ಶರದ್ ಪವಾರ್ ಸೇರಿದಂತೆ ವಿಐಪಿಗಳ ಕಾರು ಅಥ್ಲೆಟಿಕ್ ಟ್ರ್ಯಾಕ್‌ನಲ್ಲಿ ನಿಲುಗಡೆ; ಇದು ದುಃಖದ ಸಂಗತಿ ಎಂದ ಕಿರಣ್ ರಿಜಿಜು
Kiren Rijiju: ನಮ್ಮ ದೇಶದಲ್ಲಿ ಕ್ರೀಡೆ ಮತ್ತು ಕ್ರೀಡಾ ನೀತಿಶಾಸ್ತ್ರದ ಬಗ್ಗೆ ಈ ರೀತಿಯ ಅಗೌರವವನ್ನು ಕಂಡಾಗ ನನಗೆ ವೈಯಕ್ತಿಕವಾಗಿ ತುಂಬಾ ಬೇಸರವಾಗಿದೆ ಎಂದು ಪುಣೆಯ ಬಿಜೆಪಿ ಶಾಸಕರೊಬ್ಬರ ಟ್ವೀಟ್‌ಗೆ ಪ್ರತಿಕ್ರಿಯಿಸಿ ರಿಜಿಜು ಟ್ವೀಟ್ ಮಾಡಿದ್ದಾರೆ.
ದೆಹಲಿ: : ಪುಣೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲು ಬಂದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮತ್ತು ಮಹಾರಾಷ್ಟ್ರ ಸರ್ಕಾರದ ಹಿರಿಯ ಮಂತ್ರಿಗಳು ಕ್ರೀಡಾಪಟುಗಳು ಬಳಸುವ ಟ್ರ್ಯಾಕ್‌ನಲ್ಲಿ ಕಾರುಗಳನ್ನು ಪಾರ್ಕ್ ಮಾಡಿರುವ ಬಗ್ಗೆ ಬಗ್ಗೆ ಕ್ರೀಡಾ ಸಚಿವ ಕಿರೆನ್ ರಿಜಿಜು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ದೇಶದಲ್ಲಿ ಕ್ರೀಡೆ ಮತ್ತು ಕ್ರೀಡಾ ನೀತಿಶಾಸ್ತ್ರದ ಬಗ್ಗೆ ಈ ರೀತಿಯ ಅಗೌರವವನ್ನು ಕಂಡಾಗ ನನಗೆ ವೈಯಕ್ತಿಕವಾಗಿ ತುಂಬಾ ಬೇಸರವಾಗಿದೆ ಎಂದು ಪುಣೆಯ ಬಿಜೆಪಿ ಶಾಸಕರೊಬ್ಬರ ಟ್ವೀಟ್‌ಗೆ ಪ್ರತಿಕ್ರಿಯಿಸಿ ರಿಜಿಜು ಟ್ವೀಟ್ ಮಾಡಿದ್ದಾರೆ. “ನಮ್ಮ ದೇಶದಲ್ಲಿ ನಮಗೆ ಸಾಕಷ್ಟು ಕ್ರೀಡಾ ಸೌಲಭ್ಯಗಳ ಕೊರತೆಯಿದೆ. ಎಲ್ಲಾ ಕ್ರೀಡಾ ಕೇಂದ್ರಗಳಿಗೆ ಸರಿಯಾದ ಕಾಳಜಿಯ ಅಗತ್ಯವಿದೆ” ಎಂದು ಅವರು ಹೇಳಿದರು.
I’m personally very sad to see such disrespect for sports and sporting ethics in our country. https://t.co/XV47LRckmJ
— Kiren Rijiju (@KirenRijiju) June 27, 2021
ಶಿವಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸಿದ್ಧಾರ್ಥ್ ಶಿರೋಲ್ ಅವರು ಪವಾರ್ (ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷರಾಗಿದ್ದಾರೆ) ಅವರಲ್ಲದೆ, ಕ್ರೀಡಾ ಸಚಿವ ಸುನೀಲ್ ಕೇದಾರ್ ಮತ್ತು ರಾಜ್ಯ ಸಚಿವ ಅದಿತಿ ತತ್ಕರೆ ಅವರು ಪುಣೆಯ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಕ್ರೀಡಾಪಟುಗಳಿಗಾಗಿರುವ ಟ್ರ್ಯಾಕ್‌ನಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಿರುವ ಚಿತ್ರವನ್ನು ಶನಿವಾರ ಟ್ವೀಟ್ ಮಾಡಿದ್ದರು.
