ಇಂದು ಒಂದೇ ದಿನ CoWin ಮೂಲಕ ಲಸಿಕೆಗೆ ನೋಂದಣಿ ಮಾಡಿಕೊಂಡವರು 79,65,720 ಜನ

18ರಿಂದ 45 ವರ್ಷದವರೆಗಿನ ವಯೋಮಾನದವರಿಗೆ ಲಸಿಕೆ ನೋಂದಣಿ ಪ್ರಕ್ರಿಯೆಯಲ್ಲಿ ಹಲವು ತೊಡಕುಗಳು ಕಂಡುಬಂದರೂ ದೊಡ್ಡ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ.

ಇಂದು ಒಂದೇ ದಿನ CoWin ಮೂಲಕ ಲಸಿಕೆಗೆ ನೋಂದಣಿ ಮಾಡಿಕೊಂಡವರು 79,65,720 ಜನ
ಕೊವಿನ್ ಪೋರ್ಟಲ್
guruganesh bhat

|

Apr 28, 2021 | 11:11 PM

ಇಂದು ಒಂದೇ ದಿನ 79,65,720 (79.65 ಲಕ್ಷ) ಜನರು ಕೊರೊನಾ ಲಸಿಕೆ ಪಡೆಯಲು ಕೊವಿನ್ ಆ್ಯಪ್​ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇಂದಿನಿಂದ ಆರಂಭವಾದ 18ರಿಂದ 45 ವರ್ಷದವರೆಗಿನ ವಯೋಮಾನದವರಿಗೆ ಲಸಿಕೆ ನೋಂದಣಿ ಪ್ರಕ್ರಿಯೆಯಲ್ಲಿ ಹಲವು ತೊಡಕುಗಳು ಕಂಡುಬಂದರೂ ದೊಡ್ಡ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಒಟಿಪಿ ಪಡೆಯಲು ತೊಂದರೆ ಮತ್ತು ಸರ್ವರ್ ಕ್ರ್ಯಾಶ್ ಉಂಟಾಗಿ ಕೊವಿನ್ ಪೋರ್ಟಲ್​ನಲ್ಲಿ ನೋಂದಣಿ ಮಾಡಿಕೊಳ್ಳಲು ತೊಡಕುಂಟಾಗಿತ್ತು. ಅದರಲ್ಲೂ ನೊಂದಣಿ ಪ್ರಕ್ರಿಯೆ ಆರಂಭವಾದ ಒಂದೇ ಗಂಟೆಯಲ್ಲಿ 35  ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದರು. ಸೆಕೆಂಡ್​ಗೆ 55,000 ಜನರು ನೋಂದಣಿ ಮಾಡಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ. 

18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳು ಸಜ್ಜುಗೊಳ್ಳಬೇಕು. ಆನಂತರವಷ್ಟೇ ಕೊರೊನಾ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕೊವಿನ್ ಆ್ಯಪ್ ಮೂಲಕವೂ ನೋಂದಣಿ ಮಾಡಿಕೊಳ್ಳಲು ಆಗದು.

ನೋಂದಣಿಯ ನಂತರ ಅಪಾಯಿಂಟ್​ಮೆಂಟ್​ಗಳು ಆಗಬೇಕು ಕೊರೊನಾ ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡರೊಂದೇ ಆಗಿಲ್ಲ, ಅಪಾಯ್ಟ್​ಮೆಂಟ್ ಸಹ ಆಗಬೇಕು. ಆದರೆ ಈಗಲೇ ಅದು ಸಾಧ್ಯವಿಲ್ಲ. ನೋಂದಣಿ ಮಾಡುವಾಗ ನಿಮ್ಮ ಆಧಾರ್ ಕಾರ್ಡ್ ಅಥವಾ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಇರುವ ಯಾವುದೇ ದಾಖಲೆಯ ವಿವರ ಸಲ್ಲಿಸಬೇಕು. ಮುಂದಿನ ಬಾರಿ ಕೊವಿನ್ ಆ್ಯಪ್​ಗೆ ಹೋದಾಗ ಅದೆ ಮೊಬೈಲ್ ನಂಬರ್​ಗೆ ಒಟಿಪಿ ಬರುತ್ತದೆ. ಅದನ್ನು ಸಲ್ಲಿಸಿದ ಬಳಿಕವಷ್ಟೇ ಕೊವಿನ್ ಆ್ಯಪ್ ತೆರೆದುಕೊಳ್ಳುತ್ತದೆ. ಲಸಿಕೆಯ ಲಭ್ಯತೆ ಹೆಚ್ಚಿದ ನಂತರ ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ಲಸಿಕೆ ಅಭಿಯಾನ ಆರಂಭಿಸಲು ಸಜ್ಜುಗೊಂಡ ನಂತರವಷ್ಟೇ ಅಪಾಯ್ಟ್​ಮೆಂಟ್ ಪಡೆಯಬಹುದು.

ಕ್ರಾಶ್ ಆಗಿದ್ದೇಕೆ? ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊವಿಡ್ ಲಸಿಕೆ ನೀಡುವುದಾಗಿ ಸರ್ಕಾರ ಹೇಳಿದ್ದು, ಅದನ್ನು ಪಡೆಯಲು ನೋಂದಣಿ ಕಡ್ಡಾಯವಾಗಿದೆ. https://www.cowin.gov.in/home ಪೋರ್ಟಲ್ ಗೆ ಭೇಟಿ ನೀಡಿ register/sign ಕ್ಲಿಕ್ ಮಾಡಿ ನೋಂದಣಿ ಮಾಡಬೇಕಿದೆ. ಆದರೆ CoWIN server is facing issues. Please try later ಎಂಬ ಸಂದೇಶ ಕಾಣಿಸುತ್ತಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಕೊವಿನ್ ಆ್ಯಪ್ ಇಂದು ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಕ್ರಾಶ್ ಆಗಿತ್ತು. ಆದರೆ ಇಂದು ನೋಂದಣಿಗೆ ಅವಕಾಶ ಆರಂಭವಾದ ಒಂದೇ ಗಂಟೆಯಲ್ಲಿ 35 ಲಕ್ಷ ಜನರು ನೋಂದಣಿಗೆ ಯತ್ನಿಸಿದರು. ಒಂದು ದಿನಕ್ಕೆ 50 ಲಕ್ಷ ಜನರು ನೋಂದಣಿ ಮಾಡಿಕೊಳ್ಳಬಹುದಾದ ಸಾಮರ್ಥ್ಯವನ್ನು ಕೊವಿನ್ ಪೋರ್ಟಲ್ ಹೊಂದಿತ್ತು. ಬೇಡಿಕೆ ಹೆಚ್ಚಿರುವ ಕಾರಣ ಸಾಮರ್ಥ್ಯವನ್ನು ಎರಡು ಪಟ್ಟು ಹೆಚ್ಚಿಸಲು ಕ್ರಮ ಕೈಗೊಂಡಿದ್ದಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್.ಎಸ್.ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ:Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು? 

Covishield Price: ಕೋವಿಶೀಲ್ಡ್​ ಲಸಿಕೆ 300 ರೂಪಾಯಿಗೆ ರಾಜ್ಯ ಸರ್ಕಾರಗಳಿಗೆ ಒದಗಿಸಲು ಸೇರಮ್ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಸಮ್ಮತಿ

(75 lakhs registration in cowin app today is National Health authority CEO RS Sharma)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada