AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer: ಹಲವು ಟ್ವಿಟರ್​ ಖಾತೆಗಳ ಫಾಲೊವರ್ಸ್ ಸಂಖ್ಯೆ​ ಇಳಿಯುತ್ತಿದೆ ಏಕೆ?

ನಿಯಮಿತವಾಗಿ ಅಕೌಂಟ್​ಗಳನ್ನು ಪರಿಶೀಲಿಸುವಾಗ ಅಗತ್ಯ ಷರತ್ತುಗಳನ್ನು ಪೂರೈಸದ ಹಲವು ಅಕೌಂಟ್​ಗಳನ್ನು ಅಮಾನತು ಮಾಡಲಾಗಿದೆ ಎಂದು ಟ್ವಿಟರ್ ಹೇಳಿದೆ. ಈ ಹಿಂದೆಯೂ ಇಂಥದ್ದೇ ಬೆಳವಣಿಗೆ ನಡೆದಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬಹುದು.

Explainer: ಹಲವು ಟ್ವಿಟರ್​ ಖಾತೆಗಳ ಫಾಲೊವರ್ಸ್ ಸಂಖ್ಯೆ​ ಇಳಿಯುತ್ತಿದೆ ಏಕೆ?
ಟ್ವಿಟರ್ (ಪ್ರಾತಿನಿಧಿಕ ಚಿತ್ರ)
Ghanashyam D M | ಡಿ.ಎಂ.ಘನಶ್ಯಾಮ
|

Updated on:Jun 13, 2021 | 9:50 PM

Share

ಖ್ಯಾತ ಚಿತ್ರನಟ ಅನುಪಮ್ ಖೇರ್ ಸೇರಿದಂತೆ ಹಲವು ಟ್ವಿಟರ್ ಬಳಕೆದಾರರು ಫಾಲೊವರ್ಸ್​ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಈಚೆಗೆ ಅಳಲು ತೋಡಿಕೊಂಡಿದ್ದರು. ನಿಯಮಿತವಾಗಿ ಅಕೌಂಟ್​ಗಳನ್ನು ಪರಿಶೀಲಿಸುವಾಗ ಅಗತ್ಯ ಷರತ್ತುಗಳನ್ನು ಪೂರೈಸದ ಹಲವು ಅಕೌಂಟ್​ಗಳನ್ನು ಅಮಾನತು ಮಾಡಲಾಗಿದೆ ಎಂದು ಟ್ವಿಟರ್ ಹೇಳಿದೆ. ಈ ಹಿಂದೆಯೂ ಇಂಥದ್ದೇ ಬೆಳವಣಿಗೆ ನಡೆದಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬಹುದು.

ಪಾಸ್​ವರ್ಡ್​ ಅಥವಾ ಫೋನ್​ ನಂಬರ್ ನಮೂದಿಸುವಂತೆ ಆಗಾಗ ನಮ್ಮ ಬಳಕೆದಾರರನ್ನು ಕೇಳುತ್ತೇವೆ. ಇಂಥ ಸಂದರ್ಭದಲ್ಲಿ ಅನುಮಾನ ಬಂದರೆ ಅಕೌಂಟ್ ಬಳಸಲು ಹೆಚ್ಚುವರಿ ಮಾಹಿತಿ ಒದಗಿಸಲು ಕೇಳುತ್ತೇವೆ. ಒಂದು ಅಕೌಂಟ್​ ಇಂಥ ಮಾಹಿತಿ ಕೊಡಲು ವಿಫಲವಾದರೆ ಅದನ್ನು ನಿರ್ಬಂಧಿಸುತ್ತೇವೆ. ಇಂಥ ಅಕೌಂಟ್​ಗಳನ್ನು ಫಾಲೊವರ್ಸ್​ ಸಂಖ್ಯೆಗೆ ಪರಿಗಣಿಸುವುದಿಲ್ಲ ಎಂದು ಟ್ವಿಟರ್ ವಕ್ತಾರರು ಹೇಳಿದ್ದಾರೆ. ಹಲವರ ಫಾಲೊವರ್ಸ್​ ಸಂಖ್ಯೆ ಕುಸಿಯಲು ಇದು ಮುಖ್ಯ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಪ್ಲಾಟ್​ಫಾರ್ಮ್​ ದುರ್ಬಳಕೆಯನ್ನು ಟ್ವಿಟರ್ ಹೇಗೆ ವಿವರಿಸುತ್ತದೆ? ಟ್ವಿಟರ್ ಪ್ರಕಾರ, ಇತರ ಬಳಕೆದಾರರನ್ನು ದಿಕ್ಕುತಪ್ಪಿಸುವ ಯಾವುದೇ ಆಕ್ರಮಣಕಾರಿ ಅಥವಾ ಸಂಶಯಾಸ್ಪದ ಪ್ರಯತ್ನವನ್ನು ತಿರುಚುವುದು (ಮ್ಯಾನಿಪ್ಯುಲೇಶನ್) ಎಂದು ಕರೆಯಲಾಗುತ್ತದೆ. ಇತರರ ಹೆಸರುಗಳಲ್ಲಿ ನಕಲಿ ಖಾತೆಗಳನ್ನು ಹೊಂದುವುದು ಸಹ ಟ್ವಿಟರ್​ನ ನೀತಿಗಳ ಉಲ್ಲಂಘನೆ ಎನಿಸಿಕೊಳ್ಳುತ್ತದೆ. ತಮ್ಮ ಅಕೌಂಟ್​ಗಳಲ್ಲಿ ತಪ್ಪು ಮಾಹಿತಿ ಹಂಚಿಕೊಳ್ಳುವುದನ್ನು ಸಹ ತಿರುಚುವುದು ಎಂದೇ ಪರಿಗಣಿಸಲಾಗುತ್ತದೆ. ಕದ್ದ ಅಥವಾ ಇತರರ ಚಿತ್ರಗಳನ್ನು ಬಳಸುವುದು, ಉದ್ಯೋಗ ಮಾಹಿತಿಯನ್ನು ತಪ್ಪಾಗಿ ಕೊಡುವುದು, ಉದ್ದೇಶಪೂರ್ವಕಾಗಿ ತಪ್ಪು ಮಾಹಿತಿ ಕೊಡುವುದರ ಜೊತೆಗೆ ತಪ್ಪು ಪ್ರಾದೇಶಿಕ ವಿವರ ಕೊಡುವುದು ಸಹ ಟ್ವಿಟರ್​ ನೀತಿಗಳ ಉಲ್ಲಂಘನೆ ಎನಿಸಿಕೊಳ್ಳುತ್ತದೆ.

