Twitter India: ಟ್ವಿಟರ್​​ ಮಧ್ಯಂತರ ಕುಂದುಕೊರತೆ ಪರಿಹಾರ ಅಧಿಕಾರಿ ಧರ್ಮೇಂದ್ರ ಚತುರ್​ ರಾಜೀನಾಮೆ; ಕೇಂದ್ರದ ಸೂಚನೆ ಮೇರೆಗೆ ನೇಮಕ ಮಾಡಿದ್ದ ಕಂಪನಿ

New IT Rules: ಭಾರತದಲ್ಲಿ ಮೇ 25ರಿಂದ ಹೊಸ ಐಟಿ ನಿಯಮಗಳು ಜಾರಿಯಾಗಿವೆ. ಅದರ ಅನ್ವಯ ಇಲ್ಲಿ 50 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಕಂಪನಿಗಳು ಕುಂದುಕೊರತೆ ನಿವಾರಣಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು.

Twitter India: ಟ್ವಿಟರ್​​ ಮಧ್ಯಂತರ ಕುಂದುಕೊರತೆ ಪರಿಹಾರ ಅಧಿಕಾರಿ ಧರ್ಮೇಂದ್ರ ಚತುರ್​ ರಾಜೀನಾಮೆ; ಕೇಂದ್ರದ ಸೂಚನೆ ಮೇರೆಗೆ ನೇಮಕ ಮಾಡಿದ್ದ ಕಂಪನಿ
ಟ್ವಿಟರ್​ ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jun 28, 2021 | 8:31 AM

ಭಾರತದಲ್ಲಿ ಟ್ವಿಟರ್​ ಮತ್ತು ಕೇಂದ್ರ ಸರ್ಕಾರದ ನಡುವೆ, ಹೊಸ ಐಟಿ ನಿಯಮಗಳ ಪಾಲನೆ ವಿಚಾರದಲ್ಲಿ ತಿಕ್ಕಾಟ ನಡೆದಿದ್ದು ಗೊತ್ತೇಇದೆ. ಅದಾದ ಬಳಿಕ ಭಾರತದ ಹೊಸ ಐಟಿ ನಿಯಮಗಳ ಅನುಸರಣೆ ಸಂಬಂಧ ಟ್ವಿಟರ್​​ ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡಿತ್ತು. ಹಾಗೇ ಟ್ವಿಟರ್ ಬಳಕೆದಾರರ ಕುಂದುಕೊರತೆ, ಸಮಸ್ಯೆ ಆಲಿಸಲು ಮಧ್ಯಂತರ ಪ್ರಾದೇಶಿಕ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡಿತ್ತು. ಆದರೆ ಇತ್ತೀಚೆಗಷ್ಟೇ ನೇಮಕವಾಗಿದ್ದ ಮಧ್ಯಂತರ ಪ್ರಾದೇಶಿಕ ಕುಂದುಕೊರತೆ ಪರಿಹಾರ ಅಧಿಕಾರಿ ಧರ್ಮೇಂದ್ರ ಚತುರ್​ ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಟ್ವಿಟರ್​ ಮಧ್ಯಂತರ ಪ್ರಾದೇಶಿಕ ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ನೇಮಕ ಮಾಡಿತ್ತು. ಆದರೆ ಧರ್ಮೇಂದ್ರ ಚತುರ್​ ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸೋಷಿಯಲ್​ ಮೀಡಿಯಾದ ವೆಬ್​ಸೈಟ್​​ನಲ್ಲಿ ಇನ್ನುಮುಂದೆ ಅವರ ಹೆಸರು ಇರುವುದಿಲ್ಲ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು-2021ರಡಿಯಲ್ಲಿ ಅದನ್ನು ತೆಗೆಯಲಾಗಿದೆ ಎಂದು ಟ್ವಿಟರ್​ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ಕೇಂದ್ರ ಸರ್ಕಾರ ತನ್ನ ಹೊಸ ಐಟಿ ನಿಯಮಗಳಡಿ, ಸಾಮಾಜಿಕ ಮಾಧ್ಯಮಗಳು ಭಾರತದಲ್ಲಿ ಮಧ್ಯಂತರ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆದರೆ ಜೂನ್​ ಪ್ರಾರಂಭದಲ್ಲಷ್ಟೇ ನೇಮಕವಾಗಿದ್ದ ಧರ್ಮೇಂದ್ರ ಚತುರ್​ ತಿಂಗಳ ಅಂತ್ಯದೊಳಗೇ ರಾಜೀನಾಮೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಿಗೆ ಸಂಬಂಧಪಟ್ಟಂತೆ ಕೇಂದ್ರದ ಹೊಸ ನಿಯಮಗಳ ವಿಚಾರದಲ್ಲಿ ಟ್ವಿಟರ್​ ಕಂಪನಿ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಇಂಥದ್ದೊಂದು ಬೆಳವಣಿಗೆ ನಡೆದಿದೆ. ಭಾರತದಲ್ಲಿನ ನಿಯಮಗಳನ್ನು ಪಾಲಿಸುವಲ್ಲಿ ಟ್ವಿಟರ್ ವಿಫಲವಾಗಿದೆ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸುತ್ತಲೇ ಇತ್ತು.

ಭಾರತದಲ್ಲಿ ಮೇ 25ರಿಂದ ಹೊಸ ಐಟಿ ನಿಯಮಗಳು ಜಾರಿಯಾಗಿವೆ. ಅದರ ಅನ್ವಯ ಇಲ್ಲಿ 50 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಕಂಪನಿಗಳು ಕುಂದುಕೊರತೆ ನಿವಾರಣಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಮತ್ತು ಅವರ ಹೆಸರು, ಫೋನ್​ ನಂಬರ್​ನ್ನು ತಮ್ಮ ವೆಬ್​ಸೈಟ್​ ಮೂಲಕ ಪ್ರಚುರಪಡಿಸಬೇಕು. ಬಳಕೆದಾರರಿಗೆ ಸೋಷಿಯಲ್ ಮೀಡಿಯಾ ಸಂಬಂಧಪಟ್ಟು ಉಂಟಾಗುವ ಸಮಸ್ಯೆಗಳನ್ನು ಅವರು ಆಲಿಸಬೇಕು ಎಂದು ಹೇಳಲಾಗಿದೆ. ಆದರೆ ಕೇಂದ್ರ ಸರ್ಕಾರ ಹೇಳಿದ್ದ ನಿಯಮಗಳನ್ನು ಪಾಲಿಸಲು ವಿಳಂಬ ಮಾಡಿದ ಟ್ವಿಟರ್​ಗೆ ಜೂ.5ರಂದು ನೋಟಿಸ್​ ಕೂಡ ನೀಡಲಾಗಿತ್ತು. ಬಳಿಕ ಕೇಂದ್ರದ ಆದೇಶವನ್ನು ಪಾಲಿಸುವುದಾಗಿ ಹೇಳಿಕೊಂಡಿತ್ತು.

ಇದನ್ನೂ ಓದಿ: Explainer: ಹಲವು ಟ್ವಿಟರ್​ ಖಾತೆಗಳ ಫಾಲೊವರ್ಸ್ ಸಂಖ್ಯೆ​ ಇಳಿಯುತ್ತಿದೆ ಏಕೆ?

Published On - 8:30 am, Mon, 28 June 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್