ಕೈಗಳಿಲ್ಲದ ಯುವಕ ಕಾಲಿನಲ್ಲಿಯೇ ಕೇರಂ ಆಟ ಆಡ್ತಾರೆ! ನೆಟ್ಟಿಗರ ಹೃದಯ ಗೆದ್ದ ವಿಡಿಯೋ ವೈರಲ್
ಇಲ್ಲೋರ್ವ ವ್ಯಕ್ತಿಗೆ ಕೈಗಳೆರಡೂ ಇಲ್ಲ. ಆದರೂ ಮನನೊಂದದೇ ನಮ್ಮ ಕಾಲುಗಳಲ್ಲಿಯೇ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಸ್ನೇಹಿತರೊಡನೆ ಕಾಲಿನಲ್ಲಿಯೇ ಕೇರಂ ಆಟ ಆಡುತ್ತಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ಜಗತ್ತಿನಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳೇ ಸಾಕ್ಷಿ. ಅದೆಷ್ಟೋ ಜನರು ಕಷ್ಟದ ಪರಿಸ್ಥಿತಿಯಲ್ಲೂ ಸಹ ಧೈರ್ಯದಿಂದ ಮನ್ನುಗ್ಗಿ ಸಾಧನೆಗಳನ್ನು ಮಾಡಿ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಸಾಧ್ಯವೇ ಇಲ್ಲ ಅಂದುಕೊಂಡಿದ್ದನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಸಾಧಿಸಿ ಕೀರ್ತಿಗೆ ಪಾತ್ರರಾಗಿದ್ದಾರೆ. ಕೈ-ಕಾಲುಗಳಿಲ್ಲದ ಅದೆಷ್ಟೋ ಜನರು ತಮ್ಮಲ್ಲಿ ಆತ್ಮಸ್ಥೈರ್ಯ ತುಂಬಿಕೊಂಡು, ಎಲ್ಲವನ್ನು ಪಡೆದು ಆರಾಮವಾಗಿರುವ ಸಾಮಾನ್ಯ ಜನರನ್ನೂ ಮೀರಿಸುವ ಸಾಧನೆ ಮಾಡಿದ್ದಾರೆ. ಇರ್ವೋರ್ವರ ಸಾಧನೆ ಕೂಡಾ ಪ್ರಶಂಸೆಗೆ ಪಾತ್ರವಾಗಿದೆ.
ಇಲ್ಲೋರ್ವ ವ್ಯಕ್ತಿಗೆ ಕೈಗಳೆರಡೂ ಇಲ್ಲ. ಆದರೂ ಮನನೊಂದದೇ ನಮ್ಮ ಕಾಲುಗಳಲ್ಲಿಯೇ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೈಗಳಿಲ್ಲ.. ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದರೆ ಅವರ ಮುಖದಲ್ಲಿ ಸಂತೋಷ ನೋಡಲು ಸಾಧ್ಯವೇ ಆಗುತ್ತಿರಲಿಲ್ಲ. ತಮ್ಮ ಸ್ನೇಹಿತರೊಡನೆ ಕಾಲಿನಲ್ಲಿಯೇ ಕೇರಂ ಆಟ ಆಡುತ್ತಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Watch
AMAZING TALENT???? Despite HANDICAP ?????@sanjg2k1 @ShashiTharoor @ShekharGupta @dhanyarajendran @bainjal @AshwiniUpadhyay @TajinderBagga @gauravcsawant pic.twitter.com/KTMxlxyzsm
— Rupin Sharma IPS (@rupin1992) June 27, 2021
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಯುವಕನ ಕುರಿತಾಗಿ ಶ್ಲಾಘನೆ ವ್ಯಕ್ತವಾಗಿದೆ. ಧೃತಿಗೆಡದೆ ಆತ್ಮಸ್ಥೈರ್ಯ ತುಂಬಿಕೊಂಡಿದ್ದರಿಂದಲೇ ಯುವಕನ ಮುಖದಲ್ಲಿ ನಗು ಕಾಣಿಸುತ್ತಿದೆ. ನಿಜವಾಗಿಯೂ ಯುವಕನ ಅದ್ಭುತ ಪ್ರತಿಭೆಯಿದು ಎಂದು ಹೇಳಿದ್ದಾರೆ. ಕೈಕಾಲುಗಳನ್ನು ಹೊಂದಿದ್ದವರೂ ಸಹ ಈ ಯುವಕನಷ್ಟು ಪ್ರತಿಭೆ ಹೊಂದಿರುವುದಿಲ್ಲ. ಕೇರಂ ಆಟವನ್ನು ಎಷ್ಟು ಚಂದವಾಗಿ ಆಡುತ್ತಿದ್ದಾರೆ.. ಎಂದು ಹೇಳಿದ್ದಾರೆ. ಇನ್ನೋರ್ವರು, ಕಾಲಿನಲ್ಲಿ ಆಟವಾಡುತ್ತಿದ್ದರು ಗುರಿ ಸರಿಯಾಗಿದೆ, ಏಕಾಗ್ರತೆಯೂ ಅಷ್ಟೇ ಇದೆ.. ವಾವ್! ಎಂದು ಪ್ರತಿಕ್ರಿಯೆ ನಿಡಿದ್ದಾರೆ.
ಸತತ ಪ್ರಯತ್ನದಿಂದ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಅದೆಷ್ಟೋ ಪ್ರತಿಭಾವಂತರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಕೆಲವೊಂದನ್ನು ನಂಬಲು ಕಷ್ವಾದರೂ ಸಹ ನಂಬಲೇ ಬೇಕಾದ ಸತ್ಯವಾಗಿರುತ್ತದೆ. ಇನ್ನು ಕೆಲವು ಹೃದಯ ಗೆದ್ದಿರುವ ವಿಡಿಯೋಗಳೂ ಇವೆ. ಇನ್ನು ಕೆಲವರಿಗೆ ಎಚ್ಚರಿಕೆಯಾಗಿಯೂ, ಒಳ್ಳೆಯ ಮಾದರಿಯ ಸಂದೇಶವನ್ನು ಸಾರುವ ವಿಡಿಯೋಗಳು ನೆಟ್ಟಿಗರಿಗೆ ಇಷ್ಟವಾಗುತ್ತವೆ.
ಇದನ್ನೂ ಓದಿ: