AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲ್ಕ್ ಆಗಿ ಫಾರ್ಮ್-7 ಸಲ್ಲಿಕೆ: ತನಿಖೆಗೆ ಆಗ್ರಹಿಸಿ ಚುನಾವಣಾಧಿಕಾರಿಗೆ ಡಿಕೆ ಶಿವಕುಮಾರ್ ಪತ್ರ

ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿರುವ ಸಿಎಂ ಡಿಕೆ ಶಿವಕುಮಾರ್​​, ಬಲ್ಕ್ ಆಗಿ ಸಲ್ಲಿಸಿರುವ ಫಾರ್ಮ್-7 ಅರ್ಜಿಗಳ ತನಿಖೆಗೆ ಒತ್ತಾಯಿಸಿದ್ದಾರೆ. ಇದು ಅಲ್ಪಸಂಖ್ಯಾತ, ಎಸ್‌ಸಿ-ಎಸ್‌ಟಿ, ಒಬಿಸಿ ಮತದಾರರನ್ನು ಗುರಿಯಾಗಿಸಿ ನಡೆಸಿದ ಅಕ್ರಮವಾಗಿದ್ದು, ಅರ್ಹ ಮತದಾರರ ಹಕ್ಕು ರಕ್ಷಿಸಲು ಎಫ್‌ಐಆರ್ ದಾಖಲಿಸಿ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಸಿಎಂ ಆಗ್ರಹಿಸಿದ್ದಾರೆ.

ಬಲ್ಕ್ ಆಗಿ ಫಾರ್ಮ್-7 ಸಲ್ಲಿಕೆ: ತನಿಖೆಗೆ ಆಗ್ರಹಿಸಿ ಚುನಾವಣಾಧಿಕಾರಿಗೆ ಡಿಕೆ ಶಿವಕುಮಾರ್ ಪತ್ರ
ಡಿಕೆ ಶಿವಕುಮಾರ್​ Image Credit source: tv9 kannada
ಪ್ರಸನ್ನ ಗಾಂವ್ಕರ್​
| Edited By: |

Updated on:Oct 01, 2026 | 5:38 PM

Share

ಮುಖ್ಯಾಂಶಗಳು

  • ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸಿಎಂ ಡಿಕೆ ಶಿವಕುಮಾರ್​​ ಪತ್ರ
  • ಬಲ್ಕ್ ಆಗಿ ಫಾರ್ಮ್-7 ಸಲ್ಲಿಸಿದವರ ವಿರುದ್ಧ ತನಿಖೆಗೆ ಆಗ್ರಹ
  • ಅರ್ಹ ಮತದಾರರ ಹಕ್ಕು ರಕ್ಷಣೆ ಮಾಡುವಂತೆ ಸಿಎಂ ಮನವಿ

ಬೆಂಗಳೂರು, ಅಕ್ಟೋಬರ್​ 01: ರಾಜ್ಯದಲ್ಲಿ ಎಸ್​​ಐಆರ್ ಪ್ರಕ್ರಿಯೆ ಹಾಗೂ ಫಾರ್ಮ್-7 ಸಲ್ಲಿಕೆ ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್​ ಕೆಲ ಗಂಭೀರ ಆರೋಪ ಮಾಡಿದ್ದಾರೆ. ಸೆ.22, 23, 24ರಂದು ಬಲ್ಕ್ ಆಗಿ ಫಾರ್ಮ್-7 ಸಲ್ಲಿಸಲಾಗಿದೆ. ಹೀಗಾಗಿ ಬಲ್ಕ್ ಆಗಿ ಫಾರ್ಮ್-7 ಸಲ್ಲಿಸಿದವರ ವಿರುದ್ಧ ತನಿಖೆ ಮಾಡಿ, ಅರ್ಹ ಮತದಾರರ ಹಕ್ಕು ರಕ್ಷಣೆ ಮಾಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಡಿಕೆ ಶಿವಕುಮಾರ್​ ಪತ್ರ ಬರೆದಿದ್ದಾರೆ.

