Anie Siva: ಮಗನೊಂದಿಗೆ ನಿಂಬೂ ಪಾನಿ ಮಾರುತ್ತಿದ್ದ ಮಹಿಳೆ ಆ್ಯನಿ ಶಿವಾ, ಇಂದು ಹೆಮ್ಮೆಯ ಪೊಲೀಸ್ ಅಧಿಕಾರಿ!

Woman Sub inspector at Varkala police station: ಮಗನನ್ನು ಮಡಿಲಲ್ಲಿ ಹಿಡಿದು, ಕಾಣದ ಗುರಿಯತ್ತ ಹೆಜ್ಜೆಹಾಕುತ್ತಾ 12 ವರ್ಷ ಸಾಗಿ ಬಂದ ಆ್ಯನಿ ಶಿವಾಳ ಸಾಧನೆ ಇತತರಿಗೆ ಪ್ರೇರಣಾದಾಯಕ. ಪುರುಷ ಪ್ರತಾಪದ ಈ ಸಾಮ್ರಾಜ್ಯದಲ್ಲಿ ಶಿವಾಳ ಸಾಧನೆ ಅಮೋಘ ಎಂದು ಕೇರಳ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಶುಭ ಕೋರಿದ್ದಾರೆ.

Anie Siva: ಮಗನೊಂದಿಗೆ ನಿಂಬೂ ಪಾನಿ ಮಾರುತ್ತಿದ್ದ ಮಹಿಳೆ ಆ್ಯನಿ ಶಿವಾ, ಇಂದು ಹೆಮ್ಮೆಯ ಪೊಲೀಸ್ ಅಧಿಕಾರಿ!
ಮಗನೊಂದಿಗೆ ನಿಂಬೂ ಪಾನಿ ಮಾರುತ್ತಿದ್ದ ಮಹಿಳೆ ಆ್ಯನಿ ಶಿವಾ, ಇಂದು ಹೆಮ್ಮೆಯ ಪೊಲೀಸ್ ಅಧಿಕಾರಿ!
Follow us
ಸಾಧು ಶ್ರೀನಾಥ್​
| Updated By: ಡಾ. ಭಾಸ್ಕರ ಹೆಗಡೆ

Updated on:Jun 28, 2021 | 12:45 PM

ಹದಿನೆಂಟು ವರ್ಷದ ಆ ಯುವತಿಗೆ ನಿಂಬೂ ಪಾನಿ ಮಾರಾಟ ಮಾಡಿ, ಜೀವನ ನಿರ್ವಹಿಸುವ ಅನಿವಾರ್ಯತೆ ಜೀವನದಲ್ಲಿ ಎದುರಾಗಿತ್ತು. ಆದರೆ ಆಕೆ ತನ್ನ ಜೀವನವನ್ನು ಅಷ್ಟಕ್ಕೇ ಸೀಮಿತಗೊಳಿಸಲಿಲ್ಲ… ಮುಂದೆ ಮುಂದೆ ಸಾಹಸಕ್ಕೆ ಮುಂದಾಗಿ ಜೀವನದಲ್ಲಿ ಮುಂದೆ ಬರುವ ವೇಳೆಗೆ ಆಕೆಗೆ 31 ವರ್ಷ ವಯಸ್ಸಾಯಿತು. ಅಷ್ಟರಲ್ಲಿ ಆಕೆ ಪೊಲೀಸ್ ಸಬ್​ ಇನ್ಸ್​​ಪೆಕ್ಟರ್​​ ಆಗಿ ಮಾರ್ಪಟ್ಟಿದ್ದರು! ಆ ಸಾಹಸಿ ಯುವತಿಗೆ ಪೊಲೀಸ್​ ಇಲಾಖೆಯಿಂದ ಈಗ ಸೆಲ್ಯೂಟ್​! 18 ವರ್ಷದ ಹಿಂದೆ ಯಾವ ಪೊಲೀಸ್ ಠಾಣೆ ಎದುರು ಆಕೆ ದಿಕ್ಕು ತೋಚದೆ, ಏಕಾಂಗಿಯಾಗಿ ನಿಂತಿದ್ದಳೋ.. ಈಗ ಅದೇ ಠಾಣೆಯಲ್ಲಿ ಆಕೆಗೆ ಎಲ್ಲಡೆಯಿಂದ ಸೆಲ್ಯೂಟ್​! ಸೆಲ್ಯೂಟ್​!!

