AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coronavirus cases in India: ದೇಶದಲ್ಲಿ 46,148 ಹೊಸ ಕೊವಿಡ್ ಪ್ರಕರಣ ಪತ್ತೆ, 979 ಮಂದಿ ಸಾವು

Covid 19: ದೇಶದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳು ಈಗ 3,02,79,331 ರಷ್ಟಿದೆ. ಪ್ರಸ್ತುತ 5,72,994 ಸಕ್ರಿಯ ಪ್ರಕರಣಗಳಿದ್ದು, 2,93,09,607 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯಗಳಲ್ಲಿ, ಕೇರಳ 10,905 ಹೊಸ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 9,974 ಪ್ರಕರಣಗಳಿವೆ.

Coronavirus cases in India: ದೇಶದಲ್ಲಿ 46,148 ಹೊಸ ಕೊವಿಡ್ ಪ್ರಕರಣ ಪತ್ತೆ, 979 ಮಂದಿ ಸಾವು
ರಾಂಚಿಯಲ್ಲಿ ಕಂಡ ಕೊವಿಡ್ ಜಾಗೃತಿ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Jun 28, 2021 | 10:43 AM

Share

ದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 46,148 ಹೊಸ ಕೊವಿಡ್ -19 ಪ್ರಕರಣಗಳನ್ನು ವರದಿ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 979 ಸಾವುಗಳು ಸಂಭವಿಸಿದ್ದು, ಏಪ್ರಿಲ್ 12 ರಿಂದ ಮೊದಲ ಬಾರಿಗೆ ದೈನಂದಿನ ಸಾವಿನ ಸಂಖ್ಯೆ 1,000 ಕ್ಕಿಂತ ಕಡಿಮೆಯಾಗಿದೆ. 100 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದ ಏಕೈಕ ರಾಜ್ಯವಾದ ಮಹಾರಾಷ್ಟ್ರದಲ್ಲಿ 411 ಸಾವು ದಾಖಲಿಸಿದೆ. ಒಟ್ಟಾರೆ ಸಾವಿನ ಸಂಖ್ಯೆ 3,96,730 ಕ್ಕೆ ತಲುಪಿದೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳು ಈಗ 3,02,79,331 ರಷ್ಟಿದೆ. ಪ್ರಸ್ತುತ 5,72,994 ಸಕ್ರಿಯ ಪ್ರಕರಣಗಳಿದ್ದು, 2,93,09,607 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯಗಳಲ್ಲಿ, ಕೇರಳ 10,905 ಹೊಸ ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 9,974 ಪ್ರಕರಣಗಳಿವೆ.

ಮುಂಬೈ ಮೂಲದ ಸಮೀಕ್ಷೆಯು ಮೊದಲ ಲಸಿಕೆ ಕಾರ್ಯನಿರ್ವಹಿಸುತ್ತಿದ್ದರೆ, ಎರಡನೆಯದು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸುತ್ತದೆ. ಜನವರಿ 1 ರಿಂದ ಜೂನ್ 17 ರವರೆಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಸಮೀಕ್ಷೆ ನಡೆಸಿದ ನಗರದ 2.9 ಲಕ್ಷ ಕೋವಿಡ್ ರೋಗಿಗಳಲ್ಲಿ, ಕೇವಲ 26 ಲಸಿಕೆ ಡೋಸ್ ಪಡೆದ ನಂತರ ಕೇವಲ 26 ಮತ್ತು ಮೊದಲ ಡೋಸ್ ನಂತರ 10,500 ಸೋಂಕು ತಗುಲಿದೆಯೆಂದು ವರದಿಯಾಗಿದೆ. ಬಿಎಂಸಿಯ ವಾರ್ ರೂಂ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಈ ಅವಧಿಯಲ್ಲಿ ಮುಂಬೈ 3.95 ಲಕ್ಷ ಕೋವಿಡ್ ಪ್ರಕರಣಗಳನ್ನು ದಾಖಲಿಸಿದೆ ಎಂದು ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ದೈನಂದಿನ ಚೇತರಿಕೆ ಈಗ ಸತತ 46 ನೇ ದಿನಕ್ಕೆ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ, ರಾಷ್ಟ್ರವ್ಯಾಪಿ ಚೇತರಿಕೆ ಪ್ರಮಾಣವು ಪ್ರಸ್ತುತ ಶೇ 96.75ರಷ್ಟಿದೆ.

ದೇಶದ 20 ಜಿಲ್ಲೆಗಳಲ್ಲಿ ಒಟ್ಟು ಸಕ್ರಿಯ ಕೊವಿಡ್ ಪ್ರಕರಣ ಶೇ 40 75 ಜಿಲ್ಲೆಗಳು ಇನ್ನೂ 10% ಕ್ಕಿಂತ ಹೆಚ್ಚು ಸಕಾರಾತ್ಮಕತೆಯನ್ನು ಹೊಂದಿವೆ, ಆದರೆ 92 ಜಿಲ್ಲೆಗಳು 5-10% ನಡುವೆ ಸಕಾರಾತ್ಮಕತೆಯನ್ನು ಹೊಂದಿವೆ. ಕೊವಿಡ್ -19 ರ ಒಟ್ಟು 5.95 ಲಕ್ಷ ಸಕ್ರಿಯ ಪ್ರಕರಣಗಳಲ್ಲಿ ಸುಮಾರು ಶೇ  40 ಪ್ರಕರಣಗಳು  20 ಜಿಲ್ಲೆಗಳಲ್ಲಿ ವರದಿ ಆಗಿದೆ.  ಮಹಾರಾಷ್ಟ್ರದ 12 ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳು ಮತ್ತು ಕೇರಳದ ಐದು ಜಿಲ್ಲೆಗಳಲ್ಲಿಸೋಂಕು ಹೆಚ್ಚಿನ ಪ್ರಮಾಣದಲ್ಲಿದೆ.

ಖಾಸಗಿ ಲಸಿಕೆ ಡೋಸ್ ಶೇ 75 ನಷ್ಟಿದೆ ಭಾರತದ ವಯಸ್ಕ ಜನಸಂಖ್ಯೆಯ ಕಾಲು ಭಾಗದಷ್ಟು (27%)  ಐದು ರಾಜ್ಯಗಳಲ್ಲಿ ಮುಕ್ಕಾಲು ಭಾಗದಷ್ಟು ಖಾಸಗಿ ಲಸಿಕೆ ಡೋಸ್  ಹೊಂದಿವೆ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದೆ. ಖಾಸಗಿ ಲಸಿಕೆ ಡೋಸ್ ಅತೀ ಹೆಚ್ಚು  ಪಡೆದಿರುವ ರಾಜ್ಯಗಳು, ಕರ್ನಾಟಕ, ಬಂಗಾಳ, ದೆಹಲಿ ಮತ್ತು ತೆಲಂಗಾಣ ಆಗಿದೆ.

ಭಾರತವು 32,36,63,297 ಡೋಸ್  ಕೊವಿಡ್ ಲಸಿಕೆಗಳನ್ನು ನೀಡಿದ್ದು ಅಮೆರಿಕವನ್ನು ಹಿಂದಿಕ್ಕಿದೆ.

ಇದನ್ನೂ ಓದಿ: ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಕೊವಿಡ್​ ಲಸಿಕೆ ಸಿದ್ಧ; ಜುಲೈ-ಅಗಸ್ಟ್​​ನಿಂದ 12 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಶನ್​​

Published On - 10:43 am, Mon, 28 June 21

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್