ಯಾವುದೇ ಟ್ವಿಟರ್​ ಅಕೌಂಟ್ ನಿರ್ದಿಷ್ಟವಾಗಿ ಇಂಥ ವ್ಯಕ್ತಿ ಅಥವಾ ಸಂಸ್ಥೆಗೆ ಸೇರಿದ್ದು ಎಂದು ದೃಢಪಡಿಸದಿದ್ದರೆ ಅಂಥವನ್ನು ಟ್ವಿಟರ್ ನಿರ್ಬಂಧಿಸುತ್ತದೆ. ಜನಪ್ರಿಯ ನಟರು ಅಥವಾ ರಾಜಕಾರಿಣಿಗಳ ಹೆಸರಿನಲ್ಲಿ ಒಂದೇ ಡಿಸ್​ಪ್ಲೇ ಪಿಕ್ಚರ್ ಮತ್ತು ಹೆಸರು ಹೊಂದಿರುವ ನೂರಾರು ಟ್ವಿಟರ್​ ಅಕೌಂಟ್​ಗಳು ಕಾಣಸಿಗುತ್ತವೆ. ಇಂಥ ಅಕೌಂಟ್​ಗಳನ್ನು ಟ್ವಿಟರ್​ ಪರಿಶೀಲನೆಗೆ ಒಳಪಡಿಸಿ, ತಪ್ಪು ಮಾಹಿತಿ ಇರುವುದನ್ನು ಗುರುತಿಸಿ ಬ್ಲಾಕ್ ಮಾಡುತ್ತದೆ.

ಕೃತಕವಾಗಿ ಫಾಲೊವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳುವುದನ್ನು ಟ್ವಿಟರ್ ಒಪ್ಪುವುದಿಲ್ಲ. ಇದರಲ್ಲಿ ಫಾಲೊವರ್ಸ್​ಗಳನ್ನು ಖರೀದಿಸುವುದು ಅಥವಾ ಮಾರುವ ಕ್ರಮವೂ ಸೇರಿರುತ್ತದೆ. ನಿಮ್ಮ ಅಕೌಂಟ್​ಗೆ ಬಂದ ಎಂಗೇಜ್​ಮೆಂಟ್​ ಅವಧಿಯನ್ನು ನೀವು ಮಾರಲೂ ಅವಕಾಶ ಇರುವುದಿಲ್ಲ. ರಿಟ್ವೀಟ್, ಲೈಕ್, ನಮೂದು (ಮೆನ್ಷನ್), ಟ್ವಿಟರ್ ಪೋಲ್ ಸಹ ಇದರಲ್ಲಿ ಸೇರುತ್ತದೆ. ಯಾವುದೇ ಆ್ಯಪ್ ಅಥವಾ ಥರ್ಡ್​ ಪಾರ್ಟಿ ಸೇವೆಗಳು ನಿಮಗೆ ಟ್ವಿಟರ್​ನಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸುವುದಾಗಿ ಭರವಸೆ ನೀಡಿದರೆ ಅದನ್ನೂ ಸಹ ಮ್ಯಾನಿಪ್ಯುಲೇಷನ್ ಎಂದೇ ಪರಿಗಣಿಸಲಾಗುತ್ತದೆ..

ಇಂಥ ನಡವಳಿಕೆಗಳನ್ನು ಟ್ವಿಟರ್ ಹೇಗೆ ಗುರುತಿಸುತ್ತದೆ? ಯಾವುದೇ ಅಕೌಂಟ್​ ಬಗ್ಗೆ ಅನುಮಾನ ಬಂದರೆ ಟ್ವಿಟರ್​ ಅಂಥ ಅಕೌಂಟ್​ಗಳಿಗೆ ಆ್ಯಂಟಿ ಸ್ಪಾಮ್ ಚಾಲೆಂಜ್​ಗಳನ್ನು (ನಿರ್ದಿಷ್ಟ ಪ್ರಶ್ನೆ ಅಥವಾ ಆಯ್ಕೆಗಳು) ಕಳಿಸಲಾಗುತ್ತದೆ. ಈ ಹಂತದಲ್ಲಿ ಅನುಮಾನ ಪರಿಹಾರವಾಗದಿದ್ದರೆ ಫೋನ್ ನಂಬರ್ ವೆರಿಫಿಕೇಶನ್, reCAPTCHA ಪ್ರಶ್ನೆಗಳನ್ನು ಮುಂದಿಡಲಾಗುತ್ತದೆ. ಇತ್ತೀಚಿನ ದಿನದಲ್ಲಿ ಸಾಕಷ್ಟು ಅಕೌಂಟ್​ಗಳು ಇಂಥ ಪರಿಶೀಲನೆಗೆ ಒಳಪಟ್ಟವು. ಅವು ಟ್ವಿಟರ್ ಚಾಲೆಂಜ್​ ದಾಟಿ ಮುಂದಕ್ಕೆ ಹೋಗದಿದ್ದರೆ ಅಂಥ ಅಕೌಂಟ್​ಗಳನ್ನು ಲಾಕ್ ಮಾಡಲಾಗುತ್ತದೆ.

ಟ್ವಿಟರ್ ಪ್ರಕಾರ ಇಂಥ ಅಕೌಂಟ್​ಗಳಲ್ಲಿರುವ ಟ್ವೀಟ್ ಡಿಲೀಟ್ ಮಾಡುವುದರಿಂದ ಹಿಡಿದು ಅಕೌಂಟ್​ಗಳನ್ನು ಲಾಕ್​ ಮಾಡುವವರೆಗೆ ಹಲವು ರೀತಿಯ ಕ್ರಮಗಳನ್ನು ಟ್ವಿಟರ್ ತೆಗೆದುಕೊಳ್ಳುತ್ತದೆ. ಪ್ಲಾಟ್​ಫಾರ್ಮ್​ ಮ್ಯಾನಿಪ್ಯುಲೇಟ್ ಮಾಡುವ ಇಂಥ ಇತರ ಅಪರಾಧಗಳು ಅಕೌಂಟ್​ ಅನ್ನು ಶಾಶ್ವತವಾಗಿ ಅಮಾನತಿನಲ್ಲಿಡುವ ಕ್ರಮಕ್ಕೆ ಕಾರಣವಾಗಬಹುದು ಎಂದು ಟ್ವಿಟರ್ ಎಚ್ಚರಿಸುತ್ತದೆ.

ಯಾವುದೇ ಅಕೌಂಟ್​ನಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿದೆ ಎಂದು ಕಂಡುಬಂದರೆ ಸರ್ಕಾರ ನೀಡಿರುವ ಯಾವುದಾದರೂ ಗುರುತಿನ ಪುರಾವೆಯನ್ನು ಟ್ವಿಟರ್ ಕೇಳಬಹುದು. ತಮ್ಮ ಅಕೌಂಟ್ ಅನ್ನು ತಪ್ಪು ಕಾರಣಗಳಿಗಾಗಿ ಲಾಕ್ ಅಥವಾ ಅಮಾನತು ಮಾಡಲಾಗಿದೆ ಎಂದು ಅನ್ನಿಸಿದರೆ, ಯಾವುದೇ ಯೂಸರ್ ಇದನ್ನು ಟ್ವಿಟರ್ ಸಂಸ್ಥೆಯ ಗಮನಕ್ಕೆ ತರಬಹುದಾಗಿದೆ.

(Many Twitter handles keep losing followers This is the Reason for This Development)

ಇದನ್ನೂ ಓದಿ: ತುಳು ಭಾಷೆಗೆ ಸೂಕ್ತ ಸ್ಥಾನಮಾನ; ಟ್ವಿಟರ್​ನಲ್ಲಿ ಜೋರಾಯ್ತು ತುಳು ಭಾಷಿಕರ ಹೋರಾಟ

ಇದನ್ನೂ ಓದಿ: #BJPFailedKarnataka: ಟ್ವಿಟರ್​ನಲ್ಲಿ ಟ್ರೆಂಡ್ ಆಗ್ತಿದೆ ಕರ್ನಾಟಕ ಸರ್ಕಾರದ ವೈಫಲ್ಯ

Published On - 9:45 pm, Sun, 13 June 21

ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