ಕೂಡಲೇ ತನಿಖೆಗೆ ಡಿಕೆ ಶಿವಕುಮಾರ್​ ಒತ್ತಾಯ

ಬೆಳಗಾವಿ ಉತ್ತರ ಕ್ಷೇತ್ರದಲ್ಲಿ 3,000, ಮೂಡಿಗೆರೆ ಕ್ಷೇತ್ರದಲ್ಲಿ 6,259, ಬಬಲೇಶ್ವರ ಕ್ಷೇತ್ರದಲ್ಲಿ 1,373, ನರಸಿಂಹರಾಜ ಕ್ಷೇತ್ರದಲ್ಲಿ 1,200, ನರಸಿಂಹರಾಜ ಕ್ಷೇತ್ರದಲ್ಲಿ 1,200 ಮತ್ತು ಭಾಲ್ಕಿ ಕ್ಷೇತ್ರದಲ್ಲಿ 2,285 ಫಾರ್ಮ್-7 ಸಲ್ಲಿಸಲಾಗಿದೆ. ಅಲ್ಪಸಂಖ್ಯಾತ, SC-ST, ಒಬಿಸಿ ಮತದಾರರನ್ನು ಗುರಿಯಾಗಿಸಿದ್ದಾರೆ. ರಾಜ್ಯದ ಇತರೆ ಕ್ಷೇತ್ರಗಳಲ್ಲಿ ಫಾರ್ಮ್-7 ಸಲ್ಲಿಸಲಾಗಿದೆ. ಹೀಗಾಗಿ ಕೂಡಲೇ ತನಿಖೆ ಮಾಡುವಂತೆ ಸಿಎಂ ಡಿಕೆ ಶಿವಕುಮಾರ್​ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಡಿಕೆ ಶಿವಕುಮಾರ್​ ಟ್ವೀಟ್​

ಅಕ್ರಮವಾಗಿ ಫಾರ್ಮ್-7 ಸಲ್ಲಿಸಿದವರ ಮತ್ತು ನೀಡಿದವರು ವಿರುದ್ಧ ಕೇಸ್ ಹಾಕಿ. ಎಫ್ಐಆರ್ ದಾಖಲಾದ ನಂತರ ಕ್ರಿಮಿನಲ್ ಆ್ಯಕ್ಷನ್ ಆಗಬೇಕು ಎಂದಿದ್ದಾರೆ. ಇನ್ನು ಇದೇ ವೇಳೆ ಹಲವು ಕ್ಷೇತ್ರಗಳಲ್ಲಿ ನಡೆದ ಅಕ್ರಮಗಳ ಬಗ್ಗೆಯೂ ಚುನಾವಣಾ ಆಯೋಗಕ್ಕೆ ಸಿಎಂ ಡಿ.ಕೆ.ಶಿವಕುಮಾರ್​ ದಾಖಲೆ ಸಲ್ಲಿಸಿದರು.

ಕೇಸ್​ ದಾಖಲಿಸೋವರೆಗೆ ಹೊರಹೋಗಲ್ಲ: ಸಿಎಂ ಪಟ್ಟು

ಇನ್ನು ಕೇಸ್ ದಾಖಲಿಸುವ ತನಕ ತೆರಳಲ್ಲ ಎಂದು ಚುನಾವಣಾ ಆಯೋಗದ ಕಚೇರಿಯಲ್ಲಿ ಸಿಎಂ ಡಿಕೆ ಶಿವಕುಮಾರ್​ ಪಟ್ಟು ಹಿಡಿದರು. FIR ದಾಖಲಿಸುವ ತನಕ ಹೋಗಲ್ಲ ಎಂದು ತೀರ್ಮಾನಿಸಿದ ಅವರು, ಕಚೇರಿಯಲ್ಲೇ ಸಚಿವರೊಂದಿಗೆ ಉಪಾಹಾರ ಸೇವಿಸಿದರು. ಈ ವೇಳೆ ದಾಖಲೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಲು 2-3 ದಿನ ಆಯೋಗ ಕಾಲಾವಕಾಶ ಕೇಳಿದೆ. ‘ಎಫ್ಐಆರ್ ಪ್ರತಿಗಳನ್ನು ನಿಮಗೆ ನೀಡಿದ್ದೇನೆ. ನಮ್ಮ ಜಿಲ್ಲಾಧಿಕಾರಿಗಳ ಜೊತೆಗೂ ಮಾತನಾಡಿಸುತ್ತೇನೆ. ತಕ್ಷಣ ಎಫ್ಐಆರ್ ಮಾಡಿ ಎಂದು ಡಿಕೆ ಶಿವಕುಮಾರ್ ಪಟ್ಟು ಹಿಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:54 pm, Thu, 1 October 26

Follow Us
ಪ್ರಸನ್ನ ಗಾಂವ್ಕರ್​
ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More