World Asteroid Day 2021: ಇಂದು ಕ್ಷುದ್ರಗ್ರಹ ದಿನ; ಇದರಿಂದ ಉಂಟಾಗುವ ಹಾನಿಯ ಬಗ್ಗೆ ನೀವು ತಿಳಿಯಲೇಬೇಕು
ಹಲವು ಸಂದರ್ಭಗಳಲ್ಲಿ ಅತೀದೊಡ್ಡ ಕ್ಷುದ್ರಗ್ರಹಗಳು ಭೂಮಿಯ ಸನಿಹದಲ್ಲಿಯೇ ಹಾದು ಹೋಗುತ್ತವೆ. ಇದು ಅಪಾಯವನ್ನು ತಂದೊಡ್ಡಬಹುದು ಅಥವಾ ಹಾನಿಯುಂಟು ಮಾಡಬಹುದು.
ಇಂದು ಜೂನ್ 30 ಕ್ಷುದ್ರಗ್ರಹ ದಿನವೆಂದು ಗುರುತಿಸಲಾಗಿದೆ. ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವದರಿಂದ ಉಂಟಾಗುವ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. 2016ರಲ್ಲಿ ಈ ದಿನದವನ್ನು ಆಚರಿಸುವ ಕುರಿತಾಗಿ ವಿಶ್ವಸಂಸ್ಥೆ ಒಪ್ಪಿಗೆ ನೀಡಿತು. ಆ ಬಳಿಕ ಪ್ರತೀ ವರ್ಷ ಜಗತ್ತಿನಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ.
ಸೌರಮಂಡಲದಲ್ಲಿ ಮಂಗಳ ಮತ್ತು ಗುರು ಗ್ರಹಗಳ ಮಧ್ಯದ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುತ್ತಿರುವ ಆಕಾಶ ಕಾಯಗಳನ್ನು ಕ್ಷುದ್ರ ಗ್ರಹಗಳು ಎಂದು ಗುರುತಿಸಲಾಗಿದೆ. ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಪ್ರಕಾರ, 2013ರಲ್ಲಿ ನಡೆದ ಚೆಲ್ಯಾಬಿನ್ಸ್ಕ್ ಘಟನೆಯಂತೆ ಕೆಲವೊಮ್ಮೆ ಭೂಮಿಗೆ ಅಪ್ಪಳಿಸುವ ಕ್ಷುದ್ರ ಗ್ರಹಗಳಿಂದ ಗಾಜು ಪುಡಿ-ಪುಡಿಯಾಗಿ ಬೀಳಬಹುದು, ದೊಡ್ಡ ಮಟ್ಟದ ಸ್ಪೋಟವೇ ಸಂಭವಿಸಬಹುದು ಅಥವಾ ಕಟ್ಟಡಗಳು ಕುಸಿದು ಬೀಳಬಹುದು. ಈ ಮಧ್ಯೆ ಜನರಿಗೆ ಗಂಭೀರ ಗಾಯಗಳಾಗಬಹುದು. ಈ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸಲು ಕ್ಷುದ್ರ ಗ್ರಹ ದಿನವನ್ನು ಆಚರಿಸಲಾಗುತ್ತದೆ.
ಹಲವು ಸಂದರ್ಭಗಳಲ್ಲಿ ಅತೀದೊಡ್ಡ ಕ್ಷುದ್ರ ಗ್ರಹಗಳು ಭೂಮಿಯ ಸನಿಹದಲ್ಲಿಯೇ ಹಾದು ಹೋಗುತ್ತವೆ. ಇದು ಅಪಾಯವನ್ನು ತಂದೊಡ್ಡಬಹುದು ಅಥವಾ ಹಾನಿಯುಂಟು ಮಾಡಬಹುದು. ಹಾಗಾಗಿಯೇ ಖಗೋಳ ಶಾಸ್ತ್ರಜ್ಞರು ಈ ಕುರಿತಂತೆ ಎಚ್ಚರವಹಿಸುತ್ತಾರೆ. ಈ ಕ್ಷುದ್ರ ಗ್ರಹಗಳು ಏನು? ಮತ್ತು ಈ ಕ್ಷುದ್ರ ಗ್ರಹಗಳಿಂದ ಏನೆಲ್ಲಾ ಪರಿಣಾಮಗಳು ಬೀರಬಹುದು ಎಂದು ನಿರಂತರವಾಗಿ ಸಂಶೋಧನೆ ನಡೆಸುತ್ತಲೇ ಇರುತ್ತಾರೆ.
ಕ್ಷುದ್ರಗ್ರಹದ ಅಪಾಯವನ್ನು ವಿಜ್ಞಾನಿಗಳು ಹೇಗೆ ಲೆಕ್ಕಾಚಾರ ಹಾಕುತ್ತಾರೆ ಎಂಬ ಪ್ರಶ್ನೆಗೆ ಕಳೆದ ತಿಂಗಳು ನಡೆದ ಘಟನೆ ಉದಾಹರಣೆ. ಅತ್ಯಂತ ಅಪಾಯಕಾರಿ ಕ್ಷುದ್ರಗ್ರಹವನ್ನು ಅಪೋಫಿಸ್ ಎಂದು ಗುರುತಿಸಿದರು. ಮೊದಲಿಗೆ ಅಪೋಫಿಸ್ ಚಲನೆಯನ್ನು ಪತ್ತೆಹಚ್ಚಲಾಯಿತು. ನಿಖರವಾದ ಕಕ್ಷೆಯ ವೀಕ್ಷಣೆಯೊಂದಿಗೆ ಹೊಸದಾದ ವೀಕ್ಷಣಾ ಅಭಿಯಾನದ ಮೂಲಕ ಚಲನೆಯನ್ನು ಗುರುತಿಸಲಾಯಿತು.
ಇದನ್ನೂ ಓದಿ:
Margherita Hack: ಖಗೋಳ ಭೌತಶಾಸ್ತ್ರಜ್ಞೆ ಮಾರ್ಗರಿಟಾ ಹ್ಯಾಕ್ 99ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ವಿಶೇಷ ನಮನ
ಭೂಮಿಯತ್ತ ನುಗ್ಗಿ ಬರುತ್ತಿದೆ ಬಸ್ ಗಾತ್ರದ ಕ್ಷುದ್ರ ಗ್ರಹ.. SW 2020 ನಾಳೆ ಗೋಚರ
Published On - 12:57 pm, Wed, 30 June 21