ITR Filing: ಇಂದಿನಿಂದ ಆದಾಯ ತೆರಿಗೆ ಹೊಸ ಇ ಪೋರ್ಟಲ್; ಆದಾಯ ತೆರಿಗೆ ಪಾವತಿದಾರರಿಗೆ ಗೊತ್ತಿರಬೇಕಾದ 6 ವೈಶಿಷ್ಟ್ಯಗಳು

ಜೂನ್ 7, 2021ರಂದು (ಇಂದು) ಆದಾಯ ತೆರಿಗೆ ರಿಟರ್ನ್ಸ್ ಫೀಲಿಂಗ್ - ಪೋರ್ಟಲ್ ಆರಂಭವಾಗಲಿದೆ. ಆದಾಯ ತೆರಿಗೆ ಪಾವತಿದಾರರಿಗೆ ಈ ಬಗ್ಗೆ ಗೊತ್ತಿರಬೇಕಾದ 6 ಫೀಚರ್​ಗಳು ಇಲ್ಲಿವೆ.

ITR Filing:  ಇಂದಿನಿಂದ ಆದಾಯ ತೆರಿಗೆ ಹೊಸ ಇ ಪೋರ್ಟಲ್; ಆದಾಯ ತೆರಿಗೆ ಪಾವತಿದಾರರಿಗೆ ಗೊತ್ತಿರಬೇಕಾದ 6 ವೈಶಿಷ್ಟ್ಯಗಳು
ಪ್ರಾತಿನಿಧಿಕ ಚಿತ್ರ
Follow us
| Updated By: Srinivas Mata

Updated on:Jun 07, 2021 | 11:26 AM

ಆದಾಯ ತೆರಿಗೆ ಇಲಾಖೆಯಿಂದ ಹೊಸ ಇ- ಫೈಲಿಂಗ್ ವೆಬ್​ಸೈಟ್ incometax.gov.in – ಇಂದಿನಿಂದ (ಜೂನ್ 7, 2021) ಆರಂಭವಾಗಲಿದೆ. ಎಲ್ಲ ಬಗೆಯಲ್ಲೂ ಹೊಸದಾದ ಮೊಬೈಲ್ ಆ್ಯಪ್, ಪ್ರೀ ಫಿಲ್ಡ್ (ಅದಾಗಲೇ ಭರ್ತಿ ಮಾಡಿದ) ಆದಾಯ ತೆರಿಗೆ ಮಾಹಿತಿ, ಐಟಿಆರ್​ ಫಾರ್ಮ್ ಮತ್ತು ಸರಳ್ ಆದಾಯ ತೆರಿಗೆ ವ್ಯವಸ್ಥೆ ಇವೆಲ್ಲವೂ ಹೊಸ ಇ-ಫೈಲಿಂಗ್ ಪೋರ್ಟಲ್​ನಲ್ಲಿ ಲಭ್ಯವಿದೆ. ಇ- ಫೈಲಿಂಗ್ ಪೋರ್ಟಲ್ 2.0 ಮೂಲಕ ತೆರಿಗೆ ಪಾವತಿದಾರರಿಗೆ ಆಧುನಿಕವಾದ, ಅಡೆತಡೆ ಇಲ್ಲದಂಥ ಅನುಭವವನ್ನು ದೊರಕಿಸುತ್ತದೆ. ಹಲವು ಬಗೆಯಲ್ಲಿ ತಾಂತ್ರಿಕ ವೈಶಿಷ್ಟ್ಯಗಳನ್ನು ಸಹ ಈ ಪೋರ್ಟಲ್ ಹೊಂದಿದೆ. ಆದಾಯ ತೆರಿಗೆ ಇಲಾಖೆಯು ಈ ವೆಬ್​ಸೈಟ್​ ಅನ್ನು ಐಟಿಆರ್​ ಫೈಲಿಂಗ್​ಗೆ ಮತ್ತು ಆದಾಯ ತೆರಿಗೆ ಪಾವತಿದಾರರ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ, ಅಸೆಸ್​ಮೆಂಟ್​ಗಳಿಗೆ, ಮನವಿಗೆ, ದಂಡದಿಂದ ವಿನಾಯಿತಿ ಮನವಿ ಸಲ್ಲಿಸುವುದಕ್ಕೆ ಅಂತ ಬಳಸುತ್ತದೆ. ಇಷ್ಟು ಮಾತ್ರವಲ್ಲದೆ, ಹೊಸ ಇ- ಫೈಲಿಂಗ್ ಪೋರ್ಟಲ್​ನಿಂದ ಈ 6 ಫೀಚರ್​ಗಳು ದೊರೆಯಲಿವೆ.

