AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ರೇಷನ್ ಕಾರ್ಡ್ ಇ-ಕೆವೈಸಿ ಮತ್ತಷ್ಟು ಸುಲಭ: ಆಹಾರ ಇಲಾಖೆಯಿಂದ ‘ಅನ್ನ ಸೇವೆ ಆ್ಯಪ್’ ಬಿಡುಗಡೆ

ಕರ್ನಾಟಕ ಆಹಾರ ಇಲಾಖೆಯು ರೇಷನ್ ಕಾರ್ಡ್ ಇ-ಕೆವೈಸಿಗೆ ‘ಅನ್ನ ಸೇವೆ ಆ್ಯಪ್’ ಬಿಡುಗಡೆ ಮಾಡಿದೆ. ಈ ಮೊಬೈಲ್ ಅಪ್ಲಿಕೇಶನ್ ಮೂಲಕ ಫಲಾನುಭವಿಗಳು ತಮ್ಮ ಮನೆಯಲ್ಲೇ ಸುಲಭವಾಗಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು.

ಇನ್ಮುಂದೆ ರೇಷನ್ ಕಾರ್ಡ್ ಇ-ಕೆವೈಸಿ ಮತ್ತಷ್ಟು ಸುಲಭ: ಆಹಾರ ಇಲಾಖೆಯಿಂದ ‘ಅನ್ನ ಸೇವೆ ಆ್ಯಪ್’ ಬಿಡುಗಡೆ
ಪ್ರಾತಿನಿಧಿಕ ಚಿತ್ರImage Credit source: tv9 kannada
ಅರುಣ್ ಕುಮಾರ್​ ಆರ್​.
| Edited By: |

Updated on: Oct 01, 2026 | 3:24 PM

Share

ಮುಖ್ಯಾಂಶಗಳು

  • ಆಹಾರ ಇಲಾಖೆಯಿಂದ ‘ಅನ್ನ ಸೇವೆ ಆ್ಯಪ್’ ಬಿಡುಗಡೆ
  • ರಾಜ್ಯದ 8 ಜಿಲ್ಲೆಗಳಲ್ಲಿ ಆ್ಯಪ್​​ ಸೇವೆ ಲಭ್ಯ
  • ಆಹಾರ ಸಚಿವ ರಿಜ್ವಾನ್ ಅರ್ಷದ್​ರಿಂದ ಅನ್ನ ಸೇವೆ ಆ್ಯಪ್ ಬಿಡುಗಡೆ

ಬೆಂಗಳೂರು, ಅಕ್ಟೋಬರ್​​ 01: ರಾಜ್ಯದಲ್ಲಿ ರೇಷನ್ ಕಾರ್ಡ್​​ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಕೆಲಸ ಕಾರ್ಯ ಬಿಟ್ಟು ಜನರು ಗಂಟೆಗಟ್ಟಲೇ ಕ್ಯೂ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ. ಮತ್ತೊಂಕಡೆ ಸರ್ವರ್​ ಕಾಟ ಜನರನ್ನು ಕಂಗಾಲಾಗಿಸಿದೆ. ಇದೆಲ್ಲದಕ್ಕೂ ಬ್ರೇಕ್​ ಹಾಕಲು ಸರ್ಕಾರ ಮುಂದಾಗಿದ್ದು, ‘ಅನ್ನ ಸೇವೆ ಆ್ಯಪ್’ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಜನರು ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದಾಗಿದೆ.

ಅನ್ನ ಸೇವೆ ಆ್ಯಪ್ ಬಿಡುಗಡೆ ಮಾಡಿದ ಆಹಾರ ಸಚಿವ ರಿಜ್ವಾನ್ ಅರ್ಷದ್

ಆಹಾರ ಇಲಾಖೆ ಸಿದ್ಧಪಡಿಸಿರುವ ಅನ್ನ ಸೇವೆ ಆ್ಯಪ್​​ ಅನ್ನು ಇಂದು ಬೆಂಗಳೂರಿನ ಶಿವಾಜಿನಗರದ ಬ್ರಾಡ್​ವೇನಲ್ಲಿ ಆಹಾರ ಸಚಿವ ರಿಜ್ವಾನ್ ಅರ್ಷದ್​​ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿದರು. ಆ ಮೂಲಕ ಅನ್ನ ಸೇವೆ ಆ್ಯಪ್​​ನಲ್ಲಿ ಮೊಬೈಲ್​ನಲ್ಲೇ ಇ-ಕೆವೈಸಿ ಮಾಡಲು ಅವಕಾಶ ನೀಡಲಾಗಿದ್ದು, ಇನ್ಮುಂದೆ ಜನರು ಕಚೇರಿಗೆ ಅಲೆಯುವುದು ತಪ್ಪಲಿದೆ.

