ಬಿಗ್ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
Bigg Boss Kannada: ಬಿಗ್ಬಾಸ್ ಮನೆಗೆ ಕುಟುಂಬದವರು ಬಂದು ಹೋದ ಬಳಿಕ ಸ್ಪರ್ಧಿಗಳ ಮನಸ್ಥಿತಿ ಬದಲಾಗಿದೆ. ಹಳೆಯ, ಗಾಢ ಗೆಳೆತನಕ್ಕೆ ಬ್ರೇಕ್ ಬಿದ್ದಿದೆ. ಮಂಜು, ಗೌಥಮಿ ಗೆಳೆತನ ಬ್ರೇಕ್ ಆಗಿದೆ. ತ್ರಿವಿಕ್ರಮ್ ಹಾಗೂ ಭವ್ಯಾ ಗೆಳೆತನವೂ ಮುರಿದು ಹೋಗಿದೆ. ಆದರೆ ಈ ಬದಲಾವಣೆಗೆ ಕಾರಣ ಏನು? ಸುದೀಪ್ ಮುಂದೆ ಸ್ಪರ್ಧಿಗಳು ಹೇಳಿದ್ದೇನು?
ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಸ್ಪರ್ಧಿಗಳ ಕುಟುಂಬದವರು ಮನೆಗೆ ಬಂದಿದ್ದರು. ಬಿಗ್ಬಾಸ್ ಮನೆಯಲ್ಲಿ ಈ ವಾರ ಹಲವು ಭಾವುಕ ಸನ್ನಿವೇಶ ಸೃಷ್ಟಿಯಾಗಿದ್ದವು. ಮನೆಗೆ ಬಂದ ಕುಟುಂಬದವರು ಸ್ಪರ್ಧಿಗಳಿಗೆ ಹಲವು ಕಿವಿ ಮಾತು ಹೇಳಿದರು. ಈ ವರೆಗೆ ಹೇಗೆ ಆಡಿದ್ದೀಯ, ಮುಂದೆ ಹೇಗೆ ಆಡಬೇಕು ಎಂದೆಲ್ಲ ಸಲಹೆಗಳನ್ನು ಕೊಟ್ಟರು. ಕೆಲವರು ನೇರವಾಗಿ ಇಂಥಹವರ ಜೊತೆ ಸೇರಬೇಡಿ ಎಂದು ಹೇಳಿದರು. ಇದೀಗ ಗೆಸ್ಟ್ ಮುಗಿಯುತ್ತಿದ್ದಂತೆ ಮನೆಯ ಸ್ಪರ್ಧಿಗಳ ನಡುವೆ ಇದ್ದ ಈಕ್ವೇಷನ್ ಬದಲಾವಣೆ ಆಗಿದೆ. ಈ ಹಿಂದೆ ಇದ್ದ ಗಾಢ ಗೆಳೆತನಗಳೆಲ್ಲ ಪೀಸ್-ಪೀಸ್ ಆಗಿ ಮುರಿದು ಬಿದ್ದಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos