ಇಂದು ಶೋ ಆರಂಭಕ್ಕೂ ಮೊದಲೇ ನಡೆಯಲಿದೆ ಒಂದು ಎಲಿಮಿನೇಷನ್? ಟ್ವಿಸ್ಟ್ ಕೊಡಲು ಕಿಚ್ಚ ರೆಡಿ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಟ್ವಿಸ್ಟ್ ಗಳು ಮುಂದುವರೆದಿವೆ. ಮಧ್ಯವಾರದ ಎಲಿಮಿನೇಷನ್ ರದ್ದಾಗಿದ್ದು, ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ಖಚಿತವಾಗಿದೆ. ಜನವರಿ 18 ಮತ್ತು 19ರಂದು ಎಲಿಮಿನೇಷನ್ ನಡೆಯಲಿದ್ದು, ಈ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಹೋಗಲಿದ್ದಾರೆ. ಹನುಮಂತ ಅವರು ಮೋಕ್ಷಿತಾ ಪೈ ಅವರನ್ನು ಉಳಿಸಿ, ಫೈನಲ್ ವಾರಕ್ಕೆ ಕಳುಹಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮಧ್ಯವಾರದಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಹಾಗೆ ಮಾಡಿಲ್ಲ. ಈಗ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ನಡೆಯೋದು ಪಕ್ಕಾ ಆಗಿದೆ. ಇಂದು (ಜನವರಿ18) ಎಲಿಮಿನೇಷನ್ ನಡೆಯಲಿದ್ದು, ಒಬ್ಬರು ಹೊರ ಹೋಗೋದು ಪಕ್ಕಾ ಎನ್ನಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಳ್ಳಲು ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಮುಂದಿನ ವೀಕೆಂಡ್ನಲ್ಲಿ ಫಿನಾಲೆ ನಡೆಯಲಿದೆ. ಅಲ್ಲಿಯವರೆಗೆ ಯಾರು ಇರುತ್ತಾರೆ ಹಾಗೂ ಯಾರು ಹೋಗುತ್ತಾರೆ ಎಂದು ಊಹಿಸೋದು ಕೂಡ ಕಷ್ಟ ಎಂಬಂತಾಗಿದೆ. ಹೀಗಿರುವಾಗಲೇ ಶನಿವಾರ ಸ್ಪರ್ಧಿಗಳಿಗೆ ಒಂದು ಶಾಕಿಂಗ್ ವಿಚಾರ ಇರಲಿದೆ ಎಂದು ಹೇಳಲಾಗುತ್ತಿದೆ.
‘ಬಿಗ್ ಬಾಸ್’ನಲ್ಲಿ ಮಧ್ಯವಾರದಲ್ಲಿ ಒಂದು ಎಲಿಮಿನೇಷನ್ ನಡೆಯಬೇಕಿತ್ತು. ಆದರೆ, ಧನರಾಜ್ ಮೋಸದ ಆಟ ಸ್ಪಷ್ಟವಾಗಿ ಕಾಣಿಸಿದ್ದರಿಂದ ಮಧ್ಯವಾರದ ಎಲಿಮಿನೇಷನ್ ರದ್ದು ಮಾಡಲಾಗಿದೆ. ಈ ವೇಳೆ ಬಿಗ್ ಬಾಸ್ ಒಂದು ಮಹತ್ವದ ಘೋಷಣೆ ಮಾಡಿದ್ದರು. ‘ವಾರಾಂತ್ಯದಲ್ಲಿ ಇಬ್ಬರು ಹೊರ ಹೋಗುವುದು ಖಚಿತ. ಅದು ಹೇಗೆ ಎಂಬುದು ಕಾಲವೇ ನಿರ್ಧರಿಸುತ್ತದೆ’ ಎಂದು ಬಿಗ್ ಬಾಸ್ ಹೇಳಿದ್ದರು.
ಈಗ ವೀಕೆಂಡ್ ಬಂದಿದೆ. ಕೆಲವು ವರದಿಗಳ ಪ್ರಕಾರ ಇಂದು ಶೋ ಆರಂಭಕ್ಕೂ ಮೊದಲೇ ಅಥವಾ ಶೋ ಕೊನೆಯಲ್ಲಿ ಎಲಿಮಿನೇಷನ್ ನಡೆಯೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾನುವಾರ (ಜನವರಿ 19) ಕೂಡ ಒಂದು ಎಲಿಮಿನೇಷನ್ ನಡೆಯಲಿದೆ. ಈ ವಾರ ಒಟ್ಟಾರೆ ಇಬ್ಬರು ಮನೆಯಿಂದ ಹೊರ ಹೋಗಲಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರ ತಲುಪಿದ ಮೋಕ್ಷಿತಾ: ಇದು ಹನುಮಂತನ ಕೃಪೆ
ಸದ್ಯ ಹನುಮಂತ ಅವರು ಎಲಿಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಮೋಕ್ಷಿತಾ ಪೈ ಅವರನ್ನು ಹನುಮಂತ ಸೇವ್ ಮಾಡಿದ್ದು, ಫಿನಾಲೆ ವಾರ ತಲುಪಿದ್ದಾರೆ. ಮಂಜು, ಭವ್ಯಾ, ಗೌತಮಿ, ರಜತ್, ಧನರಾಜ್ ಹಾಗೂ ಮೋಕ್ಷಿತಾ ನಾಮಿನೇಟ್ ಆಗಿದ್ದು, ತ್ರಿವಿಕ್ರಂ ಬಚಾವ್ ಆಗಿದ್ದಾರೆ. ಈ ವಾರ ಇಬ್ಬರು ಎಲಿಮಿನೇಟ್ ಆದರೆ ಕೊನೆಯ ವಾರಕ್ಕೆ ಆರು ಜನರು ಇರಲಿದ್ದಾರೆ. ಈ ಪೈಕಿ ಒಬ್ಬರು ಹೊರ ಹೋಗಿ ಅಂತಿಮವಾಗಿ ಐವರು ಮಾತ್ರ ಉಳಿದುಕೊಳ್ಳುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.