AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7th Pay Commission: ಕೇಂದ್ರದಿಂದ ಉದ್ಯೋಗಿಗಳಿಗೆ ಡಿಎ, ಡಿಆರ್​ ಬಾಕಿ ಪಾವತಿ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ

7th pay commission: ಲಕ್ಷಾಂತರ ಸಂಖ್ಯೆಯ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಬಾಕಿ ಡಿಯರ್​​ನೆಸ್​ ಅಲೋವೆನ್ಸ್ ಅರಿಯರ್ಸ್ (DA) ಬಗ್ಗೆ ಕೇಂದ್ರದಿಂದ ಇಂದು (ಶನಿವಾರ) ಸಭೆ ನಡೆಯಲಿದೆ.

7th Pay Commission: ಕೇಂದ್ರದಿಂದ ಉದ್ಯೋಗಿಗಳಿಗೆ ಡಿಎ, ಡಿಆರ್​ ಬಾಕಿ ಪಾವತಿ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 26, 2021 | 11:46 AM

Share

ಏರಿಕೆಗಾಗಿ ಎದುರು ನೋಡುತ್ತಿರುವ ಲಕ್ಷಾಂತರ ಸಂಖ್ಯೆಯ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಬಾಕಿ ಡಿಯರ್​​ನೆಸ್​ ಅಲೋವೆನ್ಸ್ ಅರಿಯರ್ಸ್ (DA) ಬಗ್ಗೆ ಕೇಂದ್ರದಿಂದ ಇಂದು (ಶನಿವಾರ) ಸಭೆ ನಡೆಯಲಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು, ಜಾಯಿಂಟ್ ಕನ್ಸಲ್ಟೆಟಿವ್ ಮಷಿನರಿ (ಜೆಸಿಎಂ) ರಾಷ್ಟ್ರೀಯ ಸಮಿತಿ ಮತ್ತು ಸಿಬ್ಬಂದಿ ಹಾಗೂ ತರಬೇತಿ ಇಲಾಖೆ (DoPT)ಯಿಂದ ಇಂದಿನ ಸಭೆಯಲ್ಲಿ ಏಳನೇ ವೇತನ ಆಯೋಗದ ಶಿಫಾರಸು ಪ್ರಕಾರ ಡಿಎ ಅರಿಯರ್ಸ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. “ಹಣಕಾಸು ಸಚಿವಾಯದಲ್ಲಿ ವೆಚ್ಚ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹಾಗೂ ಜೆಸಿಎಂ ಪ್ರತಿನಿಧಿಗಳ ಸಭೆ ಜೂನ್ 26, 2021ರಂದು ನಡೆಯಲಿದೆ. ಪೂರ್ವಆಯೋಜಿತ ಸಭೆಯ ಅಧ್ಯಕ್ಷತೆಯನ್ನು ಭಾರತದ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯಲಿದೆ,” ಎಂದು ಜೆಸಿಎಂ ಕಾರ್ಯರ್ದರ್ಶಿ (ಸಿಬ್ಬಂದಿ ಪರ) ಗೋಪಾಲ್ ಮಿಶ್ರಾ ತಿಳಿಸಿದ್ದರು.

