Flipkart Big Saving Days 2021 Sale: ಪೋಕೋ M3 ಪ್ರೊ 5G ಮೊಬೈಲ್ ಫೋನ್ ಮಾರಾಟ ಇಂದಿನಿಂದ ಶುರು

ಪೋಕೋ M3 ಪ್ರೊ 5G ಮೊಬೈಲ್ ಫೋನ್ ಇಂದಿನಂದ ಫ್ಲಿಪ್​ಕಾರ್ಟ್ ವೆಬ್​ಸೈಟ್​ನಲ್ಲಿ ಖರೀದಿಗೆ ದೊರೆಯಲಿದೆ. ಮಧ್ಯಾಹ್ನ 12ಕ್ಕೆ ಸಿಗಲಿರುವ ಈ ಫೋನ್​ನ ವೈಶಿಷ್ಟ್ಯ ಮತ್ತಿತರ ವಿವರ ಇಲ್ಲಿದೆ.

Flipkart Big Saving Days 2021 Sale: ಪೋಕೋ M3 ಪ್ರೊ 5G ಮೊಬೈಲ್ ಫೋನ್ ಮಾರಾಟ ಇಂದಿನಿಂದ ಶುರು
ಪೋಕೋ ಎಂ3 ಪ್ರೋ 5ಜಿ

ಪೋಕೋ M3 ಪ್ರೊ 5G ಮೊಬೈಲ್ ಫೋನ್ ಮಾರಾಟ ಇಂದು (ಜೂನ್ 14) ಆರಂಭವಾಗಲಿದೆ. ಮಧ್ಯಾಹ್ನ 12ಕ್ಕೆ ಇ ಕಾಮರ್ಸ್ ವೆಬ್​ಸೈಟ್ ಫ್ಲಿಪ್​ಕಾರ್ಟ್​ನಲ್ಲಿ ಮಾರಾಟ ಶುರುವಾಗಲಿದೆ. ಯಾರಿಗೆ ಆಸಕ್ತಿ ಇದೆಯೋ ಅಂಥವರು ವೆಬ್​ಸೈಟ್​ನಲ್ಲಿ ಪ್ರಯತ್ನಿಸಬಹುದು. ಪೋಕೋ M3 ಪ್ರೊ 5G ಮೊಬೈಲ್ ಫೋನ್​ನ ಬೇಸ್ ಮಾಡೆಲ್ 6GB RAM ಮತ್ತು 128GB ಸ್ಟೋರೇಜ್ ಹೊಂದಿದೆ. ಫೋನ್ ಬೆಲೆ ರೂ. 13,499ರಿಂದ ಆರಂಭವಾಗುತ್ತದೆ. ಈ ಫೋನ್ ಮತ್ತೊಂದು 6GB RAM ಮತ್ತು 128GB ಸ್ಟೋರೇಜ್ ಇರುವಂಥದ್ದು 15,499 ರೂಪಾಯಿ ಆಗುತ್ತದೆ. ಇದರ ಜತೆಗೆ ಬ್ಯಾಂಕ್ ಆಫರ್ ಎಸ್​ಬಿಐ ಕಾರ್ಡ್​ನೊಂದಿಗೆ ಶೇ 10ರ ಕಡಿತ ದೊರೆಯುತ್ತದೆ. ಫ್ಲಿಪ್​ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಜತೆಗೆ ಶೇ 5ರಷ್ಟು ಕ್ಯಾಶ್​ಬ್ಯಾಕ್​ ಸಿಗುತ್ತದೆ. ನೋ ಕಾಸ್ಟ್ ಇಎಂಐ ರೂ. 2,584ನಿಂದ ಆರಂಭವಾಗುತ್ತದೆ.

ಪೋಕೋ M3 ಪ್ರೊ 5G ವೈಶಿಷ್ಟ್ಯ
ಪೋಕೋ M3 ಪ್ರೊ 5G ಫೋನ್ 6.5 ಇಂಚಿನ ಎಫ್​ಎಚ್​ಡಿ+ ಎಲ್​ಸಿಡಿ ಸ್ಕ್ರೀನ್ ಪಿಕ್ಸೆಲ್ ರೆಸಲ್ಯೂಷನ್ 2400X1800 ರಿಫ್ರೆಷ್ ದರ 90Hz ಮತ್ತು ಮೇಲ್ಭಾಗದಲ್ಲಿ ಕಾರ್ನಿಂಗ್ ಗ್ಲಾಸ್ ಬರುತ್ತದೆ. ಈ ಸ್ಮಾರ್ಟ್​ಫೋನ್ 7nm ಮೀಡಿಯಾಟೆಕ್ ಡೈಮೆನ್ಸಿಟಿ 700 5G ಪ್ರೊಸೆಸರ್ ಜತೆ ಬರುತ್ತದೆ. MIUI 12 ಆಧಾರಿತ ಆಂಡ್ರಾಯಿಡ್ 11 ಆಪರೇಟಿಂಗ್ ಸಿಸ್ಟಮ್​ನಲ್ಲಿ ನಡೆಯುತ್ತದೆ. ಈ ಹ್ಯಾಂಡ್​ಸೆಟ್​ 6GB RAM ಮತ್ತು 128GB ತನಕ ಸಂಗ್ರಹ ಸಾಮರ್ಥ್ಯ ಬರುತ್ತದೆ.

ಪೋಕೋ M3 ಪ್ರೊ 5G ಮೊಬೈಲ್​ ಫೋನ್ ಮುಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾದೊಂದಿಗೆ ಬರುತ್ತದೆ. ಈ ಕ್ಯಾಮೆರಾದಲ್ಲಿ 48MP ಪ್ರಾಥಮಿಕ ಕ್ಯಾಮೆರಾ (f/1.8) ಜತೆಗೆ 2MP ಮ್ಯಾಕ್ರೋ ಕ್ಯಾಮೆರಾ 2MP ಡೆಪ್ತ್ ಕ್ಯಾಮೆರಾ ಇದೆ. ಸೆಲ್ಫಿಗಾಗಿ 8MP ಕ್ಯಾಮೆರಾ ಬರುತ್ತದೆ. ಈ ಮೊಬೈಲ್​ ಫೋನ್​ನಲ್ಲಿ 5000mAh ಬ್ಯಾಟರಿ ಇದ್ದು, ಇದರ ಜತೆಗೆ 22.5 ವ್ಯಾಟ್ ಚಾರ್ಜರ್ ಬರುತ್ತದೆ. ಕೂಲ್ ಬ್ಲ್ಯೂ, ಪವರ್ ಬ್ಲ್ಯಾಕ್ ಮತ್ತು ಹಳದಿ ಬಣ್ಣಗಳಲ್ಲಿ ಪೋಕೋ M3 ಪ್ರೊ 5G ಮೊಬೈಲ್​ ಫೋನ್ ಬರುತ್ತದೆ.

ಇದನ್ನೂ ಓದಿ: Poco M3 Pro 5G ಸ್ಮಾರ್ಟ್​ಫೋನ್​ ಭಾರತದಲ್ಲಿ ಬಿಡುಗಡೆ; 1 ಟಿಬಿ ಸಂಗ್ರಹಣಾ ಸಾಮರ್ಥ್ಯ ಬೆಂಬಲಿಸುವ ಕಡಿಮೆ ಬೆಲೆಯ ಫೋನ್​

(Poco M3 Pro 5G mobile phone sale start from today. Colour, price, specification and other details here)