ಶೀಘ್ರ ರೀಫಂಡ್ ಆದಾಯ ತೆಇಗೆದಾರರಿಗೆ ತಕ್ಷಣ ರೀಫಂಡ್ ಪ್ರೊಸೆಸ್ ಆಗುವಂತೆ ಇನ್​ಕಮ್ ಟ್ಯಾಕ್ಸ್ ರಿಟರ್ನ್ಸ್ (ಐಟಿಆರ್) ಜತೆಗೆ ಹೊಸ ಇ- ಫೈಲಿಂಗ್ ಪೋರ್ಟಲ್ ಅನ್ನು ಇಂಟಿಗ್ರೇಟ್ ಮಾಡಲಾಗಿದೆ. ಇದರಿಂದಾಗಿ ತೆರಿಗೆ ಪಾವತಿದಾರರಿಗೆ ಶೀಘ್ರವಾಗಿ ರೀಫಂಡ್ ದೊರೆಯುತ್ತದೆ.

ಮೊಬೈಲ್ ಅಪ್ಲಿಕೇಷನ್ ಇ- ಪೋರ್ಟಲ್ ಆರಂಭವಾದ ಮೇಲೆ ಮೊಬೈಲ್ ಅಪ್ಲಿಕೇಷನ್ ಶುರುವಾಗಲಿದೆ. ಈ ಮೂಲಕ ಪೋರ್ಟಲ್​ನಲ್ಲಿ ಸಿಗುವಂಥ ಎಲ್ಲ ಕಾರ್ಯ ನಿರ್ವಹಣೆಯು ಮೊಬೈಲ್ ಆ್ಯಪ್​ನಲ್ಲೂ ದೊರೆಯುತ್ತದೆ.

ಹೊಸ ಡ್ಯಾಶ್ ಬೋರ್ಡ್ ಹೊಸ ಇ- ಪೋರ್ಟಲ್ ಒಂದು ಹೊಸ ಸಿಂಗಲ್ ಡ್ಯಾಶ್​ ಬೋರ್ಡ್ ಒದಗಿಸುತ್ತದೆ. ಎಲ್ಲ ಇಂಟರಾಕ್ಷನ್​ಗಳು, ಅಪ್​ಲೋಡ್​ಗಳು ಅಥವಾ ಬಾಕಿ ಕಾರ್ಯಗಳನ್ನು ತೆರಿಗೆ ಪಾವತಿದಾರರಿಗೆ ಅದು ತೋರಿಸುತ್ತದೆ. ಆ ಮೂಲಕ ಯಾವ ಕೆಲಸ ಬಾಕಿ ಇದೆ, ಫಾಲೋ ಅಪ್​ ಅಗತ್ಯ ಇದೆ ಎಂದು ತಿಳಿಯಲು ಅನುಕೂಲ ಆಗುತ್ತದೆ.

ಇಂಟರಾಕ್ಟಿವ್ ಐಟಿಆರ್ ಸಿದ್ಧತೆ ಸಾಫ್ಟ್​ವೇರ್ ಐಟಿಆರ್ ಸಿದ್ಧತೆ ಸಾಫ್ಟ್​ವೇರ್ ಅನ್ನು ಆಫ್​ಲೈನ್ ಹಾಗೂ ಆನ್​ಲೈನ್ ಎರಡಕ್ಕೂ ಉಚಿತವಾಗಿ ತೆರಿಗೆದಾರರಿಗೆ ಒದಗಿಸಲಾಗುತ್ತದೆ. ತೆರಿಗೆದಾರ ಸ್ನೇಹಿ ಸಾಫ್ಟ್​ವೇರ್ ಆದ ಇದರಲ್ಲಿ ಇಂಟರ್​ ಆಕ್ಟಿವ್ ಪ್ರಶ್ನೆಗಳಿದ್ದು, ಇದರಿಂದ ಅನುಕೂಲ ಆಗಲಿದೆ. ತೆರಿಗೆ ಬಗ್ಗೆ ಯಾವುದೇ ಜ್ಞಾನ ಇಲ್ಲದಿದ್ದರೂ ಈ ಪೋರ್ಟಲ್ ಅನ್ನು ರಿಟರ್ನ್ಸ್ ಪ್ರೀ- ಫಿಲ್ಲಿಂಗ್​ಗೆ ಬಳಸಬಹುದು. ಆ ಮೂಲಕ ಐಟಿಆರ್​ನಲ್ಲಿ ಹೆಚ್ಚು ಭರ್ತಿ ಮಾಡಬೇಕು ಅಂತೇನೂ ಇರಲ್ಲ.

