ಎಚ್ಚರ! ಜುಲೈ 25ರಂದು ಭೂಮಿಯ ಸಮೀಪದಲ್ಲಿ ಹಾದು ಹೋಗಲಿದೆ ತಾಜ್ ಮಹಲ್ಗಿಂತ 3 ಪಟ್ಟು ದೊಡ್ಡದಾದ ಕ್ಷುದ್ರಗ್ರಹ
ಈ ಕ್ಷುದ್ರಗ್ರಹ ಸುಮಾರು 220 ಮೀಟರ್ ವ್ಯಾಸವನ್ನು ಹೊಂದಿರುವ ಕ್ಷುದ್ರಗ್ರಹವಾಗಿದೆ. ಇದನ್ನು 2008 GO20 ಎಂದು ಹೆಸರಿಸಲಾಗಿದೆ. ಇದು ಸೌರಮಂಡಲದಲ್ಲಿ ಭೂಮಿಯ ನೆರೆಯ ಕ್ಷುದ್ರಗ್ರಹ ಎಂದು ವಿಜ್ಞಾನಿಗಳು ಹೇಳುತ್ತಾರೆ.
ತಾಜ್ಮಹಲ್ಗಿಂತ ಮೂರು ಪಟ್ಟು ದೊಡ್ಡದಾದ ಕ್ಷುದ್ರಗ್ರಹವು ಭೂಮಿ ಸಮೀಪದಲ್ಲಿಯೇ ಹಾದು ಹೋಗಲಿದೆ. ಇದು ಜುಲೈ 25ರಂದು ಭೂಮಿಗೆ ಹತ್ತಿರವಾಗಲಿದೆ. ಬೆಳಿಗ್ಗೆ 3 ಗಂಟೆಯ ಸಮಯದಲ್ಲಿಈ ಅಪಾಯಕಾರಿ ಕ್ಷುದ್ರಗ್ರಹವು(Asteroid) ಹಾದು ಹೋಗುತ್ತದೆ. ಈ ಕ್ಷುದ್ರಗ್ರಹ ಸುಮಾರು 220 ಮೀಟರ್ ವ್ಯಾಸವನ್ನು ಹೊಂದಿದ್ದು, ಇದನ್ನು 2008 GO20 ಎಂದು ಹೆಸರಿಸಲಾಗಿದೆ. ಇದು ಸೌರಮಂಡಲದಲ್ಲಿ ಭೂಮಿಯ ನೆರೆಯ ಕ್ಷುದ್ರಗ್ರಹ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕ್ಷುದ್ರಗ್ರಹವು ಭೂಮಿಯಿಂದ 4.7 ದಶಲಕ್ಷ ಕಿಲೋಮೀಟರ್ ದೂರದಲ್ಲಿ ಹಾದು ಹೋಗಲಿದೆ.
ವರದಿಗಳ ಪ್ರಕಾರ ಈ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುವ ಸಾಧ್ಯತೆ ತುಂಬಾ ಕಡಿಮೆ. ಕ್ಷುದ್ರಗ್ರಹವು ಸುರಕ್ಷಿತವಾಗಿ ಭೂಮಿಯ ಹತ್ತಿರದಲ್ಲಿಯೇ ಹಾದು ಹೋಗುವ ಆಶಯಗಳಿದ್ದರೂ, ಇದು ಅತ್ಯಂತ ಅಪಾಯಕಾರಿ ಎಂದು ನಾಸಾ ಹೇಳಿದೆ. ಇದು 150 ಮೀಟರ್ಗಿಂತ ಹೆಚ್ಚಿನ ವ್ಯಾಸವನ್ನು ಹೊಂದಿದ್ದು ಈ ಕ್ಷುದ್ರಗ್ರಹವು ಹಾದುಹೋಗುವ ಕಕ್ಷೆಯನ್ನು ಅಪೊಲೊ ಎಂದು ಕರೆಯಲಾಗುತ್ತದೆ.
ಈ ಕ್ಷುದ್ರಗ್ರಹ ಹೆಚ್ಚು ಅಪಾಯಕಾರಿ ಎಂಬುದಾಗಿ ನಾಸಾ ಗುರುತಿಸಿದ್ದು ಭೂಮಿಗೆ ಅಪ್ಪಳಿಸಿದರೆ ತುಂಬಾ ಹಾನಿಯುಂಟಾಗುವ ಸಂಭವವಿದೆ. ಅದಕ್ಕಾಗಿಯೇ ವಿಜ್ಞಾನಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇದು ಭೂಮಿಯ ಗುರುತ್ವಾಕರ್ಷಣೆಯೊಂದಿಗೆ ಘರ್ಷಣೆ ಆಗಬಹುದು. ಇದು ಭೂಮಿಗೆ ಅಪ್ಪಳಿಸಿದಲ್ಲಿ ಭೂಮಿಯ ಕೆಲವು ಭಾಗಗಳಿಗೆ ಭಾರೀ ಹಾನಿಯಾಗಬಹುದು.
ವಿಶೇಷ ಎಂದರೆ, ನಾಸಾ ಗ್ರಹಗಳ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದರಿಂದ ಅಪಾಯಕಾರಿಯಾಗಿರುವ ಕ್ಷುದ್ರಗ್ರಹಗಳನ್ನು ಮತ್ತೊಂದು ಕಡೆಗೆ ತಿರುಗಿಸುವ ಸಾಮರ್ಥ್ಯವನ್ನು ಹೊಂದಿದೆ. ನಾಸಾ, ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ ಮಿಷನ್ಗೆ (DART) ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಸಿದ್ಧವಾಗಿದೆ. ಇದು ಯಶಸ್ವಿಯಾದರೆ ಕ್ಷುದ್ರಗ್ರಹಗಳ ಅಪಾಯವನ್ನು ತಪ್ಪಿಸಿ, ಸುರಕ್ಷತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ:
World Asteroid Day 2021: ಇಂದು ಕ್ಷುದ್ರಗ್ರಹ ದಿನ; ಇದರಿಂದ ಉಂಟಾಗುವ ಹಾನಿಯ ಬಗ್ಗೆ ನೀವು ತಿಳಿಯಲೇಬೇಕು
ಭೂಮಿಯತ್ತ ನುಗ್ಗಿ ಬರುತ್ತಿದೆ ಬಸ್ ಗಾತ್ರದ ಕ್ಷುದ್ರ ಗ್ರಹ.. SW 2020 ನಾಳೆ ಗೋಚರ
Published On - 1:26 pm, Tue, 20 July 21