ಕೊವಿಡ್ ಲಸಿಕೆ ನೀಡುವಾಗ ಅಂಗವಿಕಲರಿಗೆ ಆದ್ಯತೆ ನೀಡಿ: ಹೈಕೋರ್ಟ್​ ಸೂಚನೆ

‘ಲಸಿಕೆ ಪಡೆಯಲು ಅಂಗವಿಕಲರು ಪಾಳಿಗಳಲ್ಲಿ ನಿಲ್ಲುವಂತೆ ಆಗಬಾರದು. ಮನೆಗಳಿಂದ ಹೊರಗೆ ಬರಲು ಕಷ್ಟಪಡುವವರಿಗೆ ಅಂಥವರ ಮನೆಗಳಲ್ಲಿಯೇ ಲಸಿಕೆ ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂದು ಹೈಕೋರ್ಟ್​ ಹೇಳಿದೆ.

ಕೊವಿಡ್ ಲಸಿಕೆ ನೀಡುವಾಗ ಅಂಗವಿಕಲರಿಗೆ ಆದ್ಯತೆ ನೀಡಿ: ಹೈಕೋರ್ಟ್​ ಸೂಚನೆ
ಕರ್ನಾಟಕ ಹೈಕೋರ್ಟ್
Follow us
|

Updated on: Apr 27, 2021 | 4:23 PM

ಬೆಂಗಳೂರು: ರಾಜ್ಯದಲ್ಲಿ ಕೊವಿಡ್ ಲಸಿಕೆ ವಿತರಣೆ ಆರಂಭಿಸಿದಾಗ ವಿಶೇಷಚೇತನರಿಗೆ ಆದ್ಯತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ಸೂಚನೆ ನೀಡಿದೆ. ವಿಶೇಷಚೇತನರಿಗೆ ಕೊವಿಡ್ 19 ಲಸಿಕೆ, ಚಿಕಿತ್ಸೆ ವೇಳೆ ಆದ್ಯತೆ ನೀಡಬೇಕು. ವಿಶೇಷಚೇತನರ ವ್ಯಾಕ್ಸಿನೇಷನ್‌ಗೆ ಯೋಜನೆ ರೂಪಿಸಬೇಕು. ವಿಶೇಷಚೇತನರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗೆ ಅರ್ಜಿ ಸಲ್ಲಿಸುವ ಮೂಲಕ ಲಸಿಕೆಗೆ ವಿನಂತಿಸಬಹುದು. ಎಸ್​ಎಂಎಸ್, ಇ-ಮೇಲ್, ವಾಟ್ಸಾಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಮನೆಯಿಂದ ಹೊರಬರಲಾರದವರಿಗೆ ಮನೆಯಲ್ಲೇ ವ್ಯಾಕ್ಸಿನೇಷನ್​ಗೆ ಅವಕಾಶ ಇರಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಮುಖ್ಯನ್ಯಾಯಮೂರ್ತಿ ಅಭಯ್ ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠವು ಈ ಸಂಬಂಧ ಮಧ್ಯಂತರ ಆದೇಶ ಹೊರಡಿಸಿತು. ‘ಲಸಿಕೆ ಪಡೆಯಲು ಅಂಗವಿಕಲರು ಪಾಳಿಗಳಲ್ಲಿ ನಿಲ್ಲುವಂತೆ ಆಗಬಾರದು. ಮನೆಗಳಿಂದ ಹೊರಗೆ ಬರಲು ಕಷ್ಟಪಡುವವರಿಗೆ ಅಂಥವರ ಮನೆಗಳಲ್ಲಿಯೇ ಲಸಿಕೆ ಸಿಗುವಂತೆ ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂದು ಹೈಕೋರ್ಟ್​ ಹೇಳಿದೆ.

ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ರಾಜ್ಯ ಹೈಕೋರ್ಟ್​ ಮೇಲಿನಂತೆ ನಿರ್ದೇಶನ ನೀಡಿತು. ‘ಅಂಗವಿಕಲರ ಹಕ್ಕುಗಳ ಕಾಯ್ದೆ’ಯ 25 (1) (ಸಿ) ಪರಿಚ್ಛೇದದ ಪ್ರಕಾರ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಿಗಳು ಅಂಗವಿಕಲರಿಗೆ ಆದ್ಯತೆ ನೀಡುವುದು ಕಡ್ಡಾಯವಾಗಿದೆ. ಚಿಕಿತ್ಸೆಯ ವಿಚಾರದಲ್ಲಿಯೂ ಅವರಿಗೆ ಆದ್ಯತೆ ಸಿಗಬೇಕು. ಲಸಿಕೆ ನೀಡುವ ವಿಚಾರದಲ್ಲಿಯೂ ಇದು ಅನ್ವಯವಾಗಬೇಕು’ ಎಂದು ಹೈಕೋರ್ಟ್ ವಿಶ್ಲೇಷಿಸಿತು.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಎಸ್.ವಿಶ್ವೇಶ್, ‘ಅಂಗವೈಕಲ್ಯದ ಕಾರಣದಿಂದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಹಲವರಿಗೆ ಸಾಧ್ಯವಾಗುವುದಿಲ್ಲ. ಕೆಲವರಿಗೆ ಮಾಸ್ಕ್​ ಧರಿಸಲು ಕಷ್ಟವಾಗುತ್ತದೆ. ಅವರ ಸುರಕ್ಷೆ ಖಾತ್ರಿಪಡಿಸಿಕೊಳ್ಳುವ ಏಕೈಕ ಸಾಧ್ಯತೆಯೆಂದರೆ ಅವರಿಗೆ ಮತ್ತು ಅವರನ್ನು ನೋಡಿಕೊಳ್ಳುವವರಿಗೆ ಆದ್ಯತೆಯ ಮೇಲೆ ಲಸಿಕೆ ನೀಡುವುದು’ ಎಂದು ಹೇಳಿದರು.

ರಾಜ್ಯ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, ‘ಅಂಗವಿಕಲರ ಸೌಕರ್ಯಕ್ಕಾಗಿ ಎಲ್ಲ ರೀತಿಯ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿದ ನ್ಯಾಯಾಲಯ, ಸರ್ಕಾರ ತೆಗೆದುಕೊಂಡ ಕ್ರಮಗಳ ಮಾಹಿತಿ ನೀಡಬೇಕು ಎಂದು ಸೂಚಿಸಿತು.

(COVID 19 Vaccination Evolve Scheme To Give Priority For Disabled persons directs Karnataka High Court to state govt)

ಇದನ್ನೂ ಓದಿ: ಒಂದು ಕೋಟಿ ಕೊವಿಶೀಲ್ಡ್ ಡೋಸ್ ಲಸಿಕೆ ಖರೀದಿಸಲಿದೆ ರಾಜ್ಯ ಸರ್ಕಾರ

ಇದನ್ನೂ ಓದಿ: ಕೊರೊನಾ ಲಸಿಕೆ ಬಗ್ಗೆ ಗೊಂದಲ ಬೇಡ, 18 ವರ್ಷ ಮೇಲ್ಪಟ್ಟವರು ಕೂಡಾ 2 ಡೋಸ್ ಲಸಿಕೆ ಪಡೆಯಬೇಕು: ಆರೋಗ್ಯ ಸಚಿವ ಸುಧಾಕರ್

ತಾಜಾ ಸುದ್ದಿ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್