ನೆರೆಯ ಕೇರಳದಲ್ಲಿ ತಿರುವನಂತಪುರದ ವಾರ್ಕಳ ಪೊಲೀಸ್​ ಠಾಣೆಯಲ್ಲಿ ಈಗ ಸಬ್​ ಇನ್ಸ್​​ಪೆಕ್ಟರ್​​ ಆಗಿರುವ ಆ್ಯನಿ ಶಿವಾ (Anie Siva) ಜೀವನ ಕತೆಯಿದು.. 18 ವರ್ಷದವಳಾಗಿದ್ದಾಗ ಅವಳ ಕೈಗೊಂದು ಕೂಸನ್ನು ದಯಪಾಲಿಸಿ, ಗಂಡನಾದವನು ಅವಳನ್ನು ನಡುಬೀದಿಯಲ್ಲಿ ಬಿಟ್ಟುಹೋಗಿದ್ದ. ಕೇರಳ ಪೊಲೀಸ್​ ಆ್ಯನಿ ಶಿವಾಳ ಸಾಧನೆಯನ್ನು ಪ್ರಶಂಸಿಸುತ್ತಾ… ಟ್ವೀಟ್ ಮಾಡಿ ಸಂತಸಪಟ್ಟಿದೆ.

ಮಗನನ್ನು ಮಡಿಲಲ್ಲಿ ಹಿಡಿದು, ಕಾಣದ ಗುರಿಯತ್ತ ಹೆಜ್ಜೆಹಾಕುತ್ತಾ 12 ವರ್ಷ ಸಾಗಿ ಬಂದ ಆ್ಯನಿ ಶಿವಾಳ ಸಾಧನೆ ಇತತರಿಗೆ ಪ್ರೇರಣಾದಾಯಕ. ಪುರುಷ ಪ್ರತಾಪದ ಈ ಸಾಮ್ರಾಜ್ಯದಲ್ಲಿ ಶಿವಾಳ ಸಾಧನೆ ಅಮೋಘ ಎಂದು ಕೇರಳ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಶುಭ ಕೋರಿದ್ದಾರೆ.

Kerala mother Anie Siva who once sold lemonade to survive is now sub inspector at Varkala police station

ಪುರುಷ ಪ್ರತಾಪದ ಈ ಸಾಮ್ರಾಜ್ಯದಲ್ಲಿ ಶಿವಾಳ ಅಮೋಘ ಸಾಧನೆಗೆ ಮಗ ಸಾಕ್ಷಿಯಾಗಿದ್ದಾನೆ..

12 ವರ್ಷಗಳ ಹಿಂದೆ ಅಂದು ವಾರ್ಕಳ ಶಿವಗಿರಿ ಆಶ್ರಮದಲ್ಲಿ (Varkala Sivagiri ashram) ನಿಂಬೂ ಪಾನಿ, ಐಸ್​ಕ್ರೀಮ್​, ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದ ಶಿವಾಗೆ ಒಬ್ಬರು ದಾರಿ ತೋರಿದ್ದರು… ಆಕೆಗೆ ಒಂದಷ್ಟು ಹಣ ನೀಡುತ್ತಾ… ಪೊಲೀಸ್​ ಇಲಾಖೆ ಮತ್ತು ಆ ಅಸಾಯಹಕ ಹೆಂಗಸಿನ ಬಗ್ಗೆ ಆತನಿಗೆ ಅದಿನ್ನೆಷ್ಟು ಕಕ್ಕುಲತೆ ಇತ್ತೋ.. ಶಿವಾ ನೀನು ಪೊಲೀಸ್​ ಸಬ್​ ಇನ್ಸ್​​ಪೆಕ್ಟರ್ ಪರೀಕ್ಷೆ ಬರೆಯಬೇಕಮ್ಮಾ… ನಿನ್ನ ಜೀವನವನ್ನು ದಿಟ್ಟವಾಗಿ ಎದುರಿಸಬೇಕು ಎಂದ್ರೆ ನೀನೊಬ್ಬ ಪೊಲೀಸ್​ ಅಧಿಕಾರಿ ಆಗಬೇಕಮ್ಮಾ ಅಂದಿದ್ದರು! ಅಷ್ಟೇ… ಶಿವಾ ಹಿದಿರುಗಿ ನೋಡಲಿಲ್ಲ.. ಏಕೆಂದ್ರೆ ಎದುರಿಗೆ ಗುರಿ-ಗುರು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೂ ಶಿವಾಗೆ IPS ಆಗಬೇಕು ಎಂಬ ಆಸೆಯಿತ್ತಂತೆ. ಆದರೆ ಆಕೆಯ ಜೀವನ ಈ ಸಾಧನೆಗೆ ತೃಪ್ತಿಪಡಿಸಿದೆ.

(Kerala mother Anie Siva who once sold lemonade to survive is now sub inspector at Varkala police station)

Published On - 11:36 am, Mon, 28 June 21

ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK
ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK
ಪತಿ ಜೊತೆ ಗೌತಮಿ, ಕದ್ದು ನೋಡಿದ ದೋಸ್ತರಿಗೆ ಕಂಡಿದ್ದೇನು?
ಪತಿ ಜೊತೆ ಗೌತಮಿ, ಕದ್ದು ನೋಡಿದ ದೋಸ್ತರಿಗೆ ಕಂಡಿದ್ದೇನು?