ನೆಲಮಂಗಲ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದಶಪಥ ಕಾಮಗಾರಿ, ಪರಿಹಾರ ಸಿಗದ ಕುಟುಂಬದ ಗೋಳಾಟ

ನೆಲಮಂಗಲ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದಶಪಥ ಕಾಮಗಾರಿ, ಪರಿಹಾರ ಸಿಗದ ಕುಟುಂಬದ ಗೋಳಾಟ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 04, 2025 | 6:45 PM

ನಾವು ಸಾರ್ವಜನಿಕರು, ಪೊಲೀಸ್ ಮತ್ತು ಸರ್ಕಾರ ನಮಗೆ ರಕ್ಷಣೆ ನೀಡಬೇಕು, ಸರ್ಕಾರ ನಡೆಯೋದೇ ನಮ್ಮಿಂದ ಅಂತ ಮುದ್ದುಮಾರಯ್ಯ ಕುಟುಂಬದ ಸದಸ್ಯರು ಗೋಳಾಡುತ್ತಾರೆ. ಪೊಲೀಸರಾದರೂ ಏನು ಮಾಡಿಯಾರು? ತಮಗೆ ಮೇಲಿಂದ ಸಿಗುವ ಆದೇಶಗಳನ್ನು ಅವರು ಪಾಲಿಸುತ್ತಾರೆ. ಈ ಕುಟುಂಬ ಕ್ಲೇಮ್ ಮಾಡುತ್ತಿರೋದು ನಿಜವೇ ಆದಲ್ಲಿ ಅವರು ಅನುಭವಿಸುತ್ತಿರುವ ವೇದನೆ, ಅಸಹಾಯಕತೆ ಮತ್ತು ಹತಾಷೆ ಎಂಥದ್ದು ಅಂತ ಕಲ್ಪಿಸಿಕೊಳ್ಳಿ.

ನೆಲಮಂಗಲ: ಅರಣ್ಯರೋದನೆ ಅಂದರೇನು ಅಂತ ಇಲ್ಲಿ ಗೊತ್ತಾಗುತ್ತದೆ. ಇದು ನೆಲಮಂಗಲ ಹತ್ತಿರದ ಹುಚ್ಚೇಗೌಡನ ಪಾಳ್ಯ ದಲ್ಲಿ ಕಂಡ ದೃಶ್ಯ. ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದಶಪಥ ಕಾಮಗಾರಿ ನಡೆದಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ ಮತ್ತು ಆಯಾ ಭೂಮಾಲೀಕರಿಗೆ ತಕ್ಕನಾದ ಪರಿಹಾರವನ್ನೂ ನೀಡಿದೆ. ಆದರೆ, ಮುದ್ದುಮಾರಯ್ಯನವರ ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ, ತಮ್ಮ ಜಮೀನಿನ ಪರಿಹಾರವನ್ನು ಬೇನಾಮಿ ಜನ ಲಪಟಾಯಿಸಿದ್ದಾರೆ, ನಮಗೆ ಮೋಸವಾಗಿದೆ, ದಯವಿಟ್ಟು ಕಾಮಗಾರಿ ನಿಲ್ಲಿಸಿ ಅಂತ ಕುಟುಂಬಸ್ಥರು ಗೋಗರೆದರೂ ಪೊಲೀಸರು ಅವರ ಮಾತನ್ನು ಕಿವಿಗೆ ಹಾಕ್ಕೊಳ್ಳುತ್ತಿಲ್ಲ. ಅವರದ್ದು ಅರಣ್ಯರೋದನೆಯಲ್ಲದೆ ಮತ್ತೇನು?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನೆಲಮಂಗಲ: ಕಿಲೋಮೀಟರ್ ದೂರ ಟ್ರಾಫಿಕ್ ಜಾಮ್