AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೈಟೆಕ್’ ಮೆಜೆಸ್ಟಿಕ್ : 4,997 ಕೋಟಿ ರೂ. ವೆಚ್ಚದ ಮೆಗಾ ಪ್ಲಾನ್‌ಗೆ ಶೀಘ್ರವೇ ಗ್ರೀನ್ ಸಿಗ್ನಲ್!

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು 4,997 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಮರುಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಏಕ ಗವಾಕ್ಷಿ ಸಂಸ್ಥೆಯು ಈ ಬೃಹತ್ ಯೋಜನೆಗೆ ಅಂತಿಮ ಅನುಮೋದನೆಗಾಗಿ ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಶಿಫಾರಸು ಮಾಡಿದೆ. ಈ ಯೋಜನೆಯಿಂದ ರಾಜಧಾನಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾರಿಗೆ ಸೌಲಭ್ಯ ಸಿಗಲಿದ್ದು, ಸಾವಿರಾರು ಜನರಿಗೆ ಹೊಸ ಉದ್ಯೋಗಾವಕಾಶಗಳು ಲಭಿಸಲಿವೆ.

'ಹೈಟೆಕ್' ಮೆಜೆಸ್ಟಿಕ್ : 4,997 ಕೋಟಿ ರೂ. ವೆಚ್ಚದ ಮೆಗಾ ಪ್ಲಾನ್‌ಗೆ ಶೀಘ್ರವೇ ಗ್ರೀನ್ ಸಿಗ್ನಲ್!
ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣ ಮರು ಅಭಿವೃದ್ಧಿಗೆ ಗ್ರೀನ್ ಸಿಗ್ನಲ್!
ಭಾವನಾ ಹೆಗಡೆ
|

Updated on:Jul 31, 2026 | 12:32 PM

Share

ಮುಖ್ಯಾಂಶಗಳು

  • ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಪುನರಾಭಿವೃದ್ಧಿಗೆ 4,997 ಕೋಟಿ ರೂ. ಬೃಹತ್ ಯೋಜನೆ ಸಿದ್ಧವಾಗಿದೆ.
  • ಏಕ ಗವಾಕ್ಷಿ ಸಂಸ್ಥೆಯಿಂದ ಸಿಎಂ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
  • ಪಿಪಿಪಿ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾರಿಗೆ ಸೌಲಭ್ಯ ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ.

ಬೆಂಗಳೂರು, ಜುಲೈ 31: ರಾಜಧಾನಿಯ ಪ್ರಮುಖ ಸಾರಿಗೆ ಕೇಂದ್ರವಾದ ಮೆಜೆಸ್ಟಿಕ್ (ಕೆಂಪೇಗೌಡ) ಬಸ್ ನಿಲ್ದಾಣವನ್ನು 4,997 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಧುನೀಕರಣಗೊಳಿಸುವ ಬೃಹತ್ ಯೋಜನೆ ಜಾರಿಯತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯ ಯೋಜನೆಗಳಿಗಾಗಿ ಇರುವ ರಾಜ್ಯ ಮಟ್ಟದ ಏಕ ಗವಾಕ್ಷಿ ಸಂಸ್ಥೆಯು (SLSWA) ಈ ಪ್ರಸ್ತಾವನೆಯನ್ನು ಅಂತಿಮ ಅನುಮೋದನೆಗಾಗಿ ಮುಖ್ಯಮಂತ್ರಿ ನೇತೃತ್ವದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಗೆ (SHLCC) ಶಿಫಾರಸು ಮಾಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಒಟ್ಟು 12,936.86 ಕೋಟಿ ರೂ. ಮೌಲ್ಯದ ಏಳು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಲಾಯಿತು. 500 ಕೋಟಿ ರೂ.ಗೂ ಹೆಚ್ಚು ವೆಚ್ಚದ ಬೃಹತ್ ಯೋಜನೆಗಳನ್ನು SHLCC ಪರಿಶೀಲನೆಗೆ ಕಳುಹಿಸಲಾಗಿದ್ದು, ಇದರಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯೂ ಸೇರಿದೆ.

ಯೋಜನೆಯಲ್ಲೇನಿದೆ?

  • ಆಧುನಿಕ ಮೂಲಸೌಕರ್ಯ: ಮೆಜೆಸ್ಟಿಕ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಯಾಣಿಕ ಸೌಲಭ್ಯಗಳು, ಸುಸಜ್ಜಿತ ತಂಗುದಾಣ ಹಾಗೂ ಸುಗಮ ಸಂಚಾರ ವ್ಯವಸ್ಥೆ ನಿರ್ಮಾಣ.
  • ಖಾಸಗಿ ಹೂಡಿಕೆ: ಪಿಪಿಪಿ ಮಾದರಿಯ ಮೂಲಕ ಖಾಸಗಿ ವಲಯದ ಬಂಡವಾಳ ಆಕರ್ಷಣೆ.
  • ಉದ್ಯೋಗ ಸೃಷ್ಟಿ: ಸಾರಿಗೆ, ಪ್ರವಾಸೋದ್ಯಮ ಮತ್ತು ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಾವಕಾಶಗಳ ಸೃಷ್ಟಿ.

ಇದೇ ಸಭೆಯಲ್ಲಿ ಮೈಸೂರಿನಲ್ಲಿ 729.43 ಕೋಟಿ ರೂ. ವೆಚ್ಚದ ‘ಫಿಲ್ಮ್ ಸಿಟಿ’ ಹಾಗೂ ಉತ್ತರ ಕನ್ನಡದ ಮಾಂಕಿ ಬಂದರಿನಲ್ಲಿ 6,925 ಕೋಟಿ ರೂ. ವೆಚ್ಚದ ‘ಬಹುಪಯೋಗಿ ಬಂದರು’ ನಿರ್ಮಾಣ ಯೋಜನೆಗಳನ್ನೂ SHLCC ಸಮಿತಿಗೆ ಶಿಫಾರಸು ಮಾಡಲಾಗಿದೆ. ಜೊತೆಗೆ ಮಂಗಳೂರಿನ ದೀಪಸ್ತಂಭ ಪ್ರವಾಸೋದ್ಯಮ ಮತ್ತು ಊಟಿಯ ಕರ್ನಾಟಕ ಸಿರಿ ತೋಟಗಾರಿಕೆ ತೋಟದ ಅಭಿವೃದ್ಧಿ ಸೇರಿದಂತೆ 285.43 ಕೋಟಿ ರೂ. ಮೌಲ್ಯದ ನಾಲ್ಕು ಸಣ್ಣ ಯೋಜನೆಗಳಿಗೆ ನೇರ ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಶೀಘ್ರದಲ್ಲೇ ಉನ್ನತ ಮಟ್ಟದ ಸಮಿತಿಯಿಂದ ಆಡಳಿತಾತ್ಮಕ ಒಪ್ಪಿಗೆ ದೊರೆಯುವ ನಿರೀಕ್ಷೆಯಿದ್ದು, ಬೆಂಗಳೂರಿನ ಸಾರಿಗೆ ಕ್ಷೇತ್ರಕ್ಕೆ ಹೊಸ ಕಳೆ ಬರಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 am, Fri, 31 July 26

Follow Us
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್