Income tax return filing: ಆದಾಯ ತೆರಿಗೆ ಫೈಲಿಂಗ್​ ಗಡುವು ವಿಸ್ತರಿಸಿದ ಸಿಬಿಡಿಟಿ

ಕೇಂದ್ರ ನೇರ ತೆರಿಗೆ ಮಂಡಳಿಯಿಂದ ತೆರಿಗೆ ರಿಟರ್ನ್ ಫೈಲಿಂಗ್ ಗಡುವನ್ನು ವಿಸ್ತರಣೆ ಮಾಡಲಾಗಿದೆ. 2020-21ರ ಹಣಕಾಸು ವರ್ಷ ಹಾಗೂ 2021- 22ರ ಅಸೆಸ್​ಮೆಂಟ್​ ವರ್ಷಕ್ಕೆ ಸಂಬಂಧಿಸಿದಂತೆ ಪ್ರಮುಖ ಪರಿಷ್ಕೃತ ದಿನಾಂಕಗಳು ಇಲ್ಲಿವೆ.

Income tax return filing: ಆದಾಯ ತೆರಿಗೆ ಫೈಲಿಂಗ್​ ಗಡುವು ವಿಸ್ತರಿಸಿದ ಸಿಬಿಡಿಟಿ
ಸಾಂದರ್ಭಿಕ ಚಿತ್ರ
Follow us
|

