AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಪ್ತಪದಿಯ ಆರನೇ ಹೆಜ್ಜೆ ಇಡುತ್ತಿದ್ದಂತೆ ಮದುವೆಯೇ ಬೇಡವೆಂದ ವಧು; ಪರಿಪರಿಯಾಗಿ ಮನವೊಲಿಸಿದರೂ ವಿವಾಹಕ್ಕೆ ಒಪ್ಪಲೇ ಇಲ್ಲ

ಅಗ್ನಿಯ ಎದುರು ಸಪ್ತಪದಿ ತುಳಿಯುವುದು ಸಂಪ್ರದಾಯ. ಹೀಗೆ ಸಪ್ತಪದಿ ತುಳಿಯುವಾಗ ಪತಿಯೊಂದಿಗೆ ಆರನೇ ಹೆಜ್ಜೆ ಇಡುತ್ತಿದ್ದಂತೆ ವಧು ಮದುವೆ ಬೇಡ ಎಂದಿದ್ದಾಳೆ. ಯುವತಿ ತೆಗೆದುಕೊಂಡ ಏಕಾಏಕಿ ನಿರ್ಧಾರದಿಂದ ಎರಡೂ ಕುಟುಂಬಗಳು, ಬಂಧುಗಳು, ಸ್ನೇಹಿತರು ಕಕ್ಕಾಬಿಕ್ಕಿಯಾದರು.

ಸಪ್ತಪದಿಯ ಆರನೇ ಹೆಜ್ಜೆ ಇಡುತ್ತಿದ್ದಂತೆ ಮದುವೆಯೇ ಬೇಡವೆಂದ ವಧು; ಪರಿಪರಿಯಾಗಿ ಮನವೊಲಿಸಿದರೂ ವಿವಾಹಕ್ಕೆ ಒಪ್ಪಲೇ ಇಲ್ಲ
ಪ್ರಾತಿನಿಧಿಕ
TV9 Web
| Edited By: |

Updated on: Jun 28, 2021 | 3:24 PM

Share

ಮಹೋಬಾ: ಈಗಂತೂ ದೇಶಾದ್ಯಂತ ಮದುವೆ ಸೀಸನ್​. ವಿವಾಹಕ್ಕೆ ಸಂಬಂಧಪಟ್ಟ ಒಂದಿಲ್ಲೊಂದು ವಿಷಯಗಳು ಪ್ರತಿದಿನ ಸುದ್ದಿಯಾಗುತ್ತಲೇ ಇವೆ. ಕೆಲವು ಫನ್ನಿ ಅನ್ನಿಸಿದರೆ, ಮತ್ತೆ ಕೆಲವು ವಿಲಕ್ಷಣ ಎನ್ನಿಸುತ್ತವೆ. ಇತ್ತೀಚೆಗೆ ವಧುವೊಬ್ಬಳು ತನ್ನ ಬಾವಿ ಪತಿಗೆ ಕನ್ನಡಕ ಇಲ್ಲದೆ ಓದಲು ಬರುವುದಿಲ್ಲ ಎಂದು ಗೊತ್ತಾಗಿ ಮಂಟಪದಿಂದ ಎದ್ದು ಹೋಗಿದ್ದಳು. ಹಾಗೇ ಇನ್ನೊಬ್ಬಳು, ಮದುವೆಯದಿನ ಮದ್ಯಪಾನ ಮಾಡಿ ಬಂದ ಎಂಬ ಕಾರಣಕ್ಕೆ ಆ ವರನನ್ನು ತಿರಸ್ಕರಿಸಿದ್ದಳು. ಹೀಗೆ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ಅದರ ಮಧ್ಯೆ ಉತ್ತರ ಪ್ರದೇಶದ ಮೆಹೋಬಾದಲ್ಲಿ ವಧು ತನ್ನ ಮದುವೆ ದಿನ, ಸಪ್ತಪದಿಯ ಆರನೇ ಹೆಜ್ಜೆ ಮುಕ್ತಾಯವಾಗುತ್ತಿದ್ದಂತೆ ತನಗೆ ಮದುವೆ ಬೇಡ ಎಂದು ಹೊರನಡೆದಿದ್ದಾಳೆ.

