರಾವಾಹಿ ಮೂಲಕ ಅವರು ಗಮನ ಸೆಳೆದಿದ್ದರು. ಅವರ ಸಾವಿಗೆ ಎಲ್ಲರೂ ಸಂತಾಪ ಸೂಚಿಸುತ್ತಾ ಇದ್ದಾರೆ.

ಮುಂಬೈನ ಹಿಲ್ ಪಾರ್ಕ್ ರಸ್ತೆಯಲ್ಲಿ ಶುಕ್ರವರಾ (ಜನವರಿ 18) ಮಧ್ಯಾಹ್ನ 3.15ಕ್ಕೆ ತಮ್ಮ ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಟ್ರಕ್ ಅವರ ಬೈಕ್​​ಗೆ ಡಿಕ್ಕಿ ಹೊಡೆದಿದೆ. ಇದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಆಗಲೇ ಅವರು ನಿಧನ ಹೊಂದಿದ್ದರು. ಸದ್ಯ ಟ್ರಕ್ ಹಾಗೂ ಅದರ ಚಾಲಕ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಅಮನ್ ಜೈಸ್ವಾಲ್ ಅವರು ಆಡಿಷನ್ ಒಂದಕ್ಕೆ ತೆರಳುತ್ತಿದ್ದರು. ಆದರೆ, ವಿಧಿ ಬರಹ ಬೇರೆಯದೇ ಇತ್ತು. ಇದು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಸಾಕಷ್ಟು ದುಃಖ ನೀಡಿದೆ. ಅಮನ್ ಜೈಸ್ವಾಲ್ ಅವರು ಕೊನೆಯ ಬಾರಿಗೆ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದು ‘ಧರ್ತಿಪುತ್ರ ನಂದಿನಿ’ ಧಾರಾವಾಹಿ ಬಗ್ಗೆ.

ಕುಟುಂಬದ ವಿರೋಧದ ನಡುವೆಯೂ ಅಮನ್ ಅವರು ಬಣ್ಣದ ಲೋಕಕ್ಕೆ ಬಂದರು. ಇಲ್ಲಿ ಸಾಕಷ್ಟು ಹೆಸರು ಮಾಡಿದರು. ಅಮನ್ ಅವರು ಮೂಲತಃ ಉತ್ತರ ಪ್ರದೇಶದ ಬಲಿಯಾದವರು. ಧಾರಾವಾಹಿಗೆ ಬರುವುದಕ್ಕೂ ಮೊದಲು ಅವರು ಮಾಡೆಲ್ ಆಗಿ ಗಮನ ಸೆಳೆದಿದ್ದರು. 2024ರಲ್ಲಿ  ‘ಧರ್ತಿಪುತ್ರ ನಂದಿನಿ’ ಕೊನೆಗೊಂಡಿದೆ.

ಇದನ್ನೂ ಓದಿ: ಹೃದಯಾಘಾತದಿಂದ ಖ್ಯಾತ ನಟ ಸುದೀಪ್ ಪಾಂಡೆ ನಿಧನ; ಅಭಿನಯಿಸುವಾಗಲೇ ಕೊನೆ ಉಸಿರು

2021ರಿಂದ 2023ರವರೆಗೆ ಅಮನ್ ಅವರು ‘ಪುಣ್ಯಶ್ಲೋಕ ಅಭಿಲ್ಯಬಾಯಿ’ ಧಾರಾವಾಹಿಯಲ್ಲೂ ನಟಿಸಿದ್ದರು. ಈಗ ಅವರ ನಿಧನ ವಾರ್ತೆ ಹಿಂದಿ ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.