Updated on: May 21, 2021 | 12:53 PM

ಕೇಂದ್ರ ನೇರ ತೆರಿಗೆ ಮಂಡಳಿ (CBDT)ಯಿಂದ ಗುರುವಾರ ತೆರಿಗೆ ಪಾವತಿದಾರರಿಗೆ ನಿರಾಳ ಸಿಕ್ಕಿದೆ. 2020- 21ನೇ ಹಣಕಾಸು ವರ್ಷ (ಅಸೆಸ್​ಮೆಂಟ್ ವರ್ಷ 2021- 22) ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್​) ಫೈಲಿಂಗ್​ಗೆ ಸೆಪ್ಟೆಂಬರ್ 30ರ ತನಕ ಗಡುವು ವಿಸ್ತರಣೆ ಮಾಡಲಾಗಿದೆ. ಕೇಂದ್ರ ನೇರ ತೆರಿಗೆ ಮಂಡಳಿಯು ಆದಾಯ ತೆರಿಗೆ ಕಾಯ್ದೆ, 1961, ಸೆಕ್ಷನ್ 119ರ ಅಡಿಯಲ್ಲಿ ಅಧಿಕಾರವನ್ನು ಬಳಸಿಕೊಂಡು ವಿನಾಯಿತಿ ನೀಡಿದೆ…ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಎರಡನೇ ಕೊರೊನಾ ಎರಡನೇ ಅಲೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದಾಯ ತೆರಿಗೆ ಇಲಾಖೆಯ ಹಲವು ತೆರಿಗೆ ನಿಯಮಾವಳಿಗಳ ಈ ಹಿಂದಿನ ಗಡುವನ್ನು ವಿಸ್ತರಿಸಲಾಗಿದೆ. ಉದ್ಯೋಗದಾತರಿಗೂ ತೆರಿಗೆಯ ವಿವಿಧ ನಿಯಮಾವಳಿಗಳನ್ನು ಪೂರ್ತಿ ಮಾಡುವ ಅವಧಿ ವಿಸ್ತರಿಸಲಾಗಿದೆ. ಕೋವಿಡ್- 19 ಸದ್ಯದ ಪರಿಸ್ಥಿತಿಯಲ್ಲಿ ಗಡುವು ಜಾಸ್ತಿ ನೀಡುವುದು ತೆರಿಗೆದಾರರಿಗೆ ಬಹಳ ಮುಖ್ಯ. ಭಾರತದ ಹಲವು ರಾಜ್ಯಗಳಲ್ಲಿ ಕೋವಿಡ್ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವವಾದದ್ದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಹಣಕಾಸು ವರ್ಷ 2020- 21 (ಅಸೆಸ್​ಮೆಂಟ್ ವರ್ಷ 2021- 22) ತೆರಿಗೆ ಫೈಲಿಂಗ್​ಗೆ ಹೊಸ ಗಡುವು ಇಂತಿದೆ: 1) ಮಾಮೂಲಿ ತೆರಿಗೆದಾರರಿಗೆ 2021- 22ನೇ ಅಸೆಸ್​ಮೆಂಟ್ ವರ್ಷದ ಆದಾಯ ತೆರಿಗೆ ರಿಟರ್ನ್​ ಸಲ್ಲಿಸುವುದಕ್ಕೆ ಈ ಹಿಂದೆ ಇದ್ದ ಜುಲೈ 31, 2021ರ ಗಡುವನ್ನು ಸೆಪ್ಟೆಂಬರ್ 30, 2021ಕ್ಕೆ ವಿಸ್ತರಿಸಲಾಗಿದೆ. 2) ಆಡಿಟ್ ಅಸ್ಸೆಸ್ಸಿಗಳಿಗೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದಕ್ಕೆ ನವೆಂಬರ್​ 30ರ ತನಕ ಅವಕಾಶ ಇದೆ. ಈ ಹಿಂದೆ ಅಕ್ಟೋಬರ್ 31ರ ವರೆಗೆ ಇತ್ತು. 3) ತೆರಿಗೆ ಆಡಿಟ್ ವರದಿಯನ್ನು ಸಲ್ಲಿಸುವುದಕ್ಕೆ ಈ ಹಿಂದೆ ಇದ್ದ ಸೆಪ್ಟೆಂಬರ್ 30ರ ಗಡುವನ್ನು ಅಕ್ಟೋಬರ್ 31ಕ್ಕೆ ವಿಸ್ತರಣೆ ಮಾಡಲಾಗಿದೆ. 4) ತಡವಾದ/ಪರಿಷ್ಕೃತವಾದ ಆದಾಯ ರಿಟರ್ನ್ ಸಲ್ಲಿಸುವುದಕ್ಕೆ ಈ ಹಿಂದೆ ಇದ್ದ ಡಿಸೆಂಬರ್ 31, 2021ರ ಗಡುವನ್ನು ಜನವರಿ 31, 2022ಕ್ಕೆ ಮುಂದೂಡಲಾಗಿದೆ. 5) ದರ ಅಧ್ಯಯನ ವರದಿಯನ್ನು ವರ್ಗಾವಣೆ ಮಾಡುವ ಅವಧಿಯನ್ನು ನವೆಂಬರ್ 30ಕ್ಕೆ ಮುಂದೂಡಲಾಗಿದೆ. 6) SFT ಪಾವತಿ ದಿನಾಂಕವನ್ನು ಮೇ 31, 2021ರಿಂದ ಜೂನ್ 30, 2021ಕ್ಕೆ ವಿಸ್ತರಿಸಲಾಗಿದೆ. 7) ವರದಿ ಮಾಡಬೇಕಾದ ಖಾತೆಯ ಸ್ಟೇಟ್​ಮೆಂಟ್​ ಮೇ 31ರಿಂದ ಜೂನ್ 30ಕ್ಕೆ ಹೋಗಿದೆ. 8) ಹಣಕಾಸು ವರ್ಷ 2020-21ರ ನಾಲ್ಕನೇ ತ್ರೈಮಾಸಿಕದ ಟಿಡಿಎಸ್​ ಸ್ಟೇಟ್​ಮೆಂಟ್ ಜೂನ್ 30ಕ್ಕೆ ವಿಸ್ತರಣೆ ಆಗಿದೆ. ಈ ಹಿಂದೆ ಮೇ 31ನೇ ತಾರೀಕು ಇತ್ತು. 9) ಫಾರ್ಮ್ 16 ವಿತರಿಸುವುದಕ್ಕೆ ಕೊನೆ ದಿನವಾಗಿ ಜೂನ್ 15 ಇದ್ದದ್ದು ಈಗ ಒಂದು ತಿಂಗಳು ಮುಂದಕ್ಕೆ ಹೋಗಿ ಜುಲೈ 15 ಆಗಿದೆ.

ಆದಾಯ ತೆರಿಗೆ ಇಲಾಖೆಯು ತಿಳಿಸಿರುವ ಪ್ರಕಾರ ಹೊಸದಾದ ಇ-ಫೈಲಿಂಗ್ ಪೋರ್ಟಲ್ http://incometax.gov.in ಅನ್ನು ಜೂನ್ 7ನೇ ತಾರೀಕಿನಿಂದ ಆರಂಭಿಸಲಿದೆ. ಈಗಿರುವ ಪೋರ್ಟಲ್ ಆರು ದಿನಗಳ ಕಾಲ, ಅಂದರೆ ಜೂನ್ 1ರಿಂದ 6ರ ತನಕ ಲಭ್ಯ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್​ಗಳಿಗೆ ಸುತ್ತೋಲೆ

(Due to coronavirus second wave in India various dedalines of income tax return filing extended by Central Board Of Direct Tax (CBDT))

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