ತೆರಿಗೆದಾರರ ಕೊರತೆಗಳಿಗೆ ಉತ್ತರಿಸುವುದು ಸಲೀಸು ಟ್ಯುಟೋರಿಯರಲ್​ಗಳು, ವಿಡಿಯೋಗಳು, ಕಾಲ್​ಸೆಂಟರ್, ಚಾಟ್​ಬಾಟ್ ಅಥವಾ ಲೈವ್ ಏಜೆಂಟ್​ಗಳು ಈ ಸೈಟ್​ನಲ್ಲಿ ಇದ್ದು, ತೆರಿಗೆ ಪಾವತಿದಾರರ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ. ಹೊಸ ಕಾಲ್​ಸೆಂಟರ್ ಫ್ರೀಕ್ವೆಂಟ್ಲಿ ಆಸ್ಕಡ್ ಕ್ವೆಶ್ಚನ್ಸ್ (FAQs) ಮೂಲಕ ತೆರಿಗೆದಾರರಿಗೆ ನೆರವಾಗುತ್ತದೆ.

ಹೊಸ ಆನ್​ಲೈನ್ ತೆರಿಗೆ ಪಾವತಿ ಪದ್ಧತಿ ಬಹಳ ಸುಲಭವಾಗಿ ಪಾವತಿಯನ್ನು ಖಾತರಿ ಮಾಡಬೇಕು ಅನ್ನೋ ಕಾರಣಕ್ಕೆ ಹೊಸ ಐಟಿಆರ್ ವೆಬ್​ಸೈಟ್ ತೆರಿಗೆ ಸಂದಾಯ ಮಾಡಲು ಆನ್​ಲೈನ್ ಪಾವತಿ ವ್ಯವಸ್ಥೆಯನ್ನು ಸಹ ಹೊಂದಿದೆ. ನೆಟ್​ ಬ್ಯಾಂಕಿಂಗ್, ಯುಪಿಐ, ಕ್ರೆಡಿಟ್ ಕಾರ್ಡ್, ಆರ್​ಟಿಜಿಎಸ್​ ಅಥವಾ ಎನ್​ಇಎಫ್​ಟಿ ಹೀಗೆ ತೆರಿಗೆದಾರರ ಯಾವುದೇ ಖಾತೆಯಿಂದ ಮತ್ತು ಯಾವುದೇ ಬ್ಯಾಂಕ್​ನಿಂದ ತೆರಿಗೆ ಪಾವತಿಸಬಹುದು. ಈಗಿನ ವ್ಯವಸ್ಥೆಯಲ್ಲಿ ಯುಪಿಐ, ಕ್ರೆಡಿಟ್ ಕಾರ್ಡ್ ಮಾತ್ರ ಇತ್ತು.

ಆದಾಯ ತೆರಿಗೆ ಪಾವತಿದಾರರಿಗೆ ಯಾವುದೇ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ತೆರಿಗೆ ಪಾವತಿ ವ್ಯವಸ್ಥೆಯನ್ನು ಜೂನ್ 18, 2021ಕ್ಕೆ ಶುರು ಮಾಡಲಾಗುತ್ತದೆ. ಅದು ಕೂಡ ಮುಂಗಡ ತೆರಿಗೆ ಕಂತಿನ ದಿನಾಂಕದ ನಂತರ. ಇದರಿಂದ ತೆರಿಗೆ ಪಾವತಿದಾರರಿಗೆ ಸಹಾಯ ಆಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: Income tax return filing: ಆದಾಯ ತೆರಿಗೆ ಫೈಲಿಂಗ್​ ಗಡುವು ವಿಸ್ತರಿಸಿದ ಸಿಬಿಡಿಟಿ

(Income Tax department new e portal launch today. Here are the 6 features tax payers must know)

Published On - 11:24 am, Mon, 7 June 21

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್