AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋ-ಪೈಲಟ್​​ನಿಂದ ಗಾಯಗೊಂಡಿದ್ದ ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಛಾರ್ ಚಿಕಿತ್ಸೆಗಾಗಿ ಸೌದಿಯಿಂದ ದುಬೈಗೆ ಏರ್‌ಲಿಫ್ಟ್

ಬುಧವಾರ ಆಕಾಶದಲ್ಲಿ ಹಾರುವಾಗಲೇ ನಡೆದ ಭೀಕರ ಕಾಕ್‌ಪಿಟ್ ಡ್ರಾಮಾದ ಮಧ್ಯೆ ಸಮಯಪ್ರಜ್ಞೆಯಿಂದ ಬೃಹತ್ ವಿಮಾನ ದುರಂತವನ್ನು ತಪ್ಪಿಸಿದ ಭಾರತದ ಸಾಹಸಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರನ್ನು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಸೌದಿ ಅರೇಬಿಯಾದಿಂದ ದುಬೈಗೆ ಇಂದು ಏರ್‌ಲಿಫ್ಟ್ ಮಾಡಲಾಗಿದೆ. ವಿಮಾನ ಪತನಗೊಳಿಸಲು ಸಂಚು ರೂಪಿಸಿದ್ದ ಓಮನ್ ಮೂಲದ ಕೋ-ಪೈಲಟ್ ಭಾರತೀಯ ಮೂಲದ ಪೈಲಟ್​​ ಸ್ಮಿತ್ ಮಚ್ಛಾರ್​​ಗೆ ಇರಿದು ಗಾಯಗೊಳಿಸಿದ್ದರು. ಇದರಿಂದ ಅವರ ತಲೆ, ಕುತ್ತಿಗೆ, ಕೈಗಳಿಗೆ ತೀವ್ರ ಗಾಯಗಳಾಗಿವೆ. ಹೀಗಾಗಿ, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದಲ್ಲಿ ದುಬೈಗೆ ಕರೆದೊಯ್ಯಲಾಗಿದೆ.

ಕೋ-ಪೈಲಟ್​​ನಿಂದ ಗಾಯಗೊಂಡಿದ್ದ ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಛಾರ್ ಚಿಕಿತ್ಸೆಗಾಗಿ ಸೌದಿಯಿಂದ ದುಬೈಗೆ ಏರ್‌ಲಿಫ್ಟ್
ಸ್ಮಿತ್ ಮಚ್ಛಾರ್
ಸುಷ್ಮಾ ಚಕ್ರೆ
|

Updated on: Oct 01, 2026 | 4:42 PM

Share

ದುಬೈ, ಅಕ್ಟೋಬರ್ 1: ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಕೋ-ಪೈಲಟ್‌ನಿಂದ ಚಾಕು ಇರಿತಕ್ಕೊಳಗಾಗಿಯೂ ಸಮಯಪ್ರಜ್ಞೆಯಿಂದ ಭೀಕರ ವಿಮಾನ ದುರಂತವನ್ನು ತಪ್ಪಿಸಿದ ಸಾಹಸಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರನ್ನು ಸೌದಿ ಅರೇಬಿಯಾದಿಂದ ದುಬೈಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಇಂದು ಏರ್‌ಲಿಫ್ಟ್ ಮಾಡಲಾಗಿದೆ.

ದುಬೈನಿಂದ ಟೆಲ್ ಅವೀವ್‌ಗೆ ಹಾರಾಟ ನಡೆಸುತ್ತಿದ್ದ ಫ್ಲೈದುಬೈ ವಿಮಾನದಲ್ಲಿದ್ದ ಓಮನ್ ಮೂಲದ ಕೋ-ಪೈಲಟ್ ವಿಮಾನ ಪತನಗೊಳಿಸುವ ದುರುದ್ದೇಶದಿಂದ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಮೇಲೆ ಭೀಕರ ದಾಳಿ ನಡೆಸಿದ್ದನು. ಕಾಕ್‌ಪಿಟ್ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಧೈರ್ಯ ಕಳೆದುಕೊಳ್ಳದ ಸ್ಮಿತ್, ಅತ್ಯಂತ ಕಷ್ಟದಿಂದ ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡಿದ್ದರು. ಇದರಿಂದಾಗಿ ಹೊರಗಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳನುಗ್ಗಿ ದಾಳಿಕೋರನನ್ನು ಕಟ್ಟಿಹಾಕಲು ಸಾಧ್ಯವಾಯಿತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೃಢಪಡಿಸಿದ್ದಾರೆ.

ಇದನ್ನೂ ಓದಿ: ಫ್ಲೈದುಬೈ ಹೈಡ್ರಾಮಾ; ಇರಿತಕ್ಕೊಳಗಾದರೂ 180 ಪ್ರಯಾಣಿಕರ ಪ್ರಾಣ ಉಳಿಸಿದ ಹೀರೋ ಭಾರತೀಯ ಪೈಲಟ್

ಬಳಿಕ ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಫ್ಲೈದುಬೈ ಸಂಸ್ಥೆಯ ಇಬ್ಬರು ರಿಲೀಫ್ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ನಗರದಲ್ಲಿ ಸುರಕ್ಷಿತವಾಗಿ ಇಳಿಸಿದ್ದರು.

ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಕ್ಯಾಪ್ಟನ್ ಸ್ಮಿತ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರ ಕುಟುಂಬ ಮತ್ತು ಸೌದಿ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ತಬುಕ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಇದೀಗ ಅವರನ್ನು ದುಬೈಗೆ ರವಾನಿಸಲಾಗಿದೆ.

ಇದನ್ನೂ ಓದಿ: ‘ದಿನವಿಡೀ ಪ್ರಾರ್ಥನೆ, ಮಹಿಳೆಯರಿಗೆ ಶೇಕ್​ಹ್ಯಾಂಡ್​ ಕೊಡಲೂ ನಿರಾಕರಣೆ’; ಧಾರ್ಮಿಕ ಉಗ್ರಗಾಮಿಯಾಗಿದ್ದ ಫ್ಲೈದುಬೈ ದಾಳಿಕೋರ ಪೈಲಟ್

ವಿಮಾನದಲ್ಲಿದ್ದ 174 ಪ್ರಯಾಣಿಕರಲ್ಲಿ 166 ಜನರು ಇಸ್ರೇಲಿ ಪ್ರಜೆಗಳಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಫ್ಲೈದುಬೈ ದೃಢಪಡಿಸಿದೆ. ಇಸ್ರೇಲಿ ಅಧಿಕಾರಿಗಳು ಇದನ್ನು “ಸಂಭಾವ್ಯ ಭಯೋತ್ಪಾದನಾ ದಾಳಿ” ಎಂದು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More