ಈ ಜಿಲ್ಲೆಗಳಲ್ಲಿ ಮಾತ್ರ ಅನ್ನ ಸೇವೆ ಆ್ಯಪ್ ಸೇವೆ  

ಸದ್ಯ ಇದೊಂದು ಪೈಲಟ್ ಪ್ರಾಜೆಕ್ಟ್​ ಆಗಿದ್ದು, 8 ಜಿಲ್ಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್, ಕೊಪ್ಪಳ ಈ ಎಂಟು ಜಿಲ್ಲೆಗಳ ಜನರು ಇ-ಕೆವೈಸಿ ಮಾಡಲು ಅನುಕೂಲವಾಗಲಿದೆ. ಬಳಿಕ ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತದೆ.

ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಿಷ್ಟು 

ಆ್ಯಪ್​ ಬಿಡುಗಡೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆಹಾರ ಸಚಿವ ರಿಜ್ವಾನ್ ಅರ್ಷದ್, ‘ನಾನು ಮಂತ್ರಿ ಆಗಿ 40 ದಿನಗಳು ಆಗಿದೆ. ಬಡವರಿಗೆ ಅನಾನುಕೂಲ ಆಗಬಾರದು. E-KYC ಮಾಡಬೇಕು, ಜನರಿಗೆ ರೇಷನ್ ಕೊಡಬೇಕು. ಎಲ್ಲವೂ ಒಂದೇ ಸರಿ ಮಾಡುವುದಕ್ಕೆ ಕಷ್ಟ ಆಗುತ್ತೆ. ಅದಕ್ಕೆ ಅನ್ನ ಸೇವೆ ಆ್ಯಪ್ ಲಾಂಚ್ ಮಾಡಿದ್ದೇವೆ. 4.5 ಕೋಟಿ ಜನರು ಇದರ ಫಲಾನುಭವಿಗಳಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಗುಡ್ ನ್ಯೂಸ್: ರೇಷನ್ ಕಾರ್ಡ್​ ಇ-ಕೆವೈಸಿ ದಿನಾಂಕ ವಿಸ್ತರಣೆ: ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ ಪರಿಷ್ಕರಣೆ

‘ಜನರು ತಮ್ಮ ಕೆಲಸ ಕಾರ್ಯ ಬಿಟ್ಟು ನ್ಯಾಯ ಬೆಲೆ ಅಂಗಡಿ ಹೋಗಿ ಇ-ಕೆವೈಸಿ ಮಾಡಿಸಬೇಕು. ಆ ತೊಂದರೆ ಬೇಡ ನಾವು 8 ಜಿಲ್ಲೆಯಲ್ಲಿ ಅನ್ನ ಸೇವೆ ಆ್ಯಪ್ ಲಾಂಚ್ ಮಾಡಿದ್ದೇವೆ. ಇದರಿಂದ ಮನೆಯಲ್ಲೇ ಇ-ಕೆವೈಸಿ ಮಾಡಬಹುದು. ಬೇರೆ ಜಿಲ್ಲೆಯ ಅಧಿಕಾರಿಗಳಿಗೆ ಅವಕಾಶ ಮಾಡಿ ಕೊಟ್ಟಿದ್ದೇವೆ. ತಾಂತ್ರಿಕ ಅಡೆತಡೆಗಳನ್ನು ಗಮನಿಸಿ, ನಂತರ ಎಲ್ಲಾ ಕಡೆ ಲಾಂಚ್ ಮಾಡುತ್ತೇವೆ. ನಮ್ಮ ಇಲಾಖೆ ಇನ್ನು ಬೇರೆ ಬೇರೆ ಯೋಜನೆಗಳಿಗೆ ಇದೇ ಆ್ಯಪ್ ಅನ್ನು ಮುಂದಿನ ದಿನಗಳಲ್ಲಿ ಬಳಕೆ ಮಾಡಲಿದೆ. ಮೊದಲು ಮೊಬೈಲ್ ಆ್ಯಪ್ ಪೈಲಟ್ ಪ್ರಾಜೆಕ್ಟ್ ಜಾರಿ ಮಾಡುತ್ತೇವೆ. ಈ ಆ್ಯಪ್​​ನಲ್ಲಿ ನಮ್ಮ ಇಲಾಖೆ ಏನೇನು ಮಾಡುತ್ತದೆ ಗೊತ್ತಾಗುತ್ತೆ’ ಎಂದರು.

ಮೊಬೈಲ್​​ನಲ್ಲಿ ಇ-ಕೆವೈಸಿ ಮಾಡುವ ವಿಧಾನ ಹೇಗೆ?

ಮೊದಲಿಗೆ ಆ್ಯಪ್ ಓಪನ್ ಮಾಡಿ ರೇಷನ್ ಕಾರ್ಡ್ ನಂಬರ್​ ಹಾಕಬೇಕು. ಪರಿಶೀಲಿಸಿದ ನಂತರ ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿದರೆ ಫೇಸ್ ರೆಕಗ್ನೈಸೇಷನ್ ಮಾಡಿದರೆ ಇ-ಕೆವೈಸಿ ಆಗುತ್ತೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅರುಣ್ ಕುಮಾರ್​ ಆರ್​.
ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More