ಸಂಸತ್​ನಲ್ಲಿ ಕೇಂದ್ರವು ತಿಳಿಸಿದಂತೆ, ನಿಲ್ಲಿಸಲಾದ ಡಿಯರ್​ನೆಸ್ ಅಲೋವೆನ್ಸ್ ಮತ್ತು ಡಿಯರ್​ನೆಸ್ ರಿಲೀಫ್ (ಡಿಆರ್) ಅನ್ನು ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಜುಲೈ 1, 2021ರಿಂದ ಮತ್ತೆ ಶುರುವಾಗಲಿದೆ. ಕೊವಿಡ್- 19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಡಿ.ಎ. ಮೂರು ಕಂತುಗಳು ಮತ್ತು ಪಿಂಚಣಿದಾರರಿಗೆ ಡಿಯರ್​ನೆಸ್ ರಿಲೀಫ್, ಅಂದರೆ ಜನವರಿ 1, 2020, ಜುಲೈ 1, 2020 ಹಾಗೂ ಜನವರಿ 1, 2021ಕ್ಕೆ ನಿಲ್ಲಿಸಲಾಗಿತ್ತು. 2020ರ ಜನವರಿಯಲ್ಲಿ ಶೇ 4, 2020ರ ಜೂನ್​ನಲ್ಲಿ ಶೇ 3 ಹಾಗೂ ಈ ವರ್ಷದ ಜನವರಿಯಲ್ಲಿ ಶೇ 4ರಷ್ಟು ಡಿ.ಎ. ಅನ್ನು ಕೇಂದ್ರ ಸರ್ಕಾರಿ ನೌಕರರಿಗೆ ಏರಿಸಲಾಗಿದೆ. ಈಗ 2021ರ ಜುಲೈನಿಂದ ಮತ್ತೆ ನೀಡಲಾಗುವುದು. ಇದರಿಂದ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷಕ್ಕೂ ಹೆಚ್ಚು ನಿವೃತ್ತರಿಗೆ ಅನುಕೂಲ ಆಗಲಿದೆ.

ಜುಲೈ 1ರಿಂದ ಆಗಲಿರುವ ಡಿ.ಎ. ಹೆಚ್ಚಳ ಮಾತ್ರ ಆ ದಿನದಿಂದ ಜಾರಿಗೆ ಬರಲಿದೆ. ಪರಿಷ್ಕರಣೆ ಆಗದ ಅವಧಿಯ ಡಿ.ಎ. ಬಾಕಿಯು ಉದ್ಯೋಗಿಗಳಿಗೆ ಸಿಗುವುದಿಲ್ಲ. ಸದ್ಯಕ್ಕೆ ಡಿಯರ್​ನೆಸ್ ಅಲೋವೆನ್ಸ್ ಶೇ 17ರ ದರದಲ್ಲಿ ಪಾವತಿಸಲಾಗುತ್ತಿತ್ತು. ಅದು ಶೇ 11ರಷ್ಟು ಹೆಚ್ಚಳವಾಗಿ, ಒಟ್ಟಾರೆಯಾಗಿ ಶೇ 28ರಷ್ಟಾಗುತ್ತದೆ ಎಂದು ವರದಿಗಳು ಹೇಳುತ್ತವೆ. ಸದ್ಯಕ್ಕೆ ಕೇಂದ್ರ ಸರ್ಕಾರಿ ನೌಕರರಿಗೆ ಕನಿಷ್ಠ ವೇತನ 18,000 ಮತ್ತು ಈಗಿರುವುದಕ್ಕೆ ಡಿಯರ್​ನೆಸ್ ಅಲೋವೆನ್ಸ್ ಶೇ 15ರಷ್ಟು ಸೇರ್ಪಡೆ ಆಗಲಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರ ಸರ್ಕಾರಿ ನೌಕರರು ಗಮನಿಸಬೇಕಾದ ಅಂಶ ಏನೆಂದರೆ, ಏಳನೇ ವೇತನ ಆಯೋಗದ ಫಿಟ್​ಮೆಂಟ್ ಫ್ಯಾಕ್ಟರ್ 2.57 ತಿಂಗಳ ಸಂಬಳದ ಅಂದಾಜು ಏರಿಕೆ ಆಗಿದೆ.

ಇದನ್ನೂ ಓದಿ: 7th pay commission: ಕೇಂದ್ರ ಸರ್ಕಾರಿ ನೌಕರರಿಗೆ ಜೂನ್​ನಲ್ಲಿ ಡಿಎ ಹೆಚ್ಚಳ ಘೋಷಣೆ ಮಾಡುವ ಸಾಧ್ಯತೆ

(Central government employees and pensioners DA, DR arrears decision likely today. Here is the details)

Published On - 11:43 am, Sat, 26 June 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