ಅಗ್ನಿಯ ಎದುರು ಸಪ್ತಪದಿ ತುಳಿಯುವುದು ಸಂಪ್ರದಾಯ. ಹೀಗೆ ಸಪ್ತಪದಿ ತುಳಿಯುವಾಗ ಪತಿಯೊಂದಿಗೆ ಆರನೇ ಹೆಜ್ಜೆ ಇಡುತ್ತಿದ್ದಂತೆ ವಧು ಮದುವೆ ಬೇಡ ಎಂದಿದ್ದಾಳೆ. ಯುವತಿ ತೆಗೆದುಕೊಂಡ ಏಕಾಏಕಿ ನಿರ್ಧಾರದಿಂದ ಎರಡೂ ಕುಟುಂಬಗಳು, ಬಂಧುಗಳು, ಸ್ನೇಹಿತರು ಕಕ್ಕಾಬಿಕ್ಕಿಯಾದರು. ಪರಿಪರಿಯಾಗಿ ಕಾರಣ ಕೇಳಿದರು. ವಧುವಿನ ಮನವೊಲಿಸಿದರು. ಮಧ್ಯರಾತ್ರಿ ಪಂಚಾಯಿತಿ ಕೂಡ ನಡೆಯಿತು. ಆದರೆ ವಧು ಮಾತ್ರ ತನ್ನ ನಿರ್ಧಾರವನ್ನು ಬದಲಿಸಲೇ ಇಲ್ಲ. ವರ ಮತ್ತು ಆತನ ಸಂಬಂಧಿಕರಿಗೆ ಅಲ್ಲಿಂದ ತೆರಳದೆ ಬೇರೆ ಮಾರ್ಗವೇ ಇರಲಿಲ್ಲ.

ಮದುವೆ ಬೇಡ ಎನ್ನಲು ಕಾರಣವೇನು ಎಂದು ಕೇಳಿದರೆ ವಧು ಹೇಳುವುದು ಒಂದೇ ಮಾತು. ನನಗೆ ಆತ ಇಷ್ಟವಿಲ್ಲ ಎಂದು. ಆದರೆ ಹಾಗೊಮ್ಮೆ ಇಷ್ಟ ಇಲ್ಲದೆ ಇದ್ದರೆ ಮದುವೆಯವರೆಗೂ ಯಾಕೆ ಹೇಳಲಿಲ್ಲ? ಇನ್ನು ಮದುವೆಯಲ್ಲಿ ಬಾಕಿ ಸಂಪ್ರದಾಯ, ಆಚರಣೆಯಲ್ಲಿ ಯಾಕೆ ಮೌನವಾಗಿ ಪಾಲ್ಗೊಂಡೆ ಎಂದು ವರನ ಅಪ್ಪ ಪ್ರಶ್ನೆ ಮಾಡಿದರೆ, ಅದಕ್ಕೂ ವಧು ಸರಿಯಾಗಿ ಉತ್ತರ ಕೊಟ್ಟಿಲ್ಲ. ಉಳಿದ ಆಚರಣೆಯಲ್ಲೂ ಪಾಲ್ಗೊಂಡು, ಹಾರವನ್ನೂ ಬದಲಿಸಿಕೊಂಡು ಸಪ್ತಪದಿಯಲ್ಲಿ ಆರನೇ ಹೆಜ್ಜೆ ಇಡುತ್ತಿದ್ದಂತೆ ಮದುವೆ ಬೇಡವೇ ಬೇಡ ಎಂದ ವಧು ಎಲ್ಲರಿಗೂ ಒಗಟಾಗಿಯೇ ಇದ್ದಾಳೆ.

ಇದನ್ನೂ ಓದಿ: ವಿಜಯ್​ ಪ್ರಕಾಶ್​ ಅವರ ‘ಕಲಾನಿಧಿ’ ಸಂಗೀತೋತ್ಸವ ಮಿಸ್​ ಮಾಡಿಕೊಂಡ್ರಾ? ಇಲ್ಲಿದೆ ಫುಲ್​ ವಿಡಿಯೋ (Bride Calls Off Wedding After Sixth Phera In Uttar Pradesh)

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