ಘಟನೆಗೆ ಕ್ಷಮೆಯಾಚಿಸಿ ಸ್ಪಷ್ಟೀಕರಣವನ್ನು ನೀಡಿದ ಪುಣೆ ಜಿಲ್ಲಾ ಮಾಹಿತಿ ಅಧಿಕಾರಿ,ಅಥ್ಲೆಟಿಕ್ ಟ್ರ್ಯಾಕ್ ಬಳಿ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನು ಬಳಸಲು ಕೇವಲ ಒಂದು ವಾಹನವನ್ನು ಮಾತ್ರ ಅನುಮತಿಸಲಾಗಿತ್ತು. ಇತರ ವಾಹನಗಳಿಗೆ ಅನುಮತಿ ನೀಡದಿದ್ದರೂ ಅಲ್ಲಿ ಪಾರ್ಕ್ ಮಾಡಲಾಗಿದೆ.
It is one thing for the Sport Commissioner of MH to apologize for this disgraceful act… but when will the tall leaders of the #MVA apologize to the athletic community for disrespecting & destructing their hallowed ground with an act that clearly was a brazen abuse of power https://t.co/6EogZYXca0
— Siddharth Shirole (@SidShirole) June 27, 2021
ಈ ಘಟನೆಯನ್ನು ಕ್ರೀಡಾ ಸಚಿವರು ಗಮನಿಸಿದ್ದು ಅಂತಹ ಘಟನೆಯನ್ನು ಮತ್ತೆ ಪುನರಾವರ್ತಿಸದಂತೆ ಸೂಚನೆಗಳನ್ನು ನೀಡಲಾಗಿದೆ. ಇನ್ನು ಮುಂದೆ ಅಥ್ಲೆಟಿಕ್ ಟ್ರ್ಯಾಕ್‌ನಲ್ಲಿ ವಾಹನಗಳನ್ನು ನಿಲ್ಲಿಸದಂತೆ ನೋಡಿಕೊಳ್ಳಲಾಗುವುದು ಎಂದು ಪುಣೆ ಜಿಲ್ಲಾ ಮಾಹಿತಿ ಅಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏತನ್ಮಧ್ಯೆ, ಮಹಾರಾಷ್ಟ್ರದ ಕ್ರೀಡಾ ಆಯುಕ್ತ ಓಂ ಪ್ರಕಾಶ್ ಬಕೋರಿಯಾ ಅವರು ಪವಾರ್ ಅವರ ಕಾಲಿಗೆ ಸ್ವಲ್ಪ ಸಮಸ್ಯೆ ಇದ್ದುದರಿಂದ, ಅವರ ವಾಹನವನ್ನು ಮಾತ್ರ ಸಿಮೆಂಟೆಡ್ ಟ್ರ್ಯಾಕ್‌ನಲ್ಲಿ ನಿಲ್ಲಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
“ನಾನು ಅದಕ್ಕೆ ಕ್ಷಮೆಯಾಚಿಸುತ್ತೇನೆ ಮತ್ತು ಅಂತಹ ಘಟನೆ ಮತ್ತೆ ಸಂಭವಿಸುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ” ಎಂದು ರಾಜ್ಯ ಕ್ರೀಡಾ ಆಯುಕ್ತರು ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದ್ದಾರೆ.
ಸಭಾ ಕೊಠಡಿ ಹೊಂದಿರುವ ಕ್ರೀಡಾ ಸಂಕೀರ್ಣದ ಎರಡನೇ ಮಹಡಿಗೆ ತಲುಪಲು ಮಂತ್ರಿಗಳು ಲಿಫ್ಟ್‌ಗಳನ್ನು ಬಳಸಲು ಬಯಸುವುದಿಲ್ಲ ಎಂದು ವರದಿಯಾಗಿದೆ. ಅನಾನುಕೂಲತೆಯನ್ನು ತಪ್ಪಿಸಲು, ಮಂತ್ರಿಗಳು ಕಾರುಗಳನ್ನು ಸಂಕೀರ್ಣದ ಎರಡನೇ ಮಹಡಿಗೆ ತೆಗೆದುಕೊಂಡು ಕಾರುಗಳನ್ನು ಅಥ್ಲೆಟಿಕ್ ಟ್ರ್ಯಾಕ್‌ನಲ್ಲಿ ನಿಲ್ಲಿಸಲು ನಿರ್ಧರಿಸಿದ್ದಾರೆ ಎಂದು ಎಎನ್‌ಐ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಭೆ ಮುಗಿಯುವವರೆಗೂ ಕಾರುಗಳನ್ನು ಟ್ರ್ಯಾಕ್ನಲ್ಲಿಯೇ ಪಾರ್ಕ್ ಮಾಡಲಾಗಿತ್ತು.
ಇದನ್ನೂ ಓದಿ: Coronavirus cases in India: ದೇಶದಲ್ಲಿ 46,148 ಹೊಸ ಕೊವಿಡ್ ಪ್ರಕರಣ ಪತ್ತೆ, 979 ಮಂದಿ ಸಾವು
(Sports Minister Kiren Rijiju expressed displeasure over VIP Cars Including Sharad Pawar used track for athletes as